ಕೆ. ಪುಂಡಲೀಕ ನಾಯಕ್ ಅವರಿಗೆ ಬೇಂದ್ರೆ ನುಡಿಸಿರಿ ಪ್ರಶಸ್ತಿ ಪ್ರದಾನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಚೇತನ ಫೌಂಡೇಶನ್ ಕರ್ನಾಟಕ ಇವರ ಸಹಯೋಗದಲ್ಲಿ ನಡೆದ ಧಾರವಾಡ ನುಡಿಸಡಗರ ಕಾರ್ಯಕ್ರಮದಲ್ಲಿ ಕವಿ, ಲೇಖಕ ನಾಯ್ಕನಕಟ್ಟೆ ಕೆ. ಪುಂಡಲೀಕ ನಾಯಕ್ (ಎಡಕ್ಕೆ) ಇವರಿಗೆ ಕರ್ನಾಟಕ ವಿವಿಯ ಕುಲಪತಿ ಪ್ರೋ. ಕೆ. ಬಿ. ಗುಡಸಿ ಅವರು ಬೇಂದ್ರೆ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಿದರು.

Call us

Click Here

ಸಮಾರಂಭದ ವೇದಿಕೆಯಲ್ಲಿ ಪ್ರೋ. ನಿಜಲಿಂಗಪ್ಪ ಮಟ್ಟಿಹಾಳ, ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆ ಕ.ವಿ.ವಿ ಮುಖ್ಯಸ್ಥ ಡಾ. ಅರ್. ಸಿ. ಹಿರೇಮಠ, ಗದಗ. ಡಾ.ವಿ.ಬಿ. ಪ್ರತಿಷ್ಠಾನದ ಅಧ್ಯಕ್ಷ ಡಾ. ವಿ. ವಿ ಹಿರೇಮಠ, ಹಿರಿಯ ಸಾಹಿತಿ ಸುರೇಶ ಕೋರಕೊಪ್ಪ ಬೆಳಗಾವಿ, ಧಾರವಾಡದ ಕನಕ ಅಧ್ಯಯನ ಪೀಠದ ಸಂಯೋಜಕರು ಡಾ. ಹನುಮ ಗೌಡ, ಚೇತನ ಫೌಂಡೇಶನ್ ಅಧ್ಯಕ್ಷ ಹಾಗೂ ಧಾರವಾಡ ನುಡಿಸಡಗರ ಸಂಯೋಜಕ ಚಂದ್ರಶೇಖರ ಮಾಡಲಗೇರಿ, ಧಾರವಾಡ ನುಡಿಸಡಗರ ಸಂಚಾಲಕ ಪೀರಸಾಬ ನದಾಫ್ ಇದ್ದರು .

Leave a Reply