ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಮಿತಾ, ದ್ವಿತೀಯ ಪಿಯು ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರ ಜೊತೆಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ.
ಶಮಿತಾ ಕನ್ನಡದಲ್ಲಿ 98, ಇಂಗ್ಲಿಷ್ 90, ಎಕನಾಮಿಕ್ಸ್ 96, ಬುಸಿನೆಸ್ ಸ್ಟಡೀಸ್ 92, ಅಕೌಂಟೆನ್ಸಿ 98, ಕಂಪ್ಯೂಟರ್ ಸೈನ್ಸ್ 100 ಅಂಕದೊಂದಿಗೆ ಒಟ್ಟು 574 ಅಂಕ ಪಡೆದಿದ್ದಾಳೆ. ಈಕೆ ಯಡ್ತರೆ ನಿವಾಸಿ ಶಿವರಾಮ ಮತ್ತು ಸುಶೀಲಾ ದಂಪತಿಗಳ ಪುತ್ರಿ.