ಉಳ್ತೂರು ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲದಿಂದ ವನಮಹೋತ್ಸವ – ಪರಿಸರ ಜಾಗೃತಿ ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಂದಿನ ಯುವಪೀಳಿಗೆ ಭವಿಷ್ಯದ ಬದುಕಿಗಾಗಿ ಪರಿಸರದ ಮಹತ್ವವನ್ನು ಅರಿತು ಗಿಡಮರಗಳ ಉಳಿವಿಗೆ ಕೈಜೋಡಿಸಬೇಕಾಗಿದೆ ಎಂದು ಕೋಟ ಆರಕ್ಷಕ ಠಾಣೆಯ ಉಪನಿರೀಕ್ಷಕ ಶಂಭುಲಿಂಗಯ್ಯ ಕರೆ ನೀಡಿದ್ದಾರೆ.

Call us

Click Here

ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ (ರಿ.) ಉಳ್ತೂರು ಇವರ ವತಿಯಿಂದ ಉಳ್ತೂರಿನ ದೇವಸ್ಥಾನದ ವಠಾರದಲ್ಲಿ ಆಯೋಜಿಸಿದ್ದ “ಹಸಿರೇ ಉಸಿರು” ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಗಿಡಮರಗಳ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಕೆದೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಮತ್ತು ವಿಜಯ್ ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

ಯುವಕ ಮಂಡಲದ ಅಧ್ಯಕ್ಷ ಅರುಣ್ ಶೆಟ್ಟಿ ಪ್ರಾಸ್ಥಾವಿಕ ಮಾತನಾಡಿದರು. ಗೌರವಾಧ್ಯಕ್ಷ ವೆಂಕಟೇಶ್ ಅಡಿಗ ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಆಚಾರ್ಯ ವಂದಿಸಿದರು. ಪ್ರತಾಪ್ ಶಟ್ಟಿ ಉಳ್ತೂರು ಕಾರ್ಯಕ್ರಮ ನಿರೂಪಿಸಿದರು.

ಉಳ್ತೂರು ಗ್ರಾಮದ ಸುಮಾರು 440 ಮನೆಗಳಿಗೂ ಸಸಿ ವಿತರಿಸುವುದು ಮತ್ತು ಉತ್ತಮವಾಗಿ ಸಾಕಿ ಸಲಹಿದವರಿಗೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸೂಕ್ತ ಸನ್ಮಾನ ಮತ್ತು ಗೌರವ ನೀಡಲು ತೀರ್ಮಾನಿಸಲಾಯಿತು.

Click here

Click here

Click here

Click Here

Call us

Call us

Leave a Reply