ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನವೇ ಶಿಕ್ಷಣದ ಗುರಿ: ಕ್ಷೇತ್ರ ಶಿಕ್ಷಣಾಧಿಕಾರಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೈಂದೂರು ಮತ್ತು ಜೆಸಿಐ ಬೈಂದೂರು ಸಿಟಿ ಇವರ ಆಶ್ರಯದಲ್ಲಿ ಸೆಂಟರ್ ಫಾರ್ ಅಪ್ಲೈಡ್ ಥಿಯೇಟರ್ ಸೈನ್ಸ್ ಮೈಸೂರು ಮತ್ತು ಚಿತ್ರದುರ್ಗ ಇವರ ತರಬೇತಿ ಸಂಪನ್ಮೂಲ ಸಹಕಾರದಲ್ಲಿ ಕಲೆಯೊಂದಿಗೆ ಕಲಿಕೆ ಐದು ದಿನಗಳ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಇತ್ತೀಚಿಗೆ ಜರುಗಿತು.

Call us

Click Here

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಜಿಎಂ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನವೇ ಶಿಕ್ಷಣದ ಗುರಿಯಾಗಿದ್ದು ಶಿಕ್ಷಕರು ಸಹಪಠ್ಯ ಚಟುವಟಿಕೆಗಳೊಂದಿಗೆ ಪಠ್ಯ ವಿಷಯಗಳನ್ನು ಆಸಕ್ತಿಯಿಂದ ಕಲಿಯುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ಶಿಬಿರಕ್ಕೆ ಶುಭ ಹಾರೈಸಿದರು.

ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ನರೇಂದ್ರ ಶೇಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು ಆ ಮೂಲಕ ಶಿಬಿರದ ಯಶಸ್ವಿಗೆ ಸಹಕರಿಸಿ ಎಂದು ಹೇಳಿದರು.

ಶಿಬಿರದಸಂಪನ್ಮೂಲ ವ್ಯಕ್ತಿಯಾಗಿ ರಂಗಕರ್ಮಿ ನಾ ಶ್ರೀನಿವಾಸ್ ಮೈಸೂರು ಮತ್ತು ರಾಧಾ ಕೊಡಗು ಶಿಬಿರದ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಬೈಂದೂರು ಇನ್ನರ್’ವಿಲ್ ಅಧ್ಯಕ್ಷರಾದ ಭಾನುಮತಿ, ಶಿಕ್ಷಕಿಯರಾದ ಅನ್ನಪೂರ್ಣ, ಮಮತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಪದವೀಧರ ಮುಖ್ಯೋಪಾಧ್ಯಾಯರಾದ ಜನಾರ್ಧನ ದೇವಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೀಣಾ ಹೆಗಡೆ ಸರ್ವರನ್ನು ಸ್ವಾಗತಿಸಿದರು. ಸರಸ್ವತಿ ಕೆ.ಎ ಧನ್ಯವಾದ ಸಲ್ಲಿಸಿದರು. ನಾಗರತ್ನ ಹಾಗೂ ಕಲಾವತಿ ಸಹಕರಿಸಿದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ಸಂಯೋಜಿಸಿದ್ದರು

Click here

Click here

Click here

Click Here

Call us

Call us

Leave a Reply