ಮಂದಾರಬೆಟ್ಟು – ಹೊದ್ರಾಳಿ ಯುವಕರಿಂದ ವನಮಹೊತ್ಸವದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶ್ರೀ ನಾಗಬನ ಹಾಗೂ ಮಂದಾರಬೆಟ್ಟು ಹೈಗುಳಿ ಸೇವಾಸಂಘ ಮತ್ತು ವಿರಾಟ್ ಫ಼್ರೆಂಡ್ಸ್ ಹೊದ್ರಾಳಿ ತಂಡದಿಂದ ವನಮಹೊತ್ಸವ ಆಚರಣೆಯೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಆಚರಿಸಲಾಯಿತು.

Call us

Click Here

ಕುಂದಾಪುರ ವಲಯದ ಇರುವ ಎಲ್ಲಾ ಶಾಲೆಗಳಿಗೆ ಗಿಡ ನೀಡುವುದರ ಮೂಲಕ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಮೊಗವೀರ, ಕಾರ್ಯದರ್ಶಿ ಸಂದೀಪ್ ಮೊಗವೀರ, ದೈವಸ್ಥಾನದ ಪದಾಧಿಕಾರಿಗಳಾದ ರಾಘವೇಂದ್ರ ಕುಂದರ್, ಪ್ರದೀಪ್ ಮೊಗವೀರ, ಜೊತೆ ಕಾರ್ಯದರ್ಶಿಗಳಾದ ಆದಿ, ಸಂಘದ ಸದಸ್ಯರಾದ ಶರತ್ ಮೊಗವೀರ, ಪವನ್ ಕುಮಾರ, ರಾಜೇಶ್ ಬೋಟ್, ರಾಘು ಕರ್ಕಾಡಿ , ಕುಮಾರಣ್ಣ, ಸುಚೀತ್ ಭಾಗವಹಿಸಿದ್ದರು.

ಬಳಿಕ ಸಾಮಾಜಿಕ ಅರಣ್ಯ ಇಲಾಖೆ ಕುಂದಾಪುರ ವಲಯ ಹಾಗೂ ಗ್ರಾಮ ಪಂಚಾಯತ್ ಬೀಜಾಡಿಯ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳ್ಳೇನ್ ಕೆರೆಯ ದಡದಲ್ಲಿ ಹಾಗೂ ನೀರೆಶ್ವಾಲ್ಯ ದೇವಸ್ಥಾನದ ಕೆರೆಯ ದಡದಲ್ಲಿ ಗಿಡಗಳನ್ನು ನೇಡಲಾಯಿತು. ಈ ಕಾರ್ಯಕ್ರಮದಲ್ಲಿ ಬೀಜಾಡಿ ಪಂಚಾಯತ್ ಅಧ್ಯಕ್ಷರಾದ ಸುಮತಿ, ಪಿಡಿಒ ಗಣೇಶ್, ಸದಸ್ಯರಾದ ವಾದಿರಾಜ್ ಹೆಬ್ಬಾರ, ನಾರಾಯಣ್, ವಿರಾಟ್ ಫ್ರೆಂಡ್ಸ್ ಅಧ್ಯಕ್ಷರಾದ ರಾಘವೇಂದ್ರ ಮೊಗವೀರ, ಕಾರ್ಯದರ್ಶಿ ಸಂದೀಪ್ ಮೊಗವೀರ ಸಾಮಾಜಿಕ ಅರಣ್ಯ ಇಲಾಖೆ ಕುಂದಾಪುರ ವಲಯ ಇದರ ರೆಂಜರ್ ತುಲಸಿ ಭಾವವಹಿಸಿದ್ದರು. ವಿರಾಟ್ ಫ್ರೆಂಡ್ಸ್ ಹೊದ್ರಾಳಿ ಇದರ ಸದಸ್ಯರಾದ ರಾಘವೇಂದ್ರ ಕುಂದರ್, ಶರತ್, ರವಿ , ಪ್ರದೀಪ್, ಪವನ್, ರಾಜೇಶ್, ಕುಮಾರಣ್ಣ, ಸುಚೀತ್, ಆದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಸಂಜೆ ಹೊದ್ರಾಳಿ ಊರ ಮಹಿಳೆಯರಿಗಾಗಿ ಕುಂದಾಪ್ರ್ ಕನ್ನಡದ ಕ್ವೀಝ್ ಕಾರ್ಯಕ್ರಮವನ್ನು ಹೊದ್ರಾಳಿ ಮಂದಾರಬೆಟ್ಟು ದೈವಸ್ಥಾನದಲ್ಲಿ ಆಯೋಜಿಸಲಾಗಿತ್ತು. ದೈವಸ್ಥಾನದ ಮುಕ್ತೆಸರರಾದ ಗಣೇಶ್ ಅರಸ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ ನಡೆದ ಆಸಾಡಿ ಹಬ್ಬ ಎಂಬ ಭಾಷಣ ಸ್ಪರ್ಧೆಯಲ್ಲಿ ಶ್ರೇಯಸ್ ಹೊದ್ರಾಳಿ ಪ್ರಥಮ ಸ್ಥಾನವನ್ನು ಪಡೆದರು. ಹಾಗೆ ಮಹಿಳೆಯರಿಗೆ ನಡೆದ ಕುಂದಾಪ್ರ ಕನ್ನಡದ ಕ್ವೀಝ್ ಕಾರ್ಯಕ್ರಮದಲ್ಲಿ ಶಾಂತಾ ಹೊದ್ರಾಳಿ ಅವರ ನೇತೃತ್ವದ ಚಟ್ಟಿ ಸಿಬ್ಲ್ ತಂಡ ಪ್ರಥಮ ಸ್ಥಾನ ಹಾಗೂ ಚೈತ್ರಾ ಹೊದ್ರಾಳಿ ಅವರ ನೇತೃತ್ವದ ಗೆರ್ಸಿ ತಂಡ ದ್ವೀತಿಯ ಸ್ಥಾನ ಹಾಗೂ ಅಶ್ವಿನಿ ಹೊದ್ರಾಳಿ ನೇತೃತ್ವದ ಗೈಟಿ ತಂಡ ತೃತೀಯ ಸ್ಥಾನ ಪಡೆಯಿತು.

Leave a Reply