ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಹೊರವಲಯದಲ್ಲಿನ ಸಂಗಮ್ ಚೆಕ್ ಪೋಸ್ಟ್ ಬಳಿ ಬುಧವಾರ ವ್ಯಕ್ತಿಯೋರ್ವರ ಬಳಿ ದಾಖಲೆ ಇಲ್ಲದ 13 ಲಕ್ಷ ರೂ. ಪತ್ತೆಯಾಗಿದೆ.
ಚೆಕ್ ಪೋಸ್ಟ್ ಬಳಿಯಲ್ಲಿ ಎಸ್.ಐ ಪ್ರಸಾದ್ ಕುಮಾರ್ ನೇತೃತ್ವದ ಪೊಲೀಸರ ತಂಡ ವಾಹನದ ತಪಾಸಣೆ ನಡೆಸುತ್ತಿದ್ದಾಗ ದಿಲೀಪ್ ಗೋಡ್ಸೆ (47) ಎನ್ನುವವರು ಹೀರೊ ಕಂಪೆನಿಯ ಯೂನಿಕಾರ್ನ್ ಮಾದರಿಯ ಕೆಎ 20 ಇಜೆ 5252 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ಈ ವೇಳೆ ಬೈಕ್ ಗೆ ಅಳವಡಿಸಿದ್ದ ಬಾಕ್ಸ್ ನಲ್ಲಿನ ಚೀಲದಲ್ಲಿ ದಾಖಲೆಯಿಲ್ಲದ 500 ರೂ ಮುಖ ಬೆಲೆಯ 13 ಲಕ್ಷ ರೂ. ಪತ್ತೆಯಾಗಿದೆ.
ವಿಚಾರಣೆ ವೇಳೆ ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲದೆ ಇರುವುದು ತಿಳಿದು ಬಂದಿದ್ದು, ಹಣವನ್ನು ವಶಕ್ಕೆ ಪಡೆದು ಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.