ಬಸ್ಸಿನಲ್ಲಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಯುವಕರ ಬಂಧನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ:
ಉಡುಪಿಯಿಂದ ಕುಂದಾಪುರಕ್ಕೆ ಭಾನುವಾರ ಹೊರಟ ಖಾಸಗಿ ಬಸ್ಸಿನಲ್ಲಿ ಯುವತಿಯರಿಗೆ ಕಿರುಕುಳ ನೀಡಿದ ಯುವಕರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಪು ನಿವಾಸಿ ಕೀರ್ತಿ, ಉಚ್ಚಿಲ ನಿವಾಸಿಗಳಾದ ನವೀತ ಮತ್ತು ಸಚೀತಾ ಬಂಧಿತರು.

Call us

Click Here

ಉಡುಪಿಯಿಂದ ಕುಂದಾಪುರಕ್ಕೆ ಹೊರಟ ಬಸ್ಸಿನಲ್ಲಿ ಮೂರ್ನಾಲ್ಕು ಯುವತಿಯರು ಏರಿ ಬ್ರಹ್ಮಾವರ ಕಡೆ ಹೊರಟಿದ್ದರು. ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಿದ್ದು, ಮೂವರು ಯುವಕರು ಉಡುಪಿಯಲ್ಲೇ ಹತ್ತಿದ್ದರು. ಬಸ್ ಉಡುಪಿ ಬಿಟ್ಟ ನಂತರ ಯುವಕರು ಪುಂಡಾಟ ಶುರು ಮಾಡಿ ಯುವತಿಯರ ಜಡೆ ಎಳೆದು, ಮೈ ಕೈ ಮುಟ್ಟಲು ಪ್ರಯತ್ನಿಸಿ ಕಿರುಕುಳ ನೀಡಲು ಶುರು ಮಾಡಿದ್ದರು. ಬಸ್‌ನಲ್ಲಿ ಅಷ್ಟೇನು ಪ್ರಯಾಣಿಕರು ಇಲ್ಲದ ಕಾರಣ ಭಯಗೊಂಡ ಯುವತಿಯ ಸಂತೆಕಟ್ಟೆಯಲ್ಲಿ ಬಸ್ ಇಳಿದಿದ್ದಾರೆ.

ಸಂತೆಕಟ್ಟೆಯಲ್ಲಿ ಮತ್ತೊಂದು ಬಸ್ ಏರಿ ಯುವತಿಯರು ಪ್ರಯಾಣ ಮುಂದುವರಿಸಿದ್ದಾರೆ. ಬಸ್ ನಿರ್ವಾಹಕನಿಗೆ ತಮಗಾದ ಕಿರುಕುಳ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವತಿಯರು ಪ್ರಯಾಣಿಸುತ್ತಿದ್ದ ಬಸ್ ಕಂಡಕ್ಟರ್ ಅಲ್ಲಿ ಕುಂದಾಪುರ ಬಸ್ ಏಜೆಂಟರಿಗೆ ವಿಷಯ ಮುಟ್ಟಿಸಿ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ಸಿಗುವಂತೆ ಮಾಡಿದ್ದು, ಪೊಲೀಸರು ವಿಷಯ ಗಂಭೀರವಾಗಿ ಪರಿಗಣಿಸಿ ಯುವಕರನ್ನು ಬಂಧಿಸಿದ್ದಾರೆ.

Leave a Reply