ನಿಮ್ಮ ಆಧಾರ್- ಪ್ಯಾನ್ ಲಿಂಕ್ ಆಯ್ತಾ? 1,000 ದಂಡದೊಂದಿಗೆ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಿಮ್ಮ ಆಧಾರ್ ನಂಬರ್ ಜೊತೆ ಪ್ಯಾನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ. 2017ರಿಂದಲೇ ಆಧಾರ್ – ಪ್ಯಾನ್ ಲಿಂಕ್ ಕಡ್ಡಾಯವೆಂಬ ನಿಯಮ ಜಾರಿಗೆ ಬಂದಿದ್ದು, ಹಲವು ಭಾರಿ ದಿನಾಂಕ ವಿಸ್ತರಣೆಗೊಳಿಸಲಾಗಿತ್ತು. ಇದೀಗ ಮಾರ್ಚ್ 31ರ ತನಕ ರೂ.1000 ದಂಡದೊಂದಿಗೆ ವಿಸ್ತರಣೆ ಮಾಡಲಾಗಿದೆ. ಇದರ ಬಳಿಕ ಮತ್ತೆ ಡೆಡ್‌ಲೈನ್‌ ವಿಸ್ತರಣೆ ಆಗುವ ಸಾಧ್ಯತೆ ಇಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿದೆ.

Call us

Click Here

ಇದನ್ನೂ ಓದಿ: ► ಪ್ಯಾನ್ – ಆಧಾರ್ ಲಿಂಕಿಂಗ್ ಗಡುವು ಜೂನ್ 30ಕ್ಕೆ ವಿಸ್ತರಣೆ – https://kundapraa.com/?p=65602 .

1,000 ರೂ. ದಂಡದೊಂದಿಗೆ ಮಾರ್ಚ್‌ 31ರ ತನಕ ಪ್ಯಾನ್‌ – ಆಧಾರ್‌ ಲಿಂಕ್‌ ಮಾಡಲು ಅವಕಾಶವಿದೆ. ಏಪ್ರಿಲ್‌ 1ರ ಬಳಿಕ ಪ್ಯಾನ್‌ ನಿಷ್ಕ್ರಿಯವಾಗಲಿದೆ. ಲಿಂಕ್‌ ಮಾಡಿಸದೇ ಅನೂರ್ಜಿತವಾಗುವ ಪ್ಯಾನ್ ಕಾರ್ಡ್‌ ಬಳಸಿ, ಆಫ್‌ಲೈನ್‌ನಲ್ಲಿ ನೀವು ವಹಿವಾಟು ಮಾಡಿದಾಗ, ಅದು ಆದಾಯ ತೆರಿಗೆ ಇಲಾಖೆಯ ಅಸೆಸಿಂಗ್‌ ಆಫೀಸರ್‌ ಕೈಗೆ ಸಿಕ್ಕರೆ ಆಗ 10,000 ರೂ. ತನಕದ ದಂಡ ತೆರಬೇಕಾಗುತ್ತದೆ.

ಆಧಾರ್ – ಪಾನ್ ಜೊಡನೆ ದಿನಾಂಕ ದಿನಾಂಕವನ್ನು ರೂ.1000 ದಂಡದೊಂದಿಗೆ ಮುಂದೂಡಲಾಗಿದೆ ಎಂಬ ಸುಳ್ಳು ಸುದ್ದಿಯೊಂದು ವಾಟ್ಸಪ್’ನಲ್ಲಿ ಹರಿದಾಡುತ್ತಿದೆ. ಆದರೆ ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಎಲ್ಲಿಯೂ ಪ್ರಕಟಣೆ ಹೊರಡಿಸಿಲ್ಲ. ಏಪ್ರಿಲ್‌ 1 ರಿಂದ  ಲಿಂಕ್ ಮಾಡದ ಪಾನ್ ಕಾರ್ಡ್‌ ನಿಷ್ಕ್ರಿಯವಾಗಿದೆ. ಆಗ ಅದೇ ಪಾನ್ ಕಾರ್ಡ್ ಬಳಸಲು ಸಾಧ್ಯವಿಲ್ಲದಿರುವುದರಿಂದ ನಿಮ್ಮ ಆಧಾರ್ ಕಾರ್ಡ್‌ ಬಳಸಿ ಹೊಸ ಪ್ಯಾನ್‌ಗೆ ಅರ್ಜಿ ಹಾಕಿ. 100 ರೂ. ಶುಲ್ಕ ತುಂಬಿ, ಅರ್ಜಿ ಹಾಕಿದರೆ 15-20 ದಿನಗಳಲ್ಲಿ ಪ್ಯಾನ್‌ ಕಾರ್ಡ್‌ ಬರುತ್ತದೆ.

ಪಾನ್ – ಆದಾರ್ ಜೋಡಣೆ ಯಾಕೆ?
ದೇಶದ ನಾಗರಿಕನ ಆರ್ಥಿಕ ವ್ಯವಹಾರದ ಮೇಲೆ ನಿಗಾ ವಹಿಸಲು ಹಾಗೂ ತೆರಿಗೆ ಅರ್ಹತೆ ನಿರ್ಧರಿಸಲು ಪಾನ್ ಕಾರ್ಡ್ ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಒಬ್ಬನೇ ವ್ಯಕ್ತಿಗೆ 2 ಪಾನ್ ಕಾರ್ಡ್ ಮಾಡಿಕೊಂಡಿರುವುದರಿಂದ ಆ ವ್ಯಕ್ತಿ ತೆರಿಗೆ ವಂಚನೆ ಮಾಡುವ ಸಂದರ್ಭವಿರುತ್ತದೆ. ಹಾಗಾಗಿ ಪಾನ್ ಕಾರ್ಡ್ – ಆಧಾರ್ ಲಿಂಕ್ ಆದರೆ ಈ ಸಮಸ್ಯೆ ತಪ್ಪಲಿದೆ ಎಂಬುದು ಇಲಾಖೆಯ ವಾದ. ಪ್ಯಾನ್‌ ನಂಬರ್‌ ಇಲ್ಲದೆ ಯಾವುದೇ ಹಣಕಾಸಿನ ಕೆಲಸ ನಿಭಾಯಿಸುವುದು ಕಷ್ಟ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಹೂಡಿಕೆ ಮಾಡುವವರೆಗೆ ಎಲ್ಲ ಕೆಲಸಗಳಿಗೂ ಪ್ಯಾನ್‌ ಕಾರ್ಡ್‌ ಬೇಕು. ಅಂತಹ ಪರಿಸ್ಥಿತಿಯಲ್ಲಿ, ಪ್ಯಾನ್‌ ಕಾರ್ಡ್‌ ಇಲ್ಲದಿದ್ದರೆ ನಿಮ್ಮ ಅನೇಕ ಹಣಕಾಸು ಕೆಲಸಗಳು ಸ್ಥಗಿತವಾಗಬಹುದು. ನೀವು ಇನ್ನೂ ಪ್ಯಾನ್‌ ಮತ್ತು ಆಧಾರ್‌ ಅನ್ನು ಲಿಂಕ್‌ ಮಾಡದಿದ್ದರೆ, ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು.

Click here

Click here

Click here

Click Here

Call us

Call us

ಹಾಗಾಗಿ 2017ರ ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಆದಾಯ ತೆರಿಗೆ ಕಾಯ್ದೆಯಲ್ಲಿ 139AA ಎಂಬ ಹೊಸ ಸೆಕ್ಷನ್‌ ತಂದಿದೆ. ಆ ಪ್ರಕಾರ ಹೊಸ ಪಾನ್‌ಗೆ ಅರ್ಜಿ ಸಲ್ಲಿಸುವಾಗ ಮತ್ತು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಹೀಗಾಗಿ ಇದಕ್ಕೂ ಮೊದಲೇ ಪ್ಯಾನ್ ಕಾರ್ಡ್‌ ಹೊಂದಿದ್ದವರು ಸರ್ಕಾರ ನಿಗದಿ ಪಡಿಸಿದ ಸಮಯಕ್ಕೂ ಮೊದಲೇ ಆಧಾರ್ ಜೊತೆ ಲಿಂಕ್ ಮಾಡೋದು ಕಡ್ಡಾಯ. ಸರ್ಕಾರ ನಿಗದಿಪಡಿಸಿದ ಗಡುವಿನ ಒಳಗೆ ಲಿಂಕ್ ಮಾಡದಿದ್ದರೆ ಆ ಪಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.

ಯಾರಿಗೆ ಪಾನ್ ಲಿಂಕ್ ಮಾಡುವುದು ಕಡ್ಡಾಯವಲ್ಲ?
1) 80 ವರ್ಷ ಮೇಲ್ಪಟ್ಟವರು
2) ಭಾರತೀಯ ಪ್ರಜೆ ಅಲ್ಲದವರು
3) ಅನಿವಾಸಿ ಭಾರತೀಯರು
4) ಜಮ್ಮು ಕಾಶ್ಮೀರ, ಅಸಾಂ ಮತ್ತು ಮೆಘಾಲಯಾ ರಾಜ್ಯಕ್ಕೆ ಸೇರಿದವರು.
5) 2017ರ ಬಳಿಕ ಆಧಾರ್ ಸಂಖ್ಯೆಯ ಆಧಾರದ ಮೇಲೆ ಈಗಾಗಲೇ ಪಾನ್ ಕಾರ್ಡ್ ಮಾಡಿಸಿಕೊಂಡವರು.

ಲಿಂಕ್ ಅಗಿದೆಯೆ ಯಂದು ತಿಳಿಯುವುದು ಹೇಗೆ:
Link: https://eportal.incometax.gov.in/iec/foservices/#/pre-login/link-aadhaar-status

ಪಾನ್ – ಆಧಾರ್ ಲಿಂಕ್ ಮಾಡಲು ಕರೆಮಾಡಿ – 9482092487

ಲಿಂಕ್ ಆಗಿರಲಿದ್ದರೆ ಲಿಂಕ್ ಮಾಡುವುದು ಹೇಗೆ:
Link: https://eportal.incometax.gov.in/iec/foservices/#/pre-login/bl-link-aadhaar

ಪಾನ್ – ಆಧಾರ್ ಲಿಂಕ್ ಮಾಡಲು ಕರೆಮಾಡಿ – 9482092487
Watch Video

ಪಾನ್ ಜೋಡಣೆ ಯಾವಾಗ ಆರಂಭವಾಗಿದ್ದು ಗೊತ್ತೆ?
ಜೋಡಣೆ ಮಾಡಲು ಆದೇಶಿಸಿದ ದಿನಾಂಕ: 29-06-2017 ಶುಲ್ಕ : 0 (ಉಚಿತ)
ಜೋಡಣೆ ಮಾಡಲು ಕೊನೆಯ ದಿನಾಂಕ: 30-09-2019 ಶುಲ್ಕ : 0 (ಉಚಿತ)
ಜೋಡಣೆ ಮಾಡಲು ಕೊನೆಯ ದಿನಾಂಕದ 1ನೇ ವಿಸ್ತರಣೆ: 31-12-2019 ಶುಲ್ಕ : 0 (ಉಚಿತ)
ಜೋಡಣೆ ಮಾಡಲು ಕೊನೆಯ ದಿನಾಂಕದ 2ನೇ ವಿಸ್ತರಣೆ: 31-03-2020 ಶುಲ್ಕ : 0 (ಉಚಿತ)
ಜೋಡಣೆ ಮಾಡಲು ಕೊನೆಯ ದಿನಾಂಕದ 3ನೇ ವಿಸ್ತರಣೆ: 31-06-2020 ಶುಲ್ಕ : 0 (ಉಚಿತ)
ಜೋಡಣೆ ಮಾಡಲು ಕೊನೆಯ ದಿನಾಂಕದ 4ನೇ ವಿಸ್ತರಣೆ: 31-03-2021 ಶುಲ್ಕ : 0 (ಉಚಿತ)
ಜೋಡಣೆ ಮಾಡಲು ಕೊನೆಯ ದಿನಾಂಕದ 5ನೇ ವಿಸ್ತರಣೆ: 31-06-2021 ಶುಲ್ಕ : 0 (ಉಚಿತ)
ಜೋಡಣೆ ಮಾಡಲು ಕೊನೆಯ ದಿನಾಂಕದ 6ನೇ ವಿಸ್ತರಣೆ: 30-09-2021 ಶುಲ್ಕ : 0 (ಉಚಿತ)
ಜೋಡಣೆ ಮಾಡಲು ಕೊನೆಯ ದಿನಾಂಕದ 7ನೇ ವಿಸ್ತರಣೆ: 31-03-2022 ಶುಲ್ಕ : 0 (ಉಚಿತ)
ಜೋಡಣೆ ಮಾಡಲು ಕೊನೆಯ ದಿನಾಂಕದ 8ನೇ ವಿಸ್ತರಣೆ: 30-06-2022 ಶುಲ್ಕ : 500 (ದಂಡ)
ಜೋಡಣೆ ಮಾಡಲು ಕೊನೆಯ ದಿನಾಂಕದ 9ನೇ ವಿಸ್ತರಣೆ: 31-03-2023 ಶುಲ್ಕ : 1000 (ದಂಡ)

ಮೊದಲೆರಡು ಬಾರಿ ಜನರಿಗೆ ಮಾಹಿತಿ ಕೊರತೆ ಸಂಬಂಧಿಸಿದಂತೆ ವಿಸ್ತರಣೆ ಮಾಡಲಾಗಿತ್ತು. ನಂತರ 30-09-2021 ರ ವರೆಗಿನ ಎಲ್ಲಾ ವಿಸ್ತರಣೆ ಕೋವಿಡ್ ಸಂಕಷ್ಟದ ಕಾರಣದಿಂದ ಮಾಡಲಾಯಿತು. 31-03-2022 ರ ವರೆಗೂ ವಿಸ್ತರಣೆಯನ್ನು ಮಾಡಿಯೂ ಹಲವು ಮಂದಿ ಪಾನ್ ಆಧಾರ್ ಜೋಡಣೆ ಮಾಡಿಸದ ಕಾರಣ ದಂಡ ಸಹಿತ ಜೋಡಣೆ ಪ್ರರಂಭವಾಯಿತು.

Leave a Reply