ನೇರಳಕಟ್ಟೆ: ಜನರು ನನಗೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡುವ ವಿಶ್ವಾಸವಿದೆ – ಗುರುರಾಜ ಗಂಟಿಹೊಳೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮೇ.10ರಂದು ನಡೆಯುವ ಚುನಾವಣೆಯಲ್ಲಿ ಜನರೇ ದೇವರೆಂದು ಭಾವಿಸಿ, ಆಶೀರ್ವಾದವನ್ನು ಬೇಡುತ್ತಿದ್ದೇನೆ. ಬಂದೂರಿನ ಜನ ನನಗೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಹೇಳಿದರು.

Call us

Click Here

ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ ಸಮೀಪದ ಜಾಡ್ಕಟ್ಟುವಿನಲ್ಲಿ ನಡೆದ ಬಿಜೆಪಿ ಕಾರ‍್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಟಿಕೆಟ್ ಘೋಷಣೆಯಾದ 5 ನಿಮಿಷದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ಮಾಡಿ, ಹೆಮ್ಮೆಯ ಬಿಜೆಪಿ ಪಕ್ಷದ ಅಭ್ಯರ್ಥಿ ನೀವು. ನಾವು ನಿಮ್ಮೊಂದಿಗೆ ನಿಂತು, ಗೆಲ್ಲಿಸಿ ಕೊಡುತ್ತೇವೆ. ಊರು ಒಳ್ಳೆಯದು ಮಾಡುವ ಅಂದಿದ್ದರು. ನನ್ನಂತೆ ಅವರು ಸಹ ಸಾಮಾನ್ಯ ಮನೆಯಿಂದ ಬಂದವರು ಎಂದು ಗಂಟಿಹೊಳೆ ಹೇಳಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಕ್ಷದ ಜನಸಾಮಾನ್ಯರ ಮುಂದೆ ಓಡಾಟ ಮಾಡಿದವರು. ಸಂಘಟನೆ, ಪಕ್ಷದ ಪರಿಪೂರ್ಣ ಕಲ್ಪನೆ ಇರುವವರು. ಸಾಮಾನ್ಯ ಜನರೊಂದಿಗೆ ಬೆರೆಯುವ ಗುರುರಾಜ್ ಗಂಟಿಹೊಳೆ ಅವರು ವಿಧಾನಸೌಧಕ್ಕೆ ಹೋದರೆ, ಪರಿಣಾಮಕಾರಿ ಕೆಲಸಗಳಾಗುತ್ತವೆ. ಎಲ್ಲ ವರ್ಗದ ಜನರ ಧ್ವನಿಯಾಗುತ್ತಾರೆ. ನಿಶ್ಚಯವಾಗಿ ಬಿಜೆಪಿ ಬಂದೂರಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ರಾಜ್ಯ ಮೋರ್ಚಾ ಕಾರ‍್ಯದರ್ಶಿ ಗೋವಿಂದ ಬಾಬು ಪೂಜಾರಿ, ಮಂಡಲದ ಅ‘ಕ್ಷ ದೀಪಕ್ ಕುಮಾರ್ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಪ್ರಮುಖರಾದ ಶರತ್ ಶೆಟ್ಟಿ, ಸಂತೋಷ್ ಪೂಜಾರಿ, ಗಿರೀಶ್ ನಾಯ್ಕ್, ಕರಣ್ ಪೂಜಾರಿ, ಪದಾಧಿಕಾರಿಗಳು, ಕಾರ‍್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Click here

Click here

Click here

Click Here

Call us

Call us

Leave a Reply