ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನ್ಸರ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಮತಿ ಭಾಗ್ಯಲಕ್ಷ್ಮಿ ಇವರು ರೋಗ ಬಂದ ಮೇಲೆ ಚಿಕಿತ್ಸೆಗೆ ಒಳಗಾಗುವ ಬದಲು ರೋಗ ಬಾರದೆ ಇರುವ ಹಾಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಕ್ಯಾನ್ಸರ್ ರೋಗದ ಮುನ್ಸೂಚನೆ ಮತ್ತು ಅದರ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.

Call us

Click Here

ಕಾರ್ಯಕ್ರಮದಲ್ಲಿ ಕೋಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಉಮೇಶ್ ನಾಯಕ್ ಇವರು ಉಪಸ್ಥಿತರಿದ್ದು ಉತ್ತಮ ಆರೋಗ್ಯಕ್ಕಾಗಿ ನಾವು ದೈಹಿಕ ಧೃಢತೆಯೊಂದಿಗೆ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿಯೂ ಪ್ರಬಲರಾಗಬೇಕು ಎಂದು ಮಾತನಾಡಿದರು.

ಕೋಡಿ ಆರೋಗ್ಯ ಕೇಂದ್ರದ ಜ್ಯೂನಿಯರ್ ಹೆಲ್ತ್ ಅಸಿಸ್ಟೆಂಟ್ ವಿದ್ಯಾಲಕ್ಷ್ಮಿ ಕುಷ್ಠ ರೋಗದ ಜಾಗೃತಿ ಕ್ರಮಗಳನ್ನು ತಿಳಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಮಾಲತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಣಕ ವಿಭಾಗದ ಉಪನ್ಯಾಸಕಿ ಹರ್ಷಿತ ಕಾರ್ಯಕ್ರಮ ನಿರೂಪಿಸಿ ಅತಿಥಿ ಗಣ್ಯರನ್ನು ವಂದಿಸಿದರು.

Leave a Reply