ನಾವುಂದ ಸ.ಪ.ಪೂ. ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಕ್ಲಬ್ ಕುಂದಾಪುರ ಪ್ರಾಯೋಜಿತ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇಂಟರಾಕ್ಟ್ ಕ್ಲಬ್ಬಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಆಚರಿಸಲಾಯಿತು.

Call us

Click Here

ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ವೆಂಕಟೇಶ ನಾವುಂದ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಮಾದರಿ ನಾವು ನೀವು ನಾವು ಕಲಿತ ಶಾಲೆಗೆ, ನಮ್ಮ ಊರಿಗೆ ಮತ್ತು ನಮ್ಮ ಮನೆಗೆ ಮಾದರಿಯಾಗಲು ಪ್ರಯತ್ನಿಸೋಣ ಎಂದರು.

ಮುಖ್ಯ ಕುಮಾರ್ ಎಸ್. ಕಾಂಚನ್ ಮಾತನಾಡಿ ಹತ್ತನೆ ತರಗತಿಯ ವಿದ್ಯಾರ್ಥಿಯರಿಗೆ 2022-23ನೇ ಸಾಲಿನ ಪರೀಕ್ಷೆ ಭಯ, ಪರೀಕ್ಷೆ ಎದುರಿಸುವ ರೀತಿ, ಪರೀಕ್ಷೆಗೆ ತಯಾರಿ ಮತ್ತು ಶಿಕ್ಷಣದ ಬಗ್ಗೆ ಸುದೀರ್ಘವಾಗಿ ಮಕ್ಕಳ ಮನಸ್ಸು ನಾಟುವ ರೀತಿಯಲ್ಲಿ ಮಾತನಾಡಿ ಶುಭ ಹಾರೈಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ ಶುಭಾಶಯಗೈದರು ಇಂಟರಾಕ್ಟ್ ಕೋಆರ್ಡಿನೇಟರ್ ಗಣೇಶ್ ಐತಾಳ್, ಶಿಕ್ಷಕ ನಾಗರಾಜ ಉಪಸ್ಥಿತರಿದ್ದರು. ಶಿಕ್ಷಕ ಕೃಷ್ಣ ಮೂರ್ತಿ ಪಿ.ಕೆ. ಸ್ವಾಗತಿಸಿ ಧನ್ಯವಾದಗೈದರು.

Leave a Reply