ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿರುವ ಹೊತ್ತಿನಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಗಳಲ್ಲಿಯೇ ಮತದಾನ ಮಾಡಲು ಅವಕಾಶ ನೀಡಿದ್ದರೂ 108 ವರ್ಷದ ವೃದ್ಧೆಯೂರ್ವರು ಸ್ವತಃ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ತಗ್ಗರ್ಸೆಯ ನಿವಾಸಿ ಚಂದು ದೇವಾಡಿಗ ಅವರು ಸ್ವತಃ ತಗ್ಗರ್ಸೆ ಸ.ಹಿ.ಪ್ರಾ ಶಾಲೆಯ ಮತಗಟ್ಟೆಯೊಳಕ್ಕೆ ನಡೆದು ಬಂದು ಅತ್ಯುತ್ಸಾಹದಿಂದಲೇ ಮತ ಚಲಾಯಿಸಿ ಯುವಸಮೂಹಕ್ಕೆ ಮಾದರಿಯಾಗಿದ್ದಾರೆ.
80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಿದ್ದರೂ, ಮತಗಟ್ಟೆಗೆ ತೆರಳಿ ಮತದಾನ ಮಾಡುವುದಾಗಿ ಚಂದು ದೇವಾಡಿಗ ಅವರು ಮೊದಲೇ ತಿಳಿಸಿದ್ದರಿಂದ ಮತಗಟ್ಟೆಗೆ ಬರಲು ಅವಕಾಶ ಮಾಡಿಕೊಡಲಾಗಿತ್ತು.