ಹಟ್ಟಿಯಂಗಡಿ: ಹಳೆಗನ್ನಡ ಲಿಪಿ ಸಂಸ್ಕೃತ ಭಾಷೆಯ ಪ್ರಾಚೀನ ಶಾಸನ ಪತ್ತೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನದ ತೊಟದಮನೆ ಸುಧಾಕರ ಶೆಟ್ಟಿ ಅವರ ಮನೆಯ ಆವರಣದಲ್ಲಿ ಶಾಸನವೊಂದು ಪತ್ತೆಯಾಗಿದ್ದು, ಇದು ಹಳೆಗನ್ನಡ ಲಿಪಿಯ ಸಂಸ್ಕೃತ ಭಾಷೆಯನ್ನು ಒಳಗೊಂಡಿದೆ.

Call us

Click Here

ಕಾಲಮಾನ ಉಲ್ಲೇಖ:
ಬಾದಾಮಿ ಚಾಲುಕ್ಯರ ವಿನಯಾದಿತ್ಯರ ಉಲ್ಲೇಖ ಈ ಶಾಸನದಲ್ಲಿ ಕಂಡು ಬಂದಿದ್ದು, ವಿನಯಾದಿತ್ಯರ ಕಾಲಮಾನ ಕ್ರಿ.ಶ 680 ರಿಂದ ಕ್ರಿ.ಶ 696 ಆಗಿರುತ್ತದೆ.ಹಾಗೇ ಆಳುಪರ ಪಾಂಡ್ಯ ಆಳುಪೇಂದ್ರ ಚಿತ್ರವಾಹನ ಕಾಲಮಾನವಾಗಿ ಕ್ರಿ.ಶ. 680 ರಿಂದ 730 ಆಗಿರುತ್ತದೆ. ವಿನಯಾದಿತ್ಯ ಹಾಗೂ ಚಿತ್ರವಾಹನರ ಕಾಲಮಾನ ಸರಿ ಹೊಂದುವಂತೆ ಸಿಕ್ಕಿರುವ ಈ ಶಾಸನಕ್ಕೆ 1327 ರಿಂದ 1343 ವಷ೯ದ ಪ್ರಾಚೀನ ಶಾಸನವಾಗಿದೆ (ಬಾದಾಮಿ ಚಲುಕ್ಯರ ವಿನಯಾದಿತ್ಯರ ಉಲ್ಲೇಖಿತ ತುಳುನಾಡಿನ ಪ್ರಾಚೀನ ಶಾಸನ)

ಆಳುವರಸನ ಮಗ ಚಿತ್ರವಾಹನ ಬಾದಾಮಿ ಚಲುಕ್ಯರ ವಿನಯಾದಿತ್ಯರ ಮಗಳು ರಾಣಿ ಕುಂಕುಮಾ ಮಹಾದೇವಿಗೂ ಆಳುಪರ ಚಿತ್ರವಾಹನರ ಜೊತೆ ಕೌಟುಂಬಿಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾರೆ. ಅದರಂತೆ ಕರಾವಳಿಯಲ್ಲಿ ಸುಧೀಘ೯ ವಷ೯ಗಳ ಕಾಲ ಆಳ್ವಿಕೆ ನಡೆಸಿದ ಆಳುಪರ ಸಂಬಂಧಗಳು ಬಾದಾಮಿ ಚಲುಕ್ಯರೊಂದಿಗೆ ಬಾಂಧವ್ಯವನ್ನು ಬೆಳಸಿಕೊಂಡಿದ್ದರು. ಪಾಂಡ್ಯರನ್ನು ಸೋಲಿಸಿ ಪಾಂಡ್ಯ ಕುಲವಲಂ ಕುರ್ವಾಣ ಎಂಬ ಬಿರುದು ಪಡೆದಿದ್ದರು. ಸೊರಬದಲ್ಲಿ ಸಿಕ್ಕಿರುವ ತಾಮ್ರ ಶಾಸನ ಬಾದಾಮಿ ಚಲುಕ್ಯ ವಿನಯಾದಿತ್ಯ ಹಾಗೂ ಆಳುಪರ ಚಿತ್ರವಾಹನರು ಸೇರಿ ಬನವಾಸಿಯ ಬಳಿಯ ಇಡೆವೊಳ್ ಸಾಲಿವೊಗೆ ಪ್ರದೇಶವನ್ನು ದಾನ ಮಾಡಿದ ವಿಚಾರ ಉಲ್ಲೇಖಿಸಲಾಯಿತು.ಈತನು ಪಾಂಡ್ಯ ದೊರೆ ಕೊಚ್ಚಡೆಯನ್ ತುಳುನಾಡಿನಲ್ಲಿ ಆಕ್ರಮಣ ಮಾಡಿದಾಗ ಅವನನ್ನು ಸೋಲಿಸಿ ಪಾಂಡ್ಯ ಕುಲವಲಂ ಕುವಾ೯ಣ ಎಂಬ ಬಿರುದು ಪಡೆದಿದ್ದ. ಚಿತ್ರವಾಹನ ಹೆಂಡತಿ ಬಾದಾಮಿ ಚಲುಕ್ಯರ ವಿಜಯಯಾದಿತ್ಯನ ತಂಗಿಯಾಗಿದ್ದಳು.

ಈ ಶಾಸನ ಗ್ರಾನೇಟ್ ಕಲ್ಲು ಬಳಕೆಯಿಂದ ಬಳಸಿದ ಶಾಸನವಾಗಿದೆ. ಇದರ ಅಗಲ 21.50 ಇಂಚು, ಎತ್ತರ 39.00 ಇಂಚು,ದಪ್ಪ 4.50 ಇಂಚು ಆಗಿದ್ದು ,ಮೂರು ಕಡೆ ಬರವಣಿಗೆಯ ಶಾಸನವಾಗಿದೆ. ಇದೊಂದು ದಾನ ಶಾಸನವಾಗಿದೆ

ಈ ಹಿಂದೆ ಪ್ರದೀಪ ಕುಮಾರ್ ಬಸ್ರೂರು ಅವರು, ತಮ್ಮ ಮಾಗ೯ದಶ೯ಕರಾದ ಪ್ರೋ. ಪುರುಷೋತ್ತಮ ಬಲ್ಯಾಯ ಹಾಗೂ ನಿವೃತ್ತ ಪ್ರೋ ಭಾಸ್ಕರ್ ಶೆಟ್ಟಿ ಸಹಕಾರದಿಂದ ಅಗಸ್ಟ್ 2019 ರಲ್ಲಿ ಪತ್ತೆ ಹಚ್ಚಿದ್ದು,ಸಂಪೂರ್ಣ ಅಧ್ಯಯನದ ಬಳಿಕ ಹೊಸ ಶಾಸನದ ಪಠ್ಯ ಪರಿಚಯಿಸಿದಂತಾಗಿದೆ.

Click here

Click here

Click here

Click Here

Call us

Call us

ಪಠ್ಯ ೧ ಮುಂಭಾಗ
೧ (ಸ್ವ)ಸ್ತಿ ಶ್ರೀಮತ್ ವಿನಯಾದಿತ್ಯ ರಾಪೃ..
೨ .ಜ್ಯ ಙ್ನಯೆ ಪಾಣ್ಡ್ಯಾಳುಪೇನ್ದ್ರ ಚಿತ್ರವಾಹನ
೩ ನರಾ ಅದ್ಧ೯ರಾಜ್ಯಂ ಕೆಯ ಕೊಚ್ಚೆಳರಸರಾ ದೇ
೪ ಶಮಾತ್ಯಂಕೆಯ ಕಣ್ಣರಸರಾ ಪಟ್ಟಿಯಾ
೫ ಮುದಿಮೆಕೆಯ ಕೊತ್ತಂಸಿಂಗಮ್ಮರಸರಾ
೬.ಮುದಿಮೆಯುಳ್ ಕಾದದು ಮರಿಯಾದಿ ವಚ್ಚ
೭ ಪಾಣಿ ಪಾಡಿಯಾ ಆತುರಾತೂರ ಸುಳ್ಳ
೮ ತವಳಿಯಾ ಮೂನೂವ್ವ೯ ತುಂದತನ್ವರ ಕ್ಕೆ ನಷ್ಟ
೯ ಪತಿತಂ ಕಳೆದು ನೂರನ್ತು ಡಿ? ನ್ದಲ
೧೦ ದಾಮ್ ಇದು ಅಲ್ಲಾದೆ ಅಕ್ರಂ
೧೧ ಪೊರದೆತ್ತಿ ದೊನ್ವ ಞ್ಚ ಮ
೧೨ ಹಾ ಪಾತಕ ಸಂಯುಕ್ತದ ಪ್ಪಾರ್
೧೩ ಸಾಮಾನ್ನ್ಯ ಸಹೀತ ವರೆದಾರ್

ಹಿಂಭಾಗ ೨
೧ ಸ್ವಸ್ತಿ ಶ್ರೀಮತ್ ಕೊಚ್ಚೆಳರ್.
೨ ವಚ್ಚ ಪಾಣಿ ಪಾಡಿಯೂ
೩ ಪಸಿದ್ದಗೆ೯ ವಿಶಾಖೆ ಶ್ಗಾಲನಿತ್ತದು
೪ ಕರುಪೊತ್ತಳ್ಗೆಲ್ಲಾ ಬಟ್ಟಿ ಅದುವ
೫ ದು ಪತ್ತೊನ್ದಿಯುಂ ಬಿಟ್ಟಿಯುಂ ಸಹಿತಮಾ
೬ ಗೆ ಎಲ್ಲಾ ಅಕರಮುಂ ಕಾದ ..
೭ . . ಲ್ಲಾ ವ ನ್ಯಾಯಕ .ನುಗಾ
೮.ಮುಣ್ಡಕೆಯೆ ನುಪ . . . .
೯. . . ರ . . . .
೧೦ ಕಾದಂದು ಸವ್ವ೯ ಪರಿಹಾರ ಮಾ ಸ(ಣಿ)
೧೧ ಳ ಗೀ ಎಮವಾಳೆಗ ಕ್ ಸಹಿತ
೧೨ ಮಾಗೆ ಆಳುವರಸ ಕೊಟ್ಟಾರ್
ಮೂರನೇ ಬದಿ ( ಪಟ್ಟಿಯ ಶಾಸನ ಅಸ್ಪಷ್ಠ)

ಈ ಶಾಸನದ ಪಡಿಯಚ್ಚು ತೆಗೆಯುವಲ್ಲಿ ಸುಭಾಶ್ ನಾಯಕ್ ಬಂಟಕಲ್ಲು, ಪಠ್ಯ ಓದಲು ಕನಾ೯ಟಕ ಇತಿಹಾಸ ಅಕಾಡೆಮಿಯ ರಾಜ್ಯ ಅಧ್ಯಕ್ಷರಾಗಿರುವ ಡಾ. ದೇವರಕೊಂಡ ರೆಡ್ಡಿ, ಪತ್ತೆ ಹಚ್ಚುವಲ್ಲಿ ಸಹಕರಿಸಿದ ವಿಜೇಂದ್ರ ಆಚಾಯ೯ ಹಟ್ಟಿಕುದ್ರು, ಅಕ್ಷತಾ ಗಿರೀಶ್ ಐತಾಳ್, ಚಂದನ್ ಗೌಡ, ವಿಜಯಾ ಎಸ್. ಶೆಟ್ಟಿ ಸಹಕರಿಸಿರುತ್ತಾರೆ ಎಂದು ಭಾರತೀಯ ಇತಿಹಾಸ ಸಂಕಲನ ಸಮಿತಿ ಜಿಲ್ಲಾ ಸಂಚಾಲಕ
ಪ್ರದೀಪ ಕುಮಾರ್ ಬಸ್ರೂರು ತಿಳಿಸಿದ್ದಾರೆ.

Leave a Reply