ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವದ ಧ್ವಜಾರೋಹಣ ಸಮಾರಂಭಕ್ಕೆ ಕುಂದಾಪುರ ತಾಲೂಕಿನ ಸಿದ್ದಾಪುರದ ಕೆಳಪೇಟೆ ಸೂರ ಪೂಜಾರಿ ಮತ್ತು ಗಿರಿಜಾ ಪೂಜಾರಿ ದಂಪತಿಯನ್ನು ಕೇಂದ್ರ ಸರಕಾರದ ಪ್ರಧಾನಮಂತ್ರಿ ಸಚಿವಾಲಯ ಆಮಂತ್ರಿಸಿದೆ.
ಅವರು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಮೃತ ಸರೋವರ ಯೋಜನೆಯಲ್ಲಿ ಸಿದ್ದಾಪುರ ಗ್ರಾಮದ ಬ್ರಹ್ಮಕೆರೆಯನ್ನು 100 ದಿನ ಮಾನವ ಶ್ರಮದ ಮೂಲಕ ಹೂಳೆತ್ತುವ ಕಾರ್ಯವನ್ನು ಇವರು ಮಾಡಿದ್ದರು.
ಅಮೃತ ಸರೋವರ ಯೋಜನೆಯ ಮೂಲಕ 100 ದಿನಕ್ಕೂಹೆಚ್ಚು ಕೂಲಿ ಕೆಲಸಮಾಡಿದ ದಂಪತಿಯನ್ನು ಸ್ವಾತಂತ್ರೋತ್ಸವದ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರವು ಆಮಂತ್ರಿಸಿದೆ. ರಾಜ್ಯದ 34 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಮಾಡಿದ್ದು, 6 ದಂಪತಿಗಳು ಅಗಸ್ಟ್ 15ರಂದು ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.