ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಪೋರ್ಟ್ ಗೇಟ್ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ಓಕ್‌ವುಡ್ ಇಂಡಿಯನ್ ಸ್ಕೂಲ್ ಪೋಷಕರಿಗಾಗಿ ಏರ್ಪಡಿಸಲಾದ ಕಾರ್ಯಗಾರವನ್ನು ಹರಿಪ್ರಸಾದ್ ಹೋಟೆಲ್ ಅಕ್ಷತಾ ಹಾಲಿನಲ್ಲಿ ನಡೆಯಿತು.
ಉಡುಪಿಯ ಎವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಪೋಷಕರು ಅವರಿಗೆ ಇರುವ ಸಮಸ್ಯೆಯನ್ನು ಕೇಳಿಕೊಂಡು ಅದಕ್ಕೆ ಪರಿಹಾರವನ್ನು ಪಡೆದರು.
ಸಭೆಯಲ್ಲಿ ಪೋರ್ಟ್ ಗೇಟ್ ಎಜುಕೇಶನ್ ಅಧ್ಯಕ್ಷರಾದ ಅಭಿನಂದನ್ ಶೆಟ್ಟಿ, ಕಾರ್ಯದರ್ಶಿ ನೀತಾ ಶೆಟ್ಟಿ ಆಡಳಿತ ಮಂಡಳಿ ಮುಖ್ಯಸ್ಥರು ಮುಖ್ಯ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ನೀತಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸಿಲ್ವಿಯಾ ಫೆರ್ನಾಂಡಿಸ್ ನಿರೂಪಿಸಿದರು. ಅತಿಥಿಗಳ ಪರಿಚಯವನ್ನು ಶಿಕ್ಷಕಿ ಕಾವ್ಯ ಮಾಡಿದರು. ಸಹನ ಶೆಟ್ಟಿ ಧನ್ಯವಾಗೈದರು.










