ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜ.16: ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೈಂದೂರು ಇಲ್ಲಿ ವಿವೇಕಾನಂದ ಜಯಂತಿ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿಎಂ ಮಂಜುನಾಥ್ ಉದ್ಘಾಟಿಸಿ ವಿವೇಕಾನಂದರ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ನಾವೆಲ್ಲ ಪಣತೊಡೋಣ ಎಂದರು
ವಿವೇಕಾನಂದರ ಸ್ತಬ್ಧ ಚಿತ್ರದೊಂದಿಗೆ ನಗರ ಮೆರವಣಿಗೆ ಹಾಗೂ ನಗರ ಸ್ವಚ್ಛತೆಯ ಜಾಥಾವನ್ನು ಪಟ್ಟಣ ಪಂಚಾಯಿತಿನ ಮುಖ್ಯ ಅಧಿಕಾರಿ ನವೀನ್ ಕುಮಾರ್ ಮತ್ತು ಕಂದಾಯ ನಿರೀಕ್ಷಕರಾದ ದೀಪಕ್ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು.
ಸಾಮಾಜಿಕ ಸೇವಕರ್ತರು ಮತ್ತು ಉದ್ಯಮಿಗಳಾದ ನಿತಿನ್ ನಾರಾಯಣ್ ಇವರು ಮಕ್ಕಳಿಗೆ ವಿವೇಕಾನಂದರ ಚಿಂತನೆಗಳ ಪುಸ್ತಕ ಮಾಲಿಕೆಯನ್ನು ವಿತರಿಸಿದರು ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಚಂದ್ರ ದೇವಡಿಗ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಚಂದ್ರನಾರಾಯಣಬಿಲ್ಲವ ದೈಹಿಕ ಶಿಕ್ಷಕರಾದ ಪ್ರಭಾಕರ್ ಎಚ್ ಉಪಸ್ಥಿತರಿದ್ದರು ಶಾಲಾ ಪದವೀಧರ ಮುಖ್ಯೋಪಾಧ್ಯಾಯರಾದ ಜನಾರ್ದನ್ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು ವೀಣಾ ಹೆಗಡೆ ಸರ್ವರನ್ನು ಸ್ವಾಗತಿಸಿದರು ಸರಸ್ವತಿ ಧನ್ಯವಾದ ಸಲ್ಲಿಸಿದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.