ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಮಕ್ಷತ್ರಿಯ ಸಮುದಾಯವು ಸಮಾಜದಲ್ಲಿ ಪ್ರಗತಿಯ ಹಾದಿಯಲ್ಲಿದೆ. ಮುಂದೆ ಸಾಗಿದವರು ಎಲ್ಲರನ್ನೂ ಒಂದುಗೂಡಿಸಿಕೊಂಡು ಕೊಂಡೊಯ್ಯುವ ಮಹತ್ತರ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದಾರೆ. ಹಾಗಾಗಿಯೇ ಇಂದು ವಿದ್ಯಾರ್ಥಿವೇತನ, ಮನೆನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಸಾಕಾರಗೊಳಿಸಲು ಸಾಧ್ಯವಾಗಿದೆ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ಹೇಳಿದರು.
ಅವರು ಭಾನುವಾರ ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಿ. ಬೈಂದೂರು ಇದರ 11ನೇ ವರ್ಷದ ಟ್ರಸ್ಟ್ ದಿನಾಚರಣೆ ಹಾಗೂ ಸಾರ್ವಜನಿಕ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಇಂದು ಬದುಕಿನಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದು, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾಗಬೇಕುಎಂದರು.
ಪ್ರೊಫೆಸರ್ ಡಾ. ಶಿವಾನಂದ ನಾಯಕ್ ಅವರು ಮಾತನಾಡಿ, ಆಧುನಿಕ ಯುಗದಲ್ಲಿ ಬದಲಾದ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದರೆ ನಮ್ಮ ದೇಹದ ಸಮಸ್ಯೆಗಳ ಬಗ್ಗೆಯೇ ಕಾಳಜಿ ಇಲ್ಲದೇ ಇದ್ದರೆ ಮುಂದೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರಳ ಯೋಗಾಭ್ಯಾಸ, ಆಹಾರ ಕ್ರಮಗಳನ್ನು ಅನುಸರಿಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ರೂಡಿಸಿಕೊಳ್ಳಬೇಕು ಎಂದರು.
ಈ ವೇಳೆ ಅಂತರಾಷ್ಟ್ರೀಯ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ. ಶಿವಾನಂದ ನಾಯಕ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಉದಯ ಎಂ.ಪಿ. ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ನಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಮನೆ ಹಸ್ತಾಂತರ, ವಿದ್ಯಾರ್ಥಿ ದತ್ತು ಸ್ವೀಕಾರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ಹಸ್ತಾಂತರ ನಡೆಯಿತು. ನಿಧನರಾದ ಟ್ರಸ್ಟೀಗಳಾದ ಶ್ರೀನಿವಾಸ ಮಾಸ್ಟರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನೂತನವಾಗಿ ಸೇರ್ಪಡೆಗೊಂಡ ಟ್ರಸ್ಟೀಗಳಾದ ವಸಂತಿ ವಾಸುದೇವ ಹಾಗೂ ಸೀತಾ ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು.
ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರೆಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯೆ, ಆರೋಗ್ಯ, ವಸತಿ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು. ಅದರಿಂದ ವಂಚಿತರಾಗುವವರಿಗೆ ನೆರವು ನೀಡಲು ಕಳೆದ ಒಂದು ದಶಕದಿಂದ ಸೇವೆ ಸಲ್ಲಿಸಲಾಗುತ್ತಿದೆ. ಟ್ರಸ್ಟ್ ಸಹಾಯ ಪಡೆದು ಸಬಲರಾದವರು ಮತ್ತಷ್ಟು ಜನರಿಗೆ ದಾನ ನೀಡಿದರೆ ಅದೇ ನಾವು ಸಮುದಾಯಕ್ಕೆ ಮಾಡಬಹುದಾದ ಬಹುದೊಡ್ಡ ಸೇವೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ಶಿವಕುಮಾರ್ ಜಿ., ಉದ್ಯಮಿ ರವೀಂದ್ರ ಉಳ್ಳೂರು, ರಕ್ಷಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಸತೀಶ್ ನರಸಿಂಹ ಶೇರುಗಾರ್, ಮಕ್ಕಳ ತಜ್ಞ ವೈದ್ಯ ಡಾ. ಲಕ್ಷ್ಮೀನಾರಾಯಣ ಬಿ., ಉದ್ಯಮಿ ವೆಂಕಟೇಶ ಬಿಜೂರು, ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರಾಮಕೃಷ್ಣ ಸಿ ಭಾಗವಹಿಸಿದ್ದರು.
ಟ್ರಸ್ಟೀಗಳಾದ ಕೆ.ಜಿ. ನಾಗಪ್ಪ ಶೇರುಗಾರ್, ವೆಂಕಟ್ರಮಣ ಬಿಜೂರು, ಬಿ. ಶ್ರೀನಿವಾಸ ಶೇರೆಗಾರ್, ಅಶೋಕ್ ಕುಮಾರ್ ಬಾಡ, ಬಿ. ಶ್ರೀಧರ ಪಡುವರಿ, ಶ್ರೀನಿವಾಸ ಜಿ. ಶಿವಮೊಗ್ಗ, ಪದ್ಮನಾಭ ಕೊತ್ವಾಲ್, ವೆಂಕಟೇಶ್ ಕೆ.ಟಿ ಬಿಜೂರು, ಶಶಿಧರ ನಾಯ್ಕ್ ಚನ್ನಗಿರಿ, ಹೆಚ್. ಸುಬ್ರಾಯ ಶೇರುಗಾರ್, ಜಯಾನಂದ ಹೋಬಳಿದಾರ್, ಜಯಂತಿ ನಾರಾಯಣ ರಾವ್, ನಾಗರಾಜ ಬಿಜೂರು, ಗೋಪಾಲಕೃಷ್ಣ ಕಲ್ಮಕ್ಕಿ, ಶ್ರೀಧರ ಪಿ ಪಡುವರಿ, ಚಂದ್ರಶೇಖರ ಕೆ. ಕೋಟೇಶ್ವರ, ಕೃಷ್ಣಯ್ಯ ವಿ. ಮದ್ದೋಡಿ ಉಪಸ್ಥಿತರಿದ್ದರು.
ಕೆ.ಎಂ.ಸಿ ಮಣಿಪಾಲದ ಸಹಯೋಗದೊಂದಿಗೆ ಬೆಳಿಗ್ಗೆ 9-30ರಿಂದ ಮಧ್ಯಾಹ್ನ 1 ಗಂಟೆಯ ತನಕ ಸಾರ್ವಜನಿಕ ರಕ್ತದಾನ ಶಿಬಿರ ಜರುಗಿತು.
ಟ್ರಸ್ಟ್ ಸಂಚಾಲಕ ಆನಂದ ಮದ್ದೋಡಿ ವಾರ್ಷಿಕ ವರದಿ ವಾಚಿಸಿದರು. ಬೈಂದೂರು ರಾಮಕ್ಷತ್ರಿಯ ಮಾತೃಮಂಡಳಿ ಸದಸ್ಯರು ಪ್ರಾರ್ಥಿಸಿದರು. ಟ್ರಸ್ಟಿಗಳಾದ ವೆಂಕಟಮಣ ಬಿಜೂರು ಸ್ವಾಗತಿಸಿ, ಗೋಪಾಲಕೃಷ್ಣ ಕಲ್ಮಕ್ಕಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಟ್ರಸ್ಟ್ ಸಂಚಾಲಕ ಕೇಶವ ನಾಯ್ಕ್ ವಂದಿಸಿದರು. ಶಿಕ್ಷಕರಾದ ಗಣಪತಿ ಹೋಬಳಿದಾರ್, ಸುಧಾಕರ ಪಿ, ಆನಂದ ಮದ್ದೊಡಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಭಾಸ್ಕರ ಬಾಡ, ವೆಂಕಟರಮಣ ಮಯ್ಯಾಡಿ, ಮಹಾಬಲೇಶ್ವರ, ರವಿರಾಜ್, ರಾಘವೇಂದ್ರ ದಡ್ಡು, ನಾಗರಾಜ ಬಾಡ, ರಾಘವೇಂದ್ರ ತಗ್ಗರ್ಸೆ, ದಿನಕರ ಪಟವಾಲ್ ಮೊದಲಾದವರು ಸಹಕರಿಸಿದರು.




























