ಕುಂದಾಪುರ: ಅಂತಾರಾಜ್ಯ ಚೋರರ ಬಂಧನ. 16 ಲಕ್ಷದ ಮೌಲ್ಯದ ಸ್ವತ್ತುಗಳು ವಶಕ್ಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಕೋಟೆಶ್ವರ ಕಾಮತ್ ಪೆಟ್ರೋಲ್ ಪಂಪ್ ಪ್ರಸನ್ನ ನಾರಾಯಣ ಆಚಾರ್ಯ (47) ಅವರ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಚಿನ್ನಾಭರಣಗಳನ್ನು ಹಾಗೂ ನಗದು ಹಣ ಕಳವುಗೈದ ಪ್ರಕರಣಕ್ಕೆ ಸಂಬಂದಿಸಿದಂತೆ ಕುಂದಾಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವೃತ್ತಿಪರ ಕಳವು ಆರೋಪಿಗಳಾದ ಕಾಸರಗೋಡಿನ ಹಾಶಿಮ್ ಎ ಎಚ್ (42 ವರ್ಷ) ಮಜೇಂಶ್ವರದ ಅಬೂಬಕ್ಕರ್ ಸಿದ್ದಿಕ್ (48 ವರ್ಷ) ಎಂಬಾತನನ್ನು ಮಡಿಕೇರಿಯಲ್ಲಿ ಡಿ.27ರಂದು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Call us

Click Here

ಆಪಾದಿತರು ಜಿಲ್ಲೆಯ ಉಡುಪಿ ನಗರ ಪೊಲೀಸ್ ಠಾಣೆ. ಮಲ್ವೆ ಪೋಲೀಸ್ ಠಾಣೆ. ಕುಂದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕಳ್ಳತನ ನಡೆಸಿ ಕಳವು ಮಾಡಿದ್ದಾಗಿ ತಿಳಿಸಿ ಚಿನ್ನಾಭರಣಗಳನ್ನು ಕೇರಳ ಮಂಜೇಶ್ವರ ತಾಲೂಕಿನ ನೀರ್ಚಾಲ್ ಕಾಳಿಕಾಂಬ ಜುವೆಲ್ಸರ್ಸ್ ಗೆ ಮಾರಾಟ ಮಾಡಿದ್ದರು. ಸದ್ರಿ ಜುವೆಲ್ಲರಿ ಅಂಗಡಿಯವನು ಹಾಜರುಪಡಿಸಿದ 15 ಲಕ್ಷ ಮೌಲ್ಯದ ಒಟ್ಟು 300 ಗ್ರಾಂ ಚಿನ್ನ ಹಾಗೂ 1 ಲಕ್ಷ ಮೌಲ್ಯದ ಒಟ್ಟು 1481 ಗ್ರಾಂ ಬೆಳ್ಳಿ ಸೇರಿ ಒಟ್ಟು ಮೌಲ್ಯ 16 ಲಕ್ಷದ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳು ಅಂತರ್ರಾಜ್ಯ ವೃತ್ತಿ ಪರ ಚೋರರಾಗಿದ್ದು ಅವರುಗಳು ಈಗಾಗಲೇ ಕೇರಳ ರಾಜ್ಯದ ವಿವಿಧೆಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಕೂಡಾ ಕಳ್ಳತನ ಹಾಗೂ ಇತರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿರುವುದು ತನಿಖೆ ಸಮಯ ತಿಳಿದುಬಂದಿರುತ್ತದೆ. ಈ ಪ್ರಕರಣದ ಪತ್ತೆ ಬಗ್ಗೆ ಕುಂದಾಪುರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ರಚಿಸಲಾದ ಕುಂದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ. ಸದಾಶಿವ ಗವರೋಜಿ ಮತ್ತು ಪಿಎಸ್ಐ ಪ್ರಸಾದ್ ಕಲಹಾಳ ಅಧಿಕಾರಿ ಮತ್ತು ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್. ಐ.ಪಿ.ಎಸ್..ರವರ ನಿರ್ದೇಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ದಲಿಂಗಪ್ಪರವರ ನಿರ್ದೇಶನದಂತೆ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ, ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆರ್ ಅವರ ನೇತೃತ್ವದಲ್ಲಿ, ಕುಂದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಸದಾಶಿವ ಗವರೋಜಿ. ಪ್ರಸಾದ್ ಕುಮಾರ್ ಕೆ. ಮತ್ತು ಎ.ಎಸ್.ಐ. ಸುಧಾಕರ ಹಾಗೂ ಸಿಬ್ಬಂದಿಯವರಾದ ಸಂತೋಷ ಕುಮಾರ್, ಕೆ.ಯು ಸಂತೋಷ ಕುಮಾರ್, ರಾಮ ಪೂಜಾರಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ದಿನೇಶ್ ಅವರನ್ನೊಳಗೊಂಡ ತಂಡವು ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದೆ.

Leave a Reply