‘ಗ್ರಾಮೀಣ ಶಿಕ್ಷಕ ರತ್ನ’ ಪ್ರಶಸ್ತಿಗೆ ಮುಖ್ಯ ಶಿಕ್ಷಕ ತಿಮ್ಮಪ್ಪ ಗಾಣಿಗ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಕಂಚಿಕಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ತಿಮ್ಮಪ್ಪ ಗಾಣಿಗ ಅವರು ರಾಜ್ಯ ಮಟ್ಟದ ‘ಗ್ರಾಮೀಣ ಶಿಕ್ಷಣ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Call us

Click Here

ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುಬ್ಬಳ್ಳಿ ಇದರ ವತಿಯಿಂದ ಶನಿವಾರ ಹುಬ್ಬಳ್ಳಿಯಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬೈಂದೂರು ತಾಲೂಕು ತಗ್ಗರ್ಸೆಯವರಾದ ತಿಮ್ಮಪ್ಪ ಗಾಣಿಗ ಅವರು 1990ರಲ್ಲಿ ಶಿಕ್ಷಕ ವೃತ್ತಿ ಸೇರಿ ಕಾರ್ಯಳ ಜೊಗಳಬೆಟ್ಟುವಿನಲ್ಲಿ ತಮ್ಮ ಸೇವೆ ಆರಂಭಿಸುತ್ತಾರೆ. ಬಳಿಕ ಕ್ರಮವಾಗಿ ಸ.ಹಿ.ಪ್ರಾ ಶಾಲೆ ಕೋಯಾನಗರ, ನಾಯ್ಕನಕಟ್ಟೆ ಹಾಗೂ ಬೈಂದೂರು ಮಾದರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಮುಂದೆ ಭಡ್ತಿ ಹೊಂದಿ ಸ.ಹಿ.ಪ್ರಾ ಶಾಲೆ ತಗ್ಗರ್ಸೆಯಲ್ಲಿ ಮುಖ್ಯ ಶಿಕ್ಷಕರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದೆರಡು ವರ್ಷಗಳಿಂದ ಸಹಿಪ್ರಾ ಶಾಲೆ ಕಂಚಿಕಾನುವಿನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ 33 ವರ್ಷಗಳ ಸೇವಾ ಅವಧಿಯಲ್ಲಿ ಮಕ್ಕಳ ನೆಚ್ಚಿನ ಶಿಕ್ಷಕರಾಗಿರುವ ಜೊತೆಗೆ ಶಾಲೆಯ ಅಭಿವೃದ್ಧಿಯಲ್ಲಿಯೂ ಶ್ರಮಿಸಿರುವು ಹಿರಿಮೆ ತಿಮ್ಮಪ್ಪ ಗಾಣಿಗ ಅವರದ್ದಾಗಿದೆ. 2003-04ರಲ್ಲಿ ಜನಮೆಚ್ಚಿನ ಶಿಕ್ಷಕ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.

Click here

Click here

Click here

Click Here

Call us

Call us

Leave a Reply