ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ‘ಯುವ ಮೆರಿಡಿಯನ್’ ಮಾಲೀಕರಾದ ಉದಯ್ ಕುಮಾರ್ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದ ಸುಮಾರು 21,000 ರೂಪಾಯಿ ಮೌಲ್ಯದ ಬ್ಯಾಗುಗಳನ್ನು ಶನಿವಾರ ವಿತರಿಸಲಾಯಿತು.
ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ ಗಾಣಿಗ ಹಾಗೂ ಮಾಜಿ ಎಸ್ಡಿಎಂಸಿ ಅಧ್ಯಕ್ಷರಾದ ವೀರಭದ್ರ ಗಾಣಿಗ ಬ್ಯಾಗುಗಳನ್ನು ವಿತರಿಸಿದರು. ಈ ಕೊಡುಗೆ ಶಾಲೆಗೆ ತರುವಲ್ಲಿ ಶ್ರಮಿಸಿದ ಮಾಧ್ಯಮ ಪ್ರತಿನಿಧಿ ಮಂಜುನಾಥ ಗಾಣಿಗ, ತಿರುಮಲ ಎಫ್.ಸಿ ಫ್ರೆಂಡ್ಸ್ ತಗ್ಗರ್ಸೆ ಸದಸ್ಯರಾದ ಹರ್ಷೇಂದ್ರ , ದಿಲೀಪ್ ಕುಮಾರ್, ಅಣ್ಣಪ್ಪ ಎಸ್. ಉಪಸ್ಥಿತರಿದ್ದರು.
ಈ ವೇಳೆ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.