ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಉಪ್ಪುಂದ ನೇತೃತ್ವದಲ್ಲಿ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಬಂಜರು ಭೂಮಿಯನ್ನು ಹಸನಾಗಿಸುವ ಸಂಕಲ್ಪದೊಂದಿಗೆ ಶನಿವಾರ ಶಿರೂರು ಕರಾವಳಿಯಲ್ಲಿ ಆಯೋಜಿಸಲಾದ “ವಿದ್ಯಾರ್ಥಿಗಳಿಂದ ಗದ್ದೆ ನಾಟಿ” ಕಾರ್ಯಕ್ರಮಕ್ಕೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಆಸಕ್ತಿ ಹಾಗೂ ಅರಿವು ಮೂಡಿಸುವುದು ಅಗತ್ಯ. ಆ ದಿಸೆಯಲ್ಲಿ ಇಂದಿನ ಕಾರ್ಯಕ್ರಮ ಪ್ರಾಯೋಗಿಕ ಅನುಭವ ನೀಡಲಿದೆ. ಇಂತಹ ಪ್ರಯತ್ನಗಳ ಮೂಲಕ ಪರಿಸರ ಕಾಳಜಿ ಹೆಚ್ಚುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕಾಲೇಜು ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ, ಶಿರೂರು ರೈತರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ರೈತ ಸಂಘದ ಉಪಾಧ್ಯಕ್ಷರು ವೆಂಕಟ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷ ನಾಗರಾಜ ಪೂಜಾರಿ, ಅಶೋಕ್ ಶೆಟ್ಟಿ ಕಾರಿಕಟ್ಟೆ, ಯುವಶಕ್ತಿ ಅಧ್ಯಕ್ಷರಾದ ವಿಠಲ ಬಿಲ್ಲವ, ಎನ್ಎಸ್ಎಸ್ ಯೋಜನಾಧಿಕಾರಿ ಲತಾ ಪೂಜಾರಿ, ನವೀನ್ ಹೆಚ್. ಜಿ ಉಪ್ಪುಂದ ಜೆಸಿಐ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.













