ಕುಂದಾಪುರ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕುಂದಾಪುರ ತಾಲೂಕು ಘಟಕದ ವತಿಯಿಂದ ಆದಿವಾಸಿ ಬುಟಕಟ್ಟು ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಪಂಚಾಯತ್ ಎದುರು ಸಾಂಕೇತಿಕ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಸಂಚಾಲಕ ಶ್ರೀಧರ ನಾಡಾ ಮಾತನಾಡಿ ಜಿಲ್ಲೆಯಲ್ಲಿ ವಾಸವಾಗಿರುವ ವಿವಿಧ ಬುಡಕಟ್ಟು ಸಮುದಾಯದ ಜನರು ಕಳೆದ ಹಲವಾರು ವರ್ಷಗಳಿಂದ ಭೂಮಿ, ಮನೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಬುಡಕಟ್ಟು ಸಮುದಾಯದ ಎಲ್ಲಾ ಪಂಗಡದ ಜನ ಸಂಘಟಿತರಾಗಿದ್ದಾರೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಹತ್ಕೊತ್ತಾಯವನ್ನು ಆರಂಭಿಸಿದ್ದೇವೆ ಎಂದರು.
[quote bgcolor=”#ffffff”]ಉಡುಪಿ ಜಿಲ್ಲೆಯ ಹಲಸ ಸಮುದಾಯವನ್ನು ಹಲಸರು ಎಂದು ಪರಿಗಣಿಸಿ ಪ.ಪಂಗಡಕ್ಕೆ ಸೇರಿಸುವುದು, ಕುಡುಬಿ-ಕುಣಬಿ ಸಮುದಾಯವನ್ನು ಪ.ಪಂಗೆ ಸೇರಿಸುವುದು, ಕಂದಾಯ ಭೂಮಿಯಲ್ಲಿ ವಾಸವಾಗಿರುವ ಹಾಗೂ ಅರಣ್ಯವಾಸಿ ಹಕ್ಕುಪತ್ರ ವಂಚಿತ ಬುಡಕಟ್ಟು ಕುಟುಂಬಗಳಿಗೆ ಹಕ್ಕುಪತ್ರ ನೀಡುವುದು, ಮುದೂರು ಉದಯನಗರದಲ್ಲಿ ಸರಕಾರಿ ಶಾಲೆ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದರು.[/quote]
ಪ್ರತಿಭಟನೆಯಲ್ಲಿ ತಾಲೂಕು ಸಹ ಸಂಚಾಲಕರಾದ ನಾಗರಾಜ ಏಳಿಗೆ, ಗೌರಿ ನಾರ್ಕಳಿ, ಶಿವರಾಮ ದೇವರಬಾಳು, ಸುರೇಶ ಕಾರಬೈಲು, ಸಿಪಿಎಂ ಮುಖಂಡರುಗಳಾದ, ವೆಂಕಟೇಶ ಕೋಣಿ, ದಾಸ ಭಂಡಾರಿ , ಸುರೇಶ್ ಕಲ್ಲಾಗರ, ರಾಜು ಪಡುಕೋಣೆ ಮೊದಲಾದವರು ಭಾಗವಹಿಸಿದ್ದರು.
ಪ್ರತಿಭಟನೆಯ ಬಳಿಕ ಕುಂದಾಪುರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.