ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಪ್ರಸಿದ್ಧ ಆಸ್ಪತ್ರೆಗಳಲ್ಲೊಂದಾದ ಶ್ರೀಮಾತಾ ಆಸ್ಪತ್ರೆಯಲ್ಲಿ ಖ್ಯಾತ ವೈದ್ಯೆ ಡಾ. ಪುಪ್ಪಿಂದರ್ ಧುನ್ಪುತ್ ಪೂರ್ಣಾವಧಿಗೆ ಸೇವೆ ನೀಡಲಿದ್ದು, ಶುಕ್ರವಾರ ಆಸ್ಪತ್ರೆ ವತಿಯಿಂದ ಅವರನ್ನು ಸ್ವಾಗತಿಸಲಾಯಿತು.
ಎಂಬಿಬಿಎಸ್, ಎಂಡಿ ಪದವಿ ಹೊಂದಿರುವ ಡಾ. ಪುಪ್ಪಿಂದರ್ ಧುನ್ಪುತ್ ಅವರು ಹನ್ನೆರಡು ವರ್ಷಗಳಿಂದ ಮಣಿಪಾದಲ್ಲಿ ಸೇವೆ ಸಲ್ಲಿಸಿದ್ದು, ಸೆ.1ರಿಂದ ಶ್ರೀಮಾತಾ ಆಸ್ಪತ್ರೆಯಲ್ಲಿ ಕಾಯಂ ಆಗಿ ಸೇವೆ ಸಲ್ಲಿಸುತ್ತಾರೆ. ಕುಂದಾಪುರದಲ್ಲಿ ಮೊದಲ ಭಾರಿಗೆ ಮಹಿಳಾ ಫಿಸಿಶಿಯನ್ ಸೇವೆ ನೀಡಿತ್ತಿದ್ದಾರೆ.
ಹೃದಯ ರೋಗ, ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್, ಚರ್ಮದ ಸಮಸ್ಯೆ ಸಹಿತ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಪ್ರಕಾಶ ತೋಳಾರ್, ಡಾ. ಸತೀಶ್ ಪೂಜಾರಿ, ಡಾ. ಸವಿತಾ ಪ್ರಕಾಶ ತೋಳಾರ್, ನೇಹಾ ಸತೀಶ್ ಪೂಜಾರಿ ಉಪಸ್ಥಿತರಿದ್ದರು.