ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಮಟ್ಟದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ, ಕುಂದಾಪುರದಲ್ಲಿ ಸರಕಾರಿ ಸಹಾಯಕ ಅಭಿಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ಉಡುಪಿ ಕರಂಬಳ್ಳಿಯ ವರ್ಷಶ್ರೀ ಅವರು ತೇರ್ಗಡೆಯಾಗಿದ್ದಾರೆ.
ಕರಂಬಳ್ಳಿಯ ನಿವೃತ್ತ ಶಿಕ್ಷಕರಾದ ದಿವಾಕರ್ ಐತಾಳ್ ಮತ್ತು ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ ಅವರ ಪುತ್ರಿ ವರ್ಷಶ್ರೀ, ಗುಂಡಿಬೈಲ್ ಶಾಲೆ, ನಿಟ್ಟೂರು ಪ್ರೌಡ ಶಾಲೆ, ಉಡುಪಿ ಹೆಣ್ಣುಮಕ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದು, 2012ರಲ್ಲಿ ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದರು.
ಪ್ರಸ್ತುತ ಕುಂದಾಪುರದ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಸರಕಾರಿ ಸಹಾಯಕ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು, ಬೈಂದೂರು ನ್ಯಾಯಾಲಯದ ಮೊದಲ ಸರಕಾರಿ ಸಹಾಯಕ ಅಭಿಯೋಜಕರಾಗಿಯೂ ಸೇವೆಸಲ್ಲಿಸಿದ್ದರು.