ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಯೋಧ್ಯೆ ಶ್ರೀ ರಾಮ ಮಂದಿರ ಪುನರ್ ನಿಮಾ೯ಣ ಕಾಯ೯ದ ಯಶಸ್ಸಿಗಾಗಿ ಶ್ರೀರಾಮ ಮಂದಿರ ಪರಿಸರದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಚತುವೇ೯ದ ಸಂಹಿತಾ ಯಾಗ, ಶ್ರೀಮದ್ ಭಾಗವತಾ – ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಯಾಗ ನಡೆಯುತ್ತಿದೆ. ವಿವಿಧ ಭಾಗಗಳಿಂದ ತೆರಳಿದ ವೇದ ಪಾರಂಗತ ಅರ್ಚಕರ ನೇತೃತದಲ್ಲಿ ಬೃಹತ್ ಯಾಗ ನಡೆಸಲಾಗುತ್ತಿದೆ.
ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್ ಅವರಿಗೂ ಆಹ್ವಾನವಿತ್ತು. ಅವರೊಂದಿಗೆ ಉದ್ಯಮಿಗಳಾದ ಭೀಮೇಶ್ ಕುಮಾರ್, ಶಿವಾನಂದ ಮಯ್ಯಾಡಿ, ರಾಜೇಶ್ ಹೋಬಳಿದಾರ್ ಹಾಗೂ ನಾಗರಾಜ ಹೆಬ್ಬಾಗಿಲು ಪಾಲ್ಗೊಂಡಿದ್ದರು.
ಈ ಸಂದರ್ಭ ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ಜೀರ್ಣೋದ್ಧಾರದ ಉಸ್ತುವಾರಿ ಹೊತ್ತಿರುವ ಪ್ರಮುಖರಲ್ಲಿ ಓರ್ವರಾದ ವಿಶ್ವ ಹಿಂದೂ ಪರಿಷತ್ತಿನ ಗೋಪಾಲ್ ಜೀ ಅವರನ್ನು ಭೇಟಿಯಾಗಿ ಅವರನ್ನು ಗೌರವಿಸಿದರು.