ಬೈಂದೂರು: ನಿವೃತ್ತ ಶಿಕ್ಷಕ ಶ್ರೀನಿವಾಸ ಮಾಸ್ಟರ್ ನಿಧನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಫೆ.27:
ತಾಲೂಕಿನ ಪಡುವರಿಯ ನಿವೃತ್ತ ಶಿಕ್ಷಕ, ಅಕ್ಕಿಯಂಗಡಿ ಮನೆ ಶ್ರೀನಿವಾಸ ಮಾಸ್ಟರ್ (79ವ) ಸೋಮವಾರ ಬೆಳಿಗ್ಗೆ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

Call us

Click Here

ಚಲ್ಲ ಮಾಸ್ಟರ್ ಎಂದೇ ಪ್ರಸಿದ್ಧರಾಗಿದ್ದ ಶ್ರೀನಿವಾಸ್ ಮಾಸ್ಟರ್ ಅವರು ಬಾಡ ಸರಕಾರಿ ಪ್ರಾಥಮಿಕ ಶಾಲೆ, ಶಿರೂರು ಪ್ರೌಢಶಾಲೆ ಹಾಗೂ ನಿವೃತ್ತಿ ಬಳಿಕ ಬೈಂದೂರು ಮೊರಾರ್ಜಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಸಾಮಾಜಿಕವಾಗಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಶ್ರೀನಿವಾಸ ಮಾಸ್ಟರ್ ಅವರು ಒಂದು ಅವಧಿಗೆ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದರು. ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟಿನ ಟ್ರಸ್ಟೀಯಾಗಿ ಸೇವೆ ಸಲ್ಲಿಸಿದ್ದರು.

ಶ್ರೀನಿವಾಸ್ ಮಾಸ್ಟರ್ ಅವರು ಪತ್ನಿ ಹಾಗೂ ಮೂವರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಬಂಧುಗಳು, ವಿಧ್ಯಾರ್ಥಿಗಳು ಮಿಡಿದಿದ್ದಾರೆ. ಅವರ ಅಂತಿಮ ವಿಧಿ ವಿಧಾನ ಮಾರ್ಚ್ 1ರ ಬೆಳಿಗ್ಗೆ ನಡೆಯಲಿದೆ.

Leave a Reply