ಕೋಟ: ಪ್ರಜಾಪ್ರಭುತ್ವದ ಘನತೆ ಸಾರುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ – ವಿನಯ ಕುಮಾರ್ ಸೊರಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೋಟ ಹಾಗೂ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರ್ರೋತ್ಸವದ ಅಮೃತಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರ ಯೋಧರ ತ್ಯಾಗ ಬಲಿದಾನವನ್ನು ನೆನಪಿಸುವ ಹಾಗೂ ಶಾಂತಿ ಸಾಮರಸ್ಯದ ದೇಶಪ್ರೇಮದ ಸಂದೇಶವನ್ನು ಸಾರುವ ಸಲುವಾಗಿ ಸಾಲಿಗ್ರಾಮದಿಂದ ತೆಕ್ಕಟ್ಟೆವರೆಗೆ ಕಾಲ್ನಡಿಗೆ ಜಾಥಾ ಜರುಗಿತು.

Call us

Click Here

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಜಾಥಾ ಬಳಿಕ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮತ್ತೊಮ್ಮೆ ನೆನಪಿಸುವ ಹಾಗೂ ಪ್ರಜಾಪ್ರಭುತ್ವವನ್ನು ಸಾರುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ

ಕಾಂಗ್ರೆಸ್ ಭಾರತ ಸ್ವಾತಂತ್ರ್ಯಕ್ಕಾಗಿ ಬಹುದೊಡ್ಡ ಕೊಡುಗೆ ನೀಡಿದೆ. ಅದರ ಜೊತೆಗೆ ಕಳೆದ 60 ವರ್ಷಗಳಿಂದ ಸಂವಿಧಾನ ಬದ್ಧವಾದ ಆಡಳಿತ ನಡೆಸಿಕೊಂಡು ಬಂದಿದೆ. ಬಡವರ ಬಗ್ಗೆ ಕಾಳಜಿ ಕಾರ್ಯಕ್ರಮಗಳನ್ನು ಸದಾ ನೀಡಿದೆ. ಬಿಜೆಪಿ ಗಾಂಧಿ ಹತ್ಯೆಗೈದ ಗೋಡ್ಸೆ ದೇವಾಲಯ ಕಟ್ಟಲು ಶ್ರಮಿಸುತ್ತದೆ, ನೆಹರು, ಇಂದಿರಾ, ರಾಜೀವ್ ಗಾಂಧಿ ಹೀಗೆ ಹಲವು ನಾಯಕರುಗಳು ಈ ದೇಶಕ್ಕಾಗಿ ಸದಾ ಶ್ರಮಿಸಿದ ನಾಯಕರುಗಳು ಆದರೆ ಇಂಥಹ ಮಹಾನ್ ನಾಯಕರಗಳ ಬಗ್ಗೆ ಈಗಿನ ಆಡಳಿತ ಪಕ್ಷ ಗುಬೆ ಕುರಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದರು.

ಕೋಟ ಬ್ಲಾಕ್ ಕಾಂಗ್ರೆಸ್ ಇಂದಿರಾ ಕಚೇರಿಯಿಂದ ಹೊರಟು ಸಾಲಿಗ್ರಾಮದ ಪೇಟೆಯ ಆಂಜನೇಯ ದೇವಸ್ಥಾನದ ಮಾರ್ಗದ ಮೂಲಕ ಹಾದುಹೋಗಿ ಕೋಟತಟ್ಟು ಕೋಟಮಾರ್ಗವಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ನ ತೆಕ್ಕಟ್ಟೆಯಲ್ಲಿ ಪಾದಯಾತ್ರೆ ಸಮಾಪನಗೊಂಡಿತು.

ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಎ. ಗಫೂರ್, ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ. ಕುಂದರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರುಗಳಾದ ದೇವಕಿ ಸಣ್ಣಯ್ಯ, ಮಮತಾ ದೇವಾಡಿಗ, ಹೆರಿಯಣ್ಣ ಚಾತ್ರಬೆಟ್ಟು, ರೋನಿ ಉಡುಪಿ, ರೋಶನಿ ಒಲೆವೇರ, ಇಚ್ಛಿತಾರ್ಥ ಶೆಟ್ಟಿ, ಉಸ್ತಾದ್ ಅಹಮದ್, ಸತೀಶ್ ಶೆಟ್ಟಿ, ದೇವಾನಂದ್ ಶೆಟ್ಟಿ, ವಿಕಾಸ್ ಹೆಗ್ಡೆ, ಅಜಿತ್ ಶೆಟ್ಟಿ, ರಾಜು ಪೂಜಾರಿ ಪಾರಂಪಳ್ಳಿ, ಶ್ರೀನಿವಾಸ್ ಅಮೀನ್, ಬಾಲಕೃಷ್ಣ ಪೂಜಾರಿ, ಮಲ್ಲಿಕಾ ಪೂಜಾರಿ, ದಿನೇಶ್ ಬಂಗೇರ, ಗಣೇಶ್ ನೆಲ್ಲಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಕಾನ್ಮಕ್ಕಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿನೋದ್ ಕ್ರಾಸ್ತಾ ನಿರೂಪಿಸಿದರು.

Leave a Reply