ಅಂತರ್ ವಿವಿ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್ ಆಳ್ವಾಸ್ ಕ್ರೀಡಾಪಟುಗಳ ದಿಗ್ವಿಜಯ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಚೆನ್ನೈನ ಎಸ್.ಆರ್.ಎಂ. ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಅಂತರ್ ವಿವಿ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಮಂಗಳೂರು ವಿವಿ ೧೧ನೇ ಬಾರಿ ತನ್ನ ಮುಡಿಗೇರಿಸಿಕೊಂಡಿತು.

Call us

Click Here

ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಎಲ್ಲಾ ೧೦ ಮಂದಿ ಆಟಗಾರರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಉಚಿತ ಶಿಕ್ಷಣ ಯೋಜನೆಯಡಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಈ ಚಾಂಪಿಯನ್‌ಶಿಪ್‌ನ್ನು ಮಂಗಳೂರು ವಿವಿಯು ಸತತ ೭ನೇ ಬಾರಿ ಜಯಿಸಿದ್ದಲ್ಲದೆ, ೧೭ ಬಾರಿ ಲೀಗ್ ಹಂತಕ್ಕೆ ತಲುಪಿತ್ತು. ಈ ಕ್ರೀಡಾಪಟುಗಳು ಮುಂದಿನ ವಾರ ಮೂಡಬಿದ್ರೆಯಲ್ಲಿ ನಡೆಯಲಿರುವ ೬೭ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಶ್ಲಾಘಿಸಿದ್ದಾರೆ.

Leave a Reply