ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಸಾಹಿತ್ಯ ಪರಿಷತ್ತು ವತಿಯಿಂದ ಫೆ.19ರಂದು ಗಂಗೊಳ್ಳಿ ಸರಸ್ವತಿ ಪ.ಪೂ.ಕಾಲೇಜುವಠಾರದಲ್ಲಿ ನಡೆಯುವ ಗಂಗಾವಳಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷ ಕೋ.ಶಿವಾನಂದ ಕಾರಂತರನ್ನು ಅವರ ಗುಜ್ಜಾಡಿ ನಿವಾಸ ಶಿವಲಾಲಿತ್ಯಕ್ಕೆ ತೆರಳಿ ಅಧಿಕ್ರೃತವಾಗಿ ಸ್ವಾಗತಿಸಲಾಯಿತು.
ಕುಂದಾಪುರ ತಾಲೂಕು ಕ.ಸಾ.ಪ.ಅಧ್ಯಕ್ಷ ಡಾ.ಉಮೇಶ್ ಪುತ್ರನ್, ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ, ಕೋಶಾಧಿಕಾರಿ ಕೆ.ಎಸ್.ಮಂಜುನಾಥ, ಜಿಲ್ಲಾ ಕ.ಸಾ.ಪ.ಕೋಶಾಧ್ಯಕ್ಷ ಮನೋಹರ್ ಅಧಿಕ್ರೃತ ಪತ್ರ ನೀಡಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್. ಗಣೇಶ್ ಕಾಮತ್, ಕಾರ್ಯದರ್ಶಿ ಯು.ಎಸ್ .ಶೆಣೈ, ಕ.ಸಾಪ.ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಅವರು ಸಮ್ಮೇಳನದ ವಿವರ ನೀಡಿ, ಕೋ.ಶಿ. ಕಾರಂತ, ಕುಸುಮಾ ಕಾರಂತ ದಂಪತಿಯನ್ನು ಗೌರವಿಸಿದರು.