ಮೇ.20ರಿಂದ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ಮಹಿಷಮರ್ದಿನಿ ದೇವಸ್ಥಾನದ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕುಂಭಾಭಿಷೇಕ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಗಂಗನಾಡು ವನಕೊಡ್ಲು ಶ್ರೀ ಮಹಾಲಿಂಗೇಶ್ವರ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮೇ 20 ರಿಂದ ಮೇ 26ರವರೆಗೆ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕುಂಭಾಭಿಷೇಕ, ಶೈವೋತ್ಸವ ಮಹಾರಂಗ ಪೂಜಾ, ದೀಪಾರಾಧನೆ ನಡೆಯಲಿದೆ ಎಂದು ದೇವಳದ ಅನುವಂಶಿಕ ಆಡಳಿತ ಮೊಕ್ತಸರ ಡಾ. ಯಡ್ತರೆ ರಾಜಮೋಹನ್ ಶೆಟ್ಟಿ ತಿಳಿಸಿದ್ದಾರೆ.

Call us

Click Here

ಬೈಂದೂರು ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 22ರಂದು ಬೆಳಗ್ಗೆ ಶಿಖರ ಪ್ರತಿಷ್ಠೆ, ಪ್ರಾಸಾದ ಪ್ರತಿಷ್ಠೆ, ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ, ಮಹಿಷಮರ್ದಿನಿ ಮತ್ತು ಗಣಪತಿ ದೇವರ ನೂತನ ಬಿಂಬ ಪ್ರತಿಷ್ಠೆ, ಪಾರ್ವತಿ ದೇವಿಯ ಪ್ರತಿಷ್ಠೆ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಆಚಾರ್ಯ ದಕ್ಷಿಣೆ, ಪ್ರತಿಜ್ಞಾವಿಧಿ ಮಹಾಪೂಜೆ ನಡೆಯಲಿದೆ.

ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಿಟ್ಟೆ ಸ್ವಾಯುತ್ತ ವಿಶ್ವವಿದ್ಯಾಲಯ ಕುಲಪತಿ ಡಾ.ಎನ್. ವಿನಯ ಹೆಗ್ಡೆ, ಮಂಗಳೂರು ತೇಜಸ್ವಿನಿ ಆಸ್ಪತ್ರೆಯ ವೈದ್ಯ ಡಾ.ಎಂ.ಶಾಂತರಾಮ ಶೆಟ್ಟಿ ಅವರಿಗೆ ಗೌರವಾರ್ಪಣೆ ಇರಲಿದೆ. ಪುತ್ತೂರು ವಿವೇಕಾ ನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಸಂಸದ ಬಿ.ವೈ. ರಾಘವೇಂದ್ರ, ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಟ್ರಸ್ಟಿ ಯು.ಟಿ. ಆಳ್ವ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತಸರ ಚಿತ್ತೂರು ಸದಾಶಿವ ಶೆಟ್ಟಿ, ಧಾರವಾಡ ಉದ್ಯಮಿ ಯು.ಬಿ. ಶೆಟ್ಟಿ, ಬೆಳಗಾವಿ ಉದ್ಯಮಿ ಎಚ್. ಜಯಶೀಲ ಶೆಟ್ಟಿ ಭಾಗವಹಿಸಲಿದ್ದಾರೆ.

ಮೇ 25ರಂದು ದೇವರಿಗೆ ಪಂಚಾಮೃತಾ ಭಿಷೇಕ, ರುದ್ರಾಭಿಷೇಕ, ಕಲಶಾಭಿಷೇಕ ಪ್ರಾರಂಭ, ಬೆಳಗ್ಗೆ 9.40ರ ಮಿಥುನ ಲಗ್ನ ಸುಮುರ್ಹೂದಲ್ಲಿ ದೇವರಿಗೆ ಬ್ರಹ್ಮಕುಂಭಾಭಿಷೇಕ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅಂದು ಅಂದು ಚಂಡಿಕಾ ಹೋಮ, ಮಹಾಪೂಜೆ, ಪಲ್ಲ ಪೂಜೆಗಳು ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೇರಳಕಟ್ಟೆ ಎ.ಬಿ ಶೆಟ್ಟಿ ಡೆಂಟಲ್ ಕಾಲೇಜ್ ಫೌಂಡರ್ ಡಾ.ಎನ್. ಶ್ರೀಧರ್ ಶೆಟ್ಟಿ ಅವರಿಗೆ ಗೌರವಾರ್ಪಣೆ ಇರಲಿದೆ. ಮಂಗಳೂರು ಕರಾವಳಿ ಕಾಲೇಜು ಸಮೂಹ ಅಧ್ಯಕ್ಷ ಗಣೇಶ್ ರಾವ್, ಮುಂಬಯಿ ಹೇರಂಭ ಇಂಡಸ್ಟ್ರೀಸ್ ಚೇರ್ಮನ್ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಇಸ್ಲಂಪಾಡಿ ರಾಜ ರಾಜೇಶ್ವರಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಕೆ.ಕೆ ಶೆಟ್ಟಿ, ಬೆಂಗಳೂರು ಭವಾನಿ ಇಂಡಸ್ಟ್ರೀಸ್ನ ಎ. ಜಯಕರ ಹೆಗ್ಡೆ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.

Click here

Click here

Click here

Click Here

Call us

Call us

ಮೇ 19ರಂದು ಸಂಜೆ ಬೈಂದೂರು ಸೇನೇಶ್ವರ ದೇವಸ್ಥಾನದಿಂದ ವನಕೊಡ್ಲು ಮಹಾಲಿಂಗೇಶ್ವರ ಮಹಿಷಮರ್ದಿನಿ ದೇವಸ್ಥಾನದ ತನಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ವೈ. ಅರ್ಜುನ್ ಶೆಟ್ಟಿ ಯಡ್ತರೆ, ಸಹ ಸಂಚಾಲಕ ಕುಮಾರ್ ಮರಾಠಿ ಗಂಗನಾಡು ಉಪಸ್ಥಿತರಿದ್ದರು.

Leave a Reply