ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೇವಲ ಐದು ಗಂಟೆಯೊಳಗೆ ಸಂತ್ರಸ್ಥೆಯೋರ್ವರಿಗೆ ವಿಧವಾ ವೇತನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಂಜೂರು ಮಾಡಿಸಿದ್ದಾರೆ.
ಜು.4ರ ರಾತ್ರಿ ತೀವ್ರ ಮಳೆಯಿಂದಾಗಿ ರಸ್ತೆ ಕಾಣದೆ ಸ್ಕೂಟರ್ ಸಮೇತ ಕೆರೆಗೆ ಬಿದ್ದು ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ದಿನಕರ ಶೆಟ್ಟಿ(53) ಎಂಬುವರು ಮೃತಪಟ್ಟಿದ್ದರು. ಅವರ ಪತ್ನಿ ಎಂ.ಶೀಲಾ ಶೆಟ್ಟಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಸಚಿವರನ್ನು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭೇಟಿ ಮಾಡಿ, ವಿಧವಾ ವೇತನ ಮಂಜೂರು ಮಾಡಿಸುವಂತೆ ಮನವಿ ಸಲ್ಲಿಸಿದ್ದರು.
ಮಹಿಳೆಯ ಮನವಿಗೆ ಸ್ವೀಕರಿಸಿದ ಸಚಿವೆ ಹೆಬ್ಬಾಳ್ವರ್, ತಕ್ಷಣ ಕ್ರಮ ಕೈಗೊಳ್ಳುವಂತೆ ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಅವರಿಗೆ ಸೂಚಿಸಿದರು. ಅದರಂತೆ ಸಂಜೆ 6 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತು ನಡೆದ ಸಭೆಯ ನಂತರ ನೊಂದ ಮಹಿಳೆಯ ಪರವಾಗಿ ಅವರ ಸಹೋದರಿ ಮಾಲತಿ ಶೆಟ್ಟಿ ಅವರನ್ನು ಕರೆಯಿಸಿ, ವಿಧವಾ ವೇತನ ಮಂಜೂರಾತಿ ಆದೇಶಪತ್ರವನ್ನು ಹಸ್ತಾಂತರಿಸಿ ಸಾಂತ್ವನ ಹೇಳಿದರು. ಸಚಿವರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:
► ಮಲ್ಯಾಡಿ: ದ್ವಿಚಕ್ರ ವಾಹನ ಸಹಿತ ಕೆರೆಗೆ ಬಿದ್ದು ವ್ಯಕ್ತಿ ಸಾವು – https://kundapraa.com/?p=67497 .
► ಕೆರೆಗೆ ಬಿದ್ದು ಮೃತಪಟ್ಟ ವ್ಯಕ್ತಿಯ ಮನೆಗೆ ಶಾಸಕ ಕೊಡ್ಗಿ ಭೇಟಿ – https://kundapraa.com/?p=67623 .