Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಲೋಕಾಪುರದಲ್ಲಿ ಕಾಂತಾರ ಹವಾ. ಒಂದು ದಿನದ ಫ್ರೀ ಶೋ ಆಯೋಜಿಸಿದ ಉದ್ಯಮಿ ಗುಣಕರ ಶೆಟ್ಟಿ
    ಊರ್ಮನೆ ಸಮಾಚಾರ

    ಲೋಕಾಪುರದಲ್ಲಿ ಕಾಂತಾರ ಹವಾ. ಒಂದು ದಿನದ ಫ್ರೀ ಶೋ ಆಯೋಜಿಸಿದ ಉದ್ಯಮಿ ಗುಣಕರ ಶೆಟ್ಟಿ

    Updated:14/10/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಸದ್ಯಕ್ಕಂತೂ ಸಿನಿಮಾ ಅಂದ್ರೆ ಕಾಂತಾರ ಎಂಬಂತಾಗಿದೆ. ಎರಡನೇ ವಾರದ ಅಂತ್ಯದ ವೇಳೆಗೆ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಹೊಸ ಪ್ರೇಕ್ಷಕ ವರ್ಗವನ್ನೂ ಟಾಕೀಸುಗಳತ್ತ ಸೆಳೆಯುತ್ತಿದೆ. ಹಿಂದಿ ಹಾಗೂ ಇನ್ನಿತರ ಭಾಷೆಯಲ್ಲಿಯೂ ಬಿಡುಗಡೆಗೆ ತಯಾರಾಗಿ ಮುನ್ನಡೆಯುತ್ತಿದೆ.

    Click Here

    Call us

    Click Here

    ಕರಾವಳಿ ಸಂಸ್ಕೃತಿ, ಸಂಪ್ರದಾಯವನ್ನು ಬೆಳ್ಳಿತೆರೆಯ ಮೇಲೆ ತೋರಿಸುತ್ತಾ, ಅಭಿನಯ, ಸಂಗೀತ, ಮೇಕಿಂಗ್ ಎಲ್ಲದರ ಬಗ್ಗೆಯೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಾ ಗೆದ್ದಿರುವ ಕಾಂತಾರ ಸಿನಿಮಾ, ಉತ್ತರ ಕರ್ನಾಟಕದಲ್ಲಿಯೂ ಸಖತ್ ಕ್ರೇಜ್ ಹುಟ್ಟುಹಾಕಿದೆ. ಬಾಗಲಕೋಟೆ ಜಿಲ್ಲೆಯ ಲೋಕಾಪುರದ ಉದ್ಯಮಿ, ಹೋಟೆಲ್ ಶಾಂತಿ ಗ್ರ್ಯಾಂಡ್ ಮಾಲಿಕ ಗುಣಕರ ಶೇಖರ ಶೆಟ್ಟಿ ಅವರು ಗುರುವಾರ ಒಂದು ದಿನ ಲೋಕಾಪುರದ ಟಾಕೀಸ್ ಸಂಪೂರ್ಣ ಬುಕ್ ಮಾಡಿ ಅಲ್ಲಿನ ಜನತೆಗೆ ಕಾಂತಾರ ಸಿನಿಮಾ ಸಂಪೂರ್ಣ ಉಚಿತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು.

    ಕನ್ನಡದ ಸ್ಟಾರ್ ನಟರ ಸಿನಿಮಾಗಳಷ್ಟೇ ಓಡುತ್ತಿದ್ದ ಲೋಕಾಪುರದ ಟಾಕೀಸಿನಲ್ಲಿ ಕಾಂತಾರದ ಕ್ರೇಜ್ ಮಾತ್ರ ಜೋರಾಗಿಯೇ ಇದೆ. ಗುರುವಾರ ಆಯೋಜಿಸಲಾಗಿದ್ದ ಒಟ್ಟು 5 ಉಚಿತ ಪ್ರದರ್ಶನಗಳು ಹೌಸ್ ಪುಲ್ ಆಗಿದ್ದವು. ಟಾಕೀಸ್ ಕಡೆಗೆ ಯಾವತ್ತೂ ಮುಖಮಾಡದ ಲೋಕಾಪುರದ ಮಹಿಳೆಯರು ಕೂಡ ಥಿಯೇಟರಿನಲ್ಲಿ ಕಾದು ಸಿನಿಮಾ ವೀಕ್ಷಿಸಿದ್ದು ಮಾತ್ರ ವಿಶೇಷವಾಗಿತ್ತು.

    ಉದ್ಯಮದ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ಗುರುತಿಸಿಕೊಂಡಿರುವ ಗುಣಕರ ಶೆಟ್ಟಿ ಅವರು ಮೂಲತಃ ಕುಂದಾಪುರದ ತಾಲೂಕಿನ ನಂದ್ರೊಳ್ಳಿಯವರು. ಅವರ ಪತ್ನಿ ಪ್ರಿಯಾಂಕಾ ಗುಣಕರ ಶೆಟ್ಟಿ ಕೆರಾಡಿಯವರು. ತಮ್ಮೂರಿನ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಸಿನಿಮಾ, ತಮ್ಮೂರಿನಲ್ಲಿಯೇ ಚಿತ್ರೀಕರಣ ನಡೆದು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಬಗ್ಗೆ ದಂಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾಗಿತಾವು ಸದ್ಯ ನೆಲೆಸಿರುವ ಲೋಕಾಪುರ ತಾಲೂಕಿನ ಜನರಿಗೂ ಸಿನಿಮಾ ತೋರಿಸಬೇಕೆಂಬ ನೆಲೆಯಲ್ಲಿ ಒಂದು ದಿನದ 5 ಶೋಗಳನ್ನು ಸಂಪೂರ್ಣ ಬುಕ್ ಮಾಡಿ ಜನರಿಗೆ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರ ಈ ಸಿನಿಮಾ ಪ್ರೀತಿಗೆ ಲೋಕಾಪುರದ ಜನರೂ ಮೆಚ್ಚುಗೆ ಸೂಚಿಸಿದ್ದಾರೆ.

    ಇದನ್ನೂ ಓದಿ:
    ► ‘ಕಾಂತಾರ’ | ಕುಂದಾಪುರದಲ್ಲಿ ಒಂದು ಶೋ ಪೂರ್ತಿ ಬುಕ್ ಮಾಡಿದ ಉದ್ಯಮಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ – https://kundapraa.com/?p=62606 .

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ವಿಶೇಷಚೇತನರಿಗೆ ಸ್ವಾಭಿಮಾನಿ ಬದುಕು ಕಲ್ಪಿಸಬೇಕು: ಜಯಕರ ಶೆಟ್ಟಿ

    11/07/2026

    ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

    11/07/2026

    ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ತ್ಯಾಗಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಭೇಟಿ

    11/07/2026
    Leave A Reply Cancel Reply

    3 + nine =

    Call us

    Click Here

    Call us

    Call us

    Call us
    Highest Viewed Recently
    • ವಿಶೇಷಚೇತನರಿಗೆ ಸ್ವಾಭಿಮಾನಿ ಬದುಕು ಕಲ್ಪಿಸಬೇಕು: ಜಯಕರ ಶೆಟ್ಟಿ
    • ತಂತ್ರವೇ ಯಶಸ್ಸಿನ ಮೂಲ; ಕೇವಲ ಕಲ್ಪನೆಗಳಿಂದ ಉದ್ಯಮ ಯಶಸ್ವಿಯಾಗುವುದಿಲ್ಲ: ವೇಣು ಶರ್ಮಾ
    • ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
    • ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ತ್ಯಾಗಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಭೇಟಿ
    • ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಭೇಟಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.