ಬೆಂಗಳೂರಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಸಂಪನ್ನ, ಸಾವಿರಾರು ಕುಂದಗನ್ನಡಿಗರು ಭಾಗಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು,ಜು.29:
ನಗರದ ಅತ್ತಿಗುಪ್ಪೆಯಲ್ಲಿನ ಬಂಟರ ಸಂಘದ ಹಾಲಿನಲ್ಲಿ ‘ವಿಶ್ವಕುಂದಾಪ್ರ ಕನ್ನಡ ದಿನ’ವನ್ನು ಅದ್ದೂರಿಯಾಗಿ ಆಚರಿಸಲಾಯಿತು. ವಿಶೇಷ ಕಾರ್ಯಕ್ರಮಗಳು, ಕಿಕ್ಕಿರುದು ತುಂಬಿದ ಸಭಾಂಗಣ ಕುಂದಾಪ್ರ ಕನ್ನಡದ ದಿನವನ್ನು ಹಬ್ಬವನ್ನಾಗಿಸಿತ್ತು.

Call us

Click Here

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ ಕುಂದಾಪ್ರದ ಸಂಸ್ಕ್ರತಿಯನ್ನ ಸದುದ್ದೇಶದಿಂದ ವಿಜ್ರಂಭಣೆಯಿಂದ ಆಚರಿಸಿ. ಆದರೆ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಕುಂದಾಪುರ ಭಾಗದಲ್ಲಿ ಸಾಕಷ್ಟು ಜನ ಸಾಧಕರಿದ್ದಾರೆ. ಅವರನ್ನ ಕಂಡು ಖುಷಿಪಟ್ಟರಷ್ಟೇ ಸಾಲದು ಅವರಂತೆ ಆಗಲು ಪ್ರಯತ್ನಿಸಬೇಕು ಎಂದರು.

ಪ್ರಸಿದ್ಧ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು. ಪ್ರೋ. ಬಾಲಕೃಷ್ಣ ಶೆಟ್ಟಿ ಅವರು ‘ನುಡಿ, ಚಂದಾ ಮುಡಿ’ಯಲ್ಲಿ ಕುಂದಾಪ್ರದ ಸೊಗಡನ್ನು ತೆರೆದಿಟ್ಟರು. ಈ ವೇಳೆ ಅಬ್ಬಿಗೊಂದು ಕಾಗ್ದ ಸ್ವರ್ಧೆಯ ಆಯ್ದ ಪತ್ರಗಳ ಸಂಕಲನ ಅಗ್ರಣಿ ಪ್ರಕಾಶನದಿಂದ ಪ್ರಕಟಿಸಿದ ‘ಕಾಗ್ದದ್ ದೋಣಿ’ ಬಿಡುಗಡೆಗೊಂಡಿತು. ದೀಪಕ್ ಶೆಟ್ಟಿ ಬಾರ್ಕೂರು ಅವರು ಕುಂದಾಪ್ರ ಕನ್ನಡದ ಬಗೆಗಿನ ಹತ್ಕೊತ್ತಾಯವನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಆರ್. ಉಪೇಂದ್ರ ಶೆಟ್ಟಿ, ಬಿಬಿಎಂಪಿ ಅಧಿಕಾರಿ ನಾಗರಾಜ ಸೇರಿಗಾರ್, ಚಿತ್ರನಟರಾದ ರಘು ಪಾಂಡೇಶ್ವರ, ಪ್ರಮೋದ್ ಶೆಟ್ಟಿ, ಕುಂದಾಪ್ರ ಕನ್ನಡದ ಕಲಾವಿದ ಮನು ಹಂದಾಡಿ, ಕಾರ್ಯಕ್ರಮದ ಸಂಘಟಕರಾದ ನರಸಿಂಹ ಬೀಜಾಡಿ ಉಪಸ್ಥಿತರಿದ್ದರು.

ಯುವ ಗಾಯಕಿ ಸಾನ್ವಿ ಶೆಟ್ಟಿ ಅವರು ಕುಂದಾಪ್ರ ಕನ್ನಡದ ಗೀತೆಯನ್ನು ಹಾಡಿ ಜನರನ್ನು ರಂಜಿಸಿದರು. ಕುಂದಾಪ್ರ ಕನ್ನಡದ ಕಲಾವಿದರಾದ ಚೇತನ್ ನೈಲಾಡಿ, ಚೇತನ್ ಆಚಾರ್ಯ ಗುಂಡ್ಮಿ, ಚೇತನ್ ಪಾಂಡೇಶ್ವರ ಅವರ ತಂಡದಿಂದ ಹೆಂಗ್ಸರ್ ಪಂಚೇತಿ ಎಂಬ ಗ್ರಾಮೀಣ ಸಹಜ ಬದುಕಿನ ಮಹಿಳೆಯರ ಮಾತುಕತೆಯನ್ನು ತೆರೆದಿಟ್ಟರು. ಕುಂದಾಪ್ರ ಕನ್ನಡದ ರಾಯಭಾರಿ ಮನು ಹಂದಾಡಿ ಅವರ ಕುಂದಾಪ್ರ ಕನ್ನಡದ ಹಾಸ್ಯ ಇಡೀ ಸಭಾಂಗಣವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತ್ತು. ಕುಂದಾಪ್ರ ಕಟ್ಕಟ್ಲೆ ಕಾರ್ಯಕ್ರಮದ ಮೂಲಕ ಈ ಭಾಗದ ಮಹತ್ವದ ಸಂಸ್ಕ್ರತಿಯನ್ನು ಪರಿಚಯಿಸಲಾಯ್ತು. ನವರಾತ್ರಿಯ ಸಮಯದಲ್ಲಿನ ಕಟ್ಟೆ ಪೂಜೆ, ಹುಲಿ ವೇಷ ಆರ್ಭಟವನ್ನ ಪರಿಚಯಿಸಲಾಯ್ತು. ಬಲೀಂದ್ರ ಪೂಜೆಯ ಮೌಲ್ಯವನ್ನು ಕಾರ್ಯಕ್ರಮದ ಮೂಲಕ ತಿಳಿಸಲಾಯ್ತು. ಇದೀಗ ವಿರಳವಾಗಿ ಕಾಣ ಸಿಗುವ ವಸಂತ ಕುಣಿತದ ಹೌದರಾಯನ ವಾಲಗದ ಕುಣಿತವನ್ನು ಬೆಂಗಳೂರನಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಭಜನಾ ಕುಣಿತ, ವೀರ ಅಭಿಮನ್ಯು ಕಾಳಗದ ಯಕ್ಷಗಾನದಲ್ಲಿ ಅಭಿಮನ್ಯುನ್ನು ಯುದ್ದಭೂಮಿಗೆ ಸುಭದ್ರೆಯ ನೋವಿನಿಂದಲೇ ಕಳಿಸಿಕೊಡುವ ಸಂದರ್ಭದ ಯಕ್ಷಗಾನ ತುಣುಕನ್ನು ಪ್ರದರ್ಶಿಸಲಾಯಿತು. ಕುಂದಾಪ್ರ ಕನ್ನಡಿಗರು ನಿರ್ಮಿಸಿದ ಮಂಡ್ಯ ಟು ಮಂದರ್ತಿ ಹಾಗೂ ಕರ್ಕಾಟಿ ಅಮಾಸಿ ಕಿರುಚಿತ್ರ ಪ್ರದರ್ಶನಗೊಂಡಿತು. ವಿವಿಧ ಕಿರುಚಿತ್ರಗಳ ಟ್ರೇಲರ್ ಪ್ರದರ್ಶನಗೊಂಡಿತು. ಬಳಿಕ ಯಕ್ಷಗಾನ ಕಲಾವಿದರಿಂದ ‘ಕುಶಲವ’ ಪ್ರಸಂಗ ಪ್ರದರ್ಶನಗೊಂಡಿತು.

Click here

Click here

Click here

Click Here

Call us

Call us

ಕಾರ್ಯಕ್ರಮದ ಆರಂಭದಿಂದ ಅತ್ಯಂದ ತನಕ ಬಂಟರ ಸಂಘದ ಸಭಾಂಗಣ ಭರ್ತಿಯಾಗಿತ್ತು. ಸಭಾಂಗಣದ ಹೊರಕ್ಕೆ ಆಸನದ ವ್ಯವಸ್ಥೆ ಮಾಡಿ ಎಲ್.ಇ.ಡಿ ವಾಲ್ ಅಳವಡಿಸಲಾಗಿತ್ತು. ಇನ್ನು ಸಂಜೆಯ ತಿನಿಸು ಹಾಗೂ ರಾತ್ರಿಯ ಊಟಕ್ಕಾಗಿ ಸಿದ್ಧಪಡಿಸಿದ ವಿಶೇಷ ಖಾದ್ಯಗಳನ್ನು ಜನರು ಸವಿದರು.

ಅಜಿತ್ ಶೆಟ್ಟಿ ಉಳ್ತೂರು, ರಾಘವೇಂದ್ರ ಕಾಂಚನ್, ದೀಪಕ್ ಶೆಟ್ಟಿ ಬಾರ್ಕೂರು ಮೊದಲಾದವರು ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ:
► ಜು.28ರಂದು ಕುಂದಾಪುರ, ಬೆಂಗಳೂರು, ದುಬೈ ಸೇರಿದಂತೆ ವಿವಿಧೆಡೆ ಕುಂದಾಪ್ರ ಕನ್ನಡ ದಿನಾಚರಣೆ – https://kundapraa.com/?p=60948 .
► ಕುಂದಾಪ್ರ ಕನ್ನಡ ಭಾಷಿಕರ ಸಂಭ್ರಮ: ವಿಶ್ವ ಕುಂದಾಪ್ರ ಕನ್ನಡ ದಿನ – https://kundapraa.com/?p=50852 .
► ಮಂಗಳೂರು ವಿ.ವಿಯಿಂದ ‘ಕುಂದಾಪ್ರ ಕನ್ನಡ ಅಧ್ಯಯನ ಪೀಠ’ ಆರಂಭಕ್ಕೆ ನಿರ್ಧಾರ – https://kundapraa.com/?p=60160 .

Leave a Reply