ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೈಸೂರಿನ ಎನ್.ಐ.ಇ ಕಾಲೇಜು ಆಡಿಟೋರಿಯಂನಲ್ಲಿ ಇತ್ತಿಚಿಗೆ ಜರುಗಿದ ಕರ್ನಾಟಕ ರಾಜ್ಯ ಜ್ಯೂನಿಯರ್, ಸಬ್ ಜ್ಯೂನಿಯರ್ ಹಾಗೂ ಮಾಸ್ಟರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ – 22ರ ಜ್ಯೂನಿಯರ್ ವಿಭಾಗದಲ್ಲಿ ಸೌಮ್ಯ ಬಿ. ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದಿದ್ದಾಳೆ.
ಪವರ್ ಲಿಫ್ಟಿಂಗ್ ಜ್ಯೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ 63 ಕೆ.ಜಿ ಭಾರವನ್ನು ಎತ್ತುವ ಮೂಲಕ ಸೌಮ್ಯ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾಳೆ. ಈಕೆ ಬೈಂದೂರು ತಗ್ಗರ್ಸೆಯ ಬಾಬು ಪೂಜಾರಿ ಹಾಗೂ ಮೋಹಿನಿ ದಂಪತಿಗಳ ಪುತ್ರಿಯಾಗಿದ್ದು, ಬ್ರಹ್ಮಾವರ ವೀರಮಾರುತಿ ಜಿಮ್’ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ.