ಬಜೆಟ್ ಅಧಿವೇಶನದಲ್ಲಿ ಉಡುಪಿ ಜಿಲ್ಲೆಯ ಶಾಸಕರ ಸಾಧನೆ ಶೂನ್ಯ – ಕೆ. ವಿಕಾಸ್ ಹೆಗ್ಡೆ ಆರೋಪ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಯಾವುದೇ ಕ್ಷೇತ್ರ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕ ಅಧಿವೇಶನವೆಂದರೆ ಅದು ಬಜೆಟ್ ಅಧಿವೇಶನ. ಆದರೆ ಈ ಭಾರಿಯ ಬಜೆಟ್ ಅಧಿವೇಶನದಲ್ಲಿ ಉಡುಪಿ ಜಿಲ್ಲೆಯ ಶಾಸಕರುಗಳ ಸಾಧನೆ ಶೂನ್ಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.

Call us

Click Here

ವಿರೋಧ ಪಕ್ಷದ ಶಾಸಕರಾದರೂ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸರ್ಕಾರಕ್ಕೆ ತಮ್ಮ ಕ್ಷೇತ್ರದ ಹಾಗೂ ಜಿಲ್ಲೆಯ ಅತೀ ಅವಶ್ಯಕತೆಗಳ ಬಗ್ಗೆ ಗಮನಕ್ಕೆ ತಂದು ಅದನ್ನು ಮುಖ್ಯಮಂತ್ರಿಗಳ ಬಜೆಟ್ ಮೇಲಿನ ವಂದನಾ ಭಾಷಣದಲ್ಲಿ ಸೇರಿಸುವಲ್ಲಿ ಶ್ರಮವಹಿಸುವುದು ಹಿಂದಿನಿಂದ ನಡೆದು ಬಂದ ಕ್ರಮ. ಆದರೆ ಜಿಲ್ಲೆಯ ಶಾಸಕರು ಬಜೆಟ್ ಅಧಿವೇಶನವನ್ನು ಕೇವಲ ಪ್ರಚಾರ ಹಾಗೂ ರಾಜಕಾರಣಕ್ಕೆ ಬಳಸಿಕೊಂಡದ್ದು ಅವರ ಕ್ಷೇತ್ರ ಹಾಗೂ ಜಿಲ್ಲೆಗೆ ಮಾಡಿದ ಅನ್ಯಾಯ. ವಿಧಾನಸಭೆಯ ಕಾರ್ಯ ಕಲಾಪಗಳಲ್ಲಿ ಸಕ್ರಿಯ ಭಾಗವಹಿಸುವುದರ ಮೂಲಕ ಸದನದ ನೀತಿ, ನಿಯಮಗಳನ್ನು ಕಲಿಯ ಬೇಕಾದ ನೂತನ ಶಾಸಕರುಗಳು ಅದನ್ನು ಮಾಡದೆ ಕಾಗದ ಪತ್ರಗಳನ್ನು ಗೌರವಾನ್ವಿತ ವಿಧಾನಸಭಾ ಅಧ್ಯಕ್ಷರ ಪೀಠದ ಮೇಲೆ ಎಸೆದು ದುರ್ವರ್ತನೆ ತೋರಿ ಅಧಿವೇಶನದಿಂದ ಅಮಾನತುಗೊಂದದ್ದು ಜಿಲ್ಲೆಯ ಮತದಾರರು ನಾಚಿಕೆ ಪಡುವ ಸಂಗತಿ ಎಂದಿದ್ದಾರೆ.

ಇನ್ನಾದರೂ ಜೆಲ್ಲೆಯ ಬಿಜೆಪಿ ಶಾಸಕರುಗಳು ದ್ವೇಷದ ರಾಜಕಾರಣದ ಮೂಲಕ ಮತ ಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಜಿಲ್ಲೆಯ ಅಭಿವೃದ್ಧಿಯ ಪರ ಇನ್ನು ಚಿಂತಿಸಲಿ ಎಂದು ಕೆ. ವಿಕಾಸ್ ಹೆಗ್ಡೆ ಮೂಲಕ ಆಗ್ರಹಿಸಿದ್ದಾರೆ.

Leave a Reply