ಡಾ. ನಿಶಾ ಕುಮಾರಿ ಅವರು ನಿರ್ಮಿಸಿದ ಕಿರುಚಿತ್ರ ಪ್ರಾತ್ಯಕ್ಷಿಕೆಗೆ ಆಯ್ಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ದೀಕ್ಷಾ ಆಯುರ್ವೇದ ಅಕಾಡೆಮಿ ಹಾಗೂ ಎವಿಪಿ ಕೊಯಂಬತ್ತೂರು ಇವರು ಆಯೋಜಿಸಿದ್ದ “ಆಯುರ್ ಕೋನ್-ನ್ಯಾಷನಲ್ ವೆಬ್ ಕಾನ್ಫರೆನ್ಸ್ ಆನ್ ಆಯುರ್ವೇದ ಫಾರ್ ಲಿಪಿಡ್ ಡಿಸಾರ್ಡರ್ಸ್”ರಲ್ಲಿ ಕುಂದಾಪುರ ಕೋಟೇಶ್ವರದ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕಿ ಡಾ. ನಿಶಾ ಕುಮಾರಿ ಇವರು ನಿರೂಪಿಸಿದ ಕಿರು ಚಿತ್ರವು ಪ್ರಾತ್ಯಕ್ಷಿಕೆಗೆ ಆಯ್ಕೆಯಾಗಿದೆ.

Call us

Click Here

ಡಾ. ನಿಶಾ ಕುಮಾರಿ ಇವರು ರಚಿಸಿದ “ಕರ ಪ್ರಚಿತೀಯ ಆಮಲಕಿ ರಸಾಯನ” ಎಂಬ ಸಾಕ್ಷ್ಯಚಿತ್ರದಲ್ಲಿ ಮರ, ಮಣ್ಣು, ಮನುಷ್ಯನ ಒಡನಾಟವನ್ನು ವಿವರಿಸಲಾಗಿದೆ. ಪ್ರಕೃತಿಯೊಂದಿಗಿನ ಒಡನಾಟವು ಮನುಷ್ಯನ ದೇಹ, ಮನ ಮತ್ತು ಆರೋಗ್ಯದಲ್ಲಿ ಯಾವ ಪರಿಣಾಮ ಬೀರಬಹುದೆಂಬ ಕಿರು ಪರಿಚಯ ಈ ಚಿತ್ರದಲ್ಲಿದೆ. ಇದು ಆಯುರ್ವೇದದಲ್ಲಿ ತಿಳಿಸಿದರ ರಸಾಯನ ಪದ್ಧತಿಯಾದರೆ ಜಪಾನ್ ದೇಶದಲ್ಲಿ ಇದು “ಫಾರೆಸ್ಟ್ ಬಾತ್” ಎಂಬ ಹೆಸರಿನಲ್ಲಿ ಪ್ರಚಲಿತವಾಗಿದೆ.

Leave a Reply