ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ನ್ಯಾಯಾಲಯದ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ, ಬೈಂದೂರು ವಕೀಲರ ಸಂಘ (ರಿ) ಬೈಂದೂರು ಹಾಗೂ ಅಭಿಯೋಗ ಇಲಾಖೆ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು.
ಬೈಂದೂರು ನ್ಯಾಯಾಲಯದ ನ್ಯಾಯಾಧೀಶರಾದ ವಿದ್ಯಾ ಅವರು ಮಾತನಾಡಿ ಯೋಗಾಭ್ಯಾಸದಿಂದ ಆರೋಗ್ಯದ ವೃದ್ಧಿಯೊಂದಿಗೆ ಮನಸ್ಸಿನ ನಿಗ್ರಹ ಕೂಡ ಸಾಧ್ಯ ಎಂದರು. ಮುಖ್ಯ ಅತಿಥಿ ಹನುಮಂತ ಜಿ ಮಾತನಾಡಿ ಯೋಗದ ಪ್ರಾಮುಖ್ಯತೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಬೈಂದೂರು ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ, ಸಹಾಯಕ ಅಭಿಯೋಜಕರಾದ ಇಂದಿರಾ ನಾಯ್ಕ, ಹಾಗೂ ಮುಖ್ಯ ಅತಿಥಿಯಾಗಿ ಯೋಗ ಪಟು ಹನುಮಂತ ಜಿ ಅವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಯೋಗ ಪಟು ಹನುಮಂತ ಜಿ ಅವರು ಯೋಗ ತರಬೇತಿ ನೀಡಿದರು. ಬೈಂದೂರು ವಕೀಲರ ಸಂಘದ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು