ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ 2023-24ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ ಶನಿವಾರ ಜರುಗಿತು.

ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ 

ಬೈಂದೂರು ರೋಟರಿ ಅಧ್ಯಕ್ಷ ಪ್ರಸಾದ್ ಪ್ರಭು ಮಾತನಾಡಿದರು
ಬೈಂದೂರು ರೋಟರಿ ಪೂರ್ವಾಧ್ಯಕ್ಷ ಗೋವಿಂದ ನಾಯ್ಕನಕಟ್ಟೆ ಅವರು ನೂತನ ಇಂಟರ್ಯಾಕ್ಟ್ ಅಧ್ಯಕ್ಷೆ ಸಿಂಚನಾ ಹಾಗೂ ಕಾರ್ಯದರ್ಶಿ ವಿಕಾಸ್ ಅವರಿಗೆ ಪದಪ್ರದಾನ ನೆರವೇರಿಸಿದ ಬಳಿಕ ಮಾತನಾಡಿ, 23 ವಿದ್ಯಾರ್ಥಿಗಳಿಂದ ಆರಂಭವಾದ ಇಂಟರ್ಯಾಕ್ಟ್ ಕ್ಲಬ್ ಇಂದು ಪ್ರಪಂಚದ ಪ್ರತಿ ರೋಟರಿ ಕ್ಲಬ್ ಪ್ರಾಯೋಜನೆಯಡಿ 5ಕ್ಕೂ ಹೆಚ್ಚು ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದೆ. ವಿಧ್ಯಾರ್ಥಿಗಳಿಗೆ ನಾಯಕತ್ವ ಹಾಗೂ ಸೇವೆಯ ಗುಣವನ್ನು ತಿಳಿಸುವುದು ಇಂಟರ್ಯಾಕ್ಟ್ ಕ್ಲಬ್ನ ಮುಖ್ಯ ಉದ್ದೇಶವಾಗಿದ್ದು, ಇದೂ ಹೀಗೆಯೇ ಮುಂದುವರಿದು ದೇಶಕ್ಕೆ ಉತ್ತಮ ಪ್ರಜೆ ಹಾಗೂ ನಾಯಕರನ್ನು ರೂಪಿಸುವ ತನಕವೂ ಸಾಗುತ್ತದೆ ಎಂದರು.
ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಪದ್ಮನಾಭ ಎಚ್, ವಿದ್ಯಾರ್ಥಿ ನಾಯಕ ಆನಂದ್ ಉಪಸ್ಥಿತರಿದ್ದರು. ನೂತನ ಇಂಟರ್ಯಾಕ್ಟ್ ಅಧ್ಯಕ್ಷೆ ಸಿಂಚನ ತಮ್ಮ ತಂಡವನ್ನು ಪರಿಚಯಿಸಿದರು. ಕಾರ್ಯದರ್ಶಿ ವಿಕಾಸ್ ವರ್ಷದ ಯೋಜನೆಗಳನ್ನು ಸಭೆಯ ಮುಂದಿಟ್ಟರು.
ಬೈಂದೂರು ರೋಟರಿ ಇಂಟರ್ಯಾಕ್ಟ್ ಕ್ಲಬ್ ಸಂಯೋಜಕ ಸುಧಾಕರ ಪಿ ಸ್ವಾಗತಿಸಿ, ಬೈಂದೂರು ಜ್ಯೂನಿಯರ್ ಕಾಲೇಜು ಇಂಟರ್ಯಾಕ್ಟ್ ಕ್ಲಬ್ ಸಂಯೋಜರಾದ ಕಮಲ ವಂದಿಸಿದರು. ವಿದ್ಯಾರ್ಥಿಗಳಾದ ಅನನ್ಯ, ಸಂಪದ ಪಿ ಕಾರ್ಯಕ್ರಮ ನಿರೂಪಿಸಿದರು.










