ಹರ್ ಘರ್ ತಿರಂಗಾ ಅಭಿಯಾನ: ಸ್ವಾತಂತ್ರ್ಯ ಹೋರಾಟಗಾರ ದಿ. ಗೋವಿಂದ ಖಾರ್ವಿ ಅವರಿಗೆ ಪುಪ್ಪನಮನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಇಂದು ಉಪ್ಪುಂದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಕ ಚಾಲನೆ ನೀಡಲಾಯಿತು.

Call us

Click Here

ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರಾದ ಅಮ್ಮನವರ ತೊಪ್ಲುವಿನ ದಿ. ಗೋವಿಂದ ಖಾರ್ವಿ ಸಂಕದ ಬಾಗಿಲು ಮನೆ ಅವರು ನಿವಾಸದ ತನಕ ಮೆರವಣಿಗೆ ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ದಿವಾಕರ ಶೆಟ್ಟಿ ಅವರು ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕಿಯವರು ಹಾಗೂ ಎಸ್ ಡಿ ಎಮ್ ಸಿ ಸದಸ್ಯರು, ಸಾರ್ವಜನಿಕ ರು ಭಾಗವಹಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಗೋವಿಂದ ಖಾರ್ವಿ ಯವರ ಮನೆಗೆ ಮೆರವಣಿಗೆ ತೆರಳಿ ಧ್ವಜರೋಹಣ ಮಾಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು. ನಂತರ ಅವರ ಭಾವಚಿತ್ರವನ್ನು ಶಾಲೆಗೆ ತರಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಉದಯ್ ಪಡಿಯಾರ್, ಪಂಚಾಯತ್ ಉಪಾಧ್ಯಕ್ಷ ದಿವಾಕರ್ ಶೆಟ್ಟಿ, ಮುಖ್ಯೋಪಧ್ಯಾಯ ವೆಂಕಪ್ಪ ಉಪ್ಪಾರ, ಗೋವಿಂದ ಖಾರ್ವಿ ಯವರ ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಊರ ಜನರು ಉಪಸ್ಥಿತರಿದ್ದರು.

Leave a Reply