ಕುಂದಾಪುರ ಯುವ ಬಂಟರ ಸಂಘದ ‘ಆಸರೆ’ – ‘ನವಚೇತನ’ ಸಮಿತಿಯ ಸಂಚಾಲಕರಾಗಿ ಸಂದೇಶ್ ಶೆಟ್ಟಿ ಸಳ್ವಾಡಿ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನಡೆಯುವ 2023-24ನೇ ಸಾಲಿನ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಆಸರೆ’ ಪೋತ್ಸಾಹಧನ ಹಾಗು ವಿಕಲಚೇತನ ವಿದ್ಯಾರ್ಥಿಗಳಿಗೆ ನೀಡಲಾಗುವ ‘ನವಚೇತನ’ ಪೋತ್ಸಾಹಧನದ ಸಮಿತಿಯ ಸಂಚಾಲಕರಾಗಿ ಕುಂದಾಪುರದ ಖ್ಯಾತ ನಿರೂಪಕ ಹಾಗು ಸಿಪ್ಲಾ ಕಂಪನಿ ಉದ್ಯೋಗಿ ಸಂದೇಶ್ ಶೆಟ್ಟಿ ಸಳ್ವಾಡಿ ಆಯ್ಕೆಯಾಗಿರುತ್ತಾರೆ.

Call us

Click Here

ಕಳೆದ 11 ವರ್ಷಗಳಿಂದ ಪ್ರತಿಷ್ಠಿತ ಔಷದ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆನಕ ಇವೆಂಟ್ಸ್ ಅಂಡ್ ಮ್ಯಾನೇಜ್ಮೆಂಟ್ ಸಂಸ್ಥೆಯ ಮೂಲಕ ಕಾರ್ಯಕ್ರಮ ಸಂಘಟಿಸಿ ಹಾಗು ನಿರೂಪಿಸಿ ಪ್ರಸಿದ್ಧ ನಿರೂಪಕರೆನಿಸಿಕೊಂಡಿದ್ದಾರೆ.

ಪ್ರಸ್ತುತ ಜೆಸಿಐ ಕುಂದಾಪುರ ಸಿಟಿ ಘಟಕದ ಕಾರ್ಯದರ್ಶಿಯಾಗಿ ಹಾಗು ಕುಂದಾಪುರ ಯುವ ಬಂಟರ ಸಂಘದ ದಶಮ ಸಂಭ್ರಮದ ಕಾರ್ಯಕಾರಿ ಸಮಿತಿಯ ಸಕ್ರೀಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.= ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗೌರವಾಧ್ಯಕ್ಷರಾದ ಬಿ ಉದಯ ಕುಮಾರ್ ಶೆಟ್ಟಿ ಹಾಗೂ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ..

Leave a Reply