ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಮಿತ ಇದರ 63ನೇ ವಾರ್ಷಿಕ ಮಹಾಸಭೆ ಕುಂದಾಪುರದ ಶೆರೋನ್ ಸಂಭಾಂಗಣದಲ್ಲಿ ಜರುಗಿತು.
ಸಂಘದ ಅಧ್ಯಕ್ಷರಾದ ಎಚ್. ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಯ ಹಾದಿಯನ್ನು ಮೆಲುಕು ಹಾಕಿದರು. ತಾಲೂಕಿನ ಎಲ್ಲಾ ಸಹಕಾರಿ ಸಂಘಗಳ ಸಹಕಾರವನ್ನು ಸ್ಮರಿಸಿ ಅಭಿನಂದನೆ ತಿಳಿಸಿದರು.
ಟಿಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್ ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘದ ಉಪಾಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ವಂದಿಸಿದರು. ನಿರ್ದೇಶಕರಾದ ಮೋಹನ್ ದಾಸ್ ಶೆಟ್ಟಿ, ಎಸ್. ರಾಜು ಪೂಜಾರಿ, ಕೆ. ಭುಜಂಗ ಶೆಟ್ಟಿ ವಂಡ್ಸೆ, ರವಿ ಗಾಣಿಗ, ಕೆ. ಮೋಹನ್ ಪೂಜಾರಿ, ಆನಂದ ಬಿಲ್ಲವ, ಕೆ. ಸುಧಾಕರ ಶೆಟ್ಟಿ, ಪ್ರಭಾಕರ ಶೆಟ್ಟಿ ಜಡ್ಕಲ್, ಎಸ್. ಜಯರಾಮ ಶೆಟ್ಟಿ ಬೆಳ್ವೆ, ಚಂದ್ರಶೇಖರ ಶೆಟ್ಟಿ, ದಿನಪಾಲ ಶೆಟ್ಟಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ ಉಪಸ್ಥಿತರಿದ್ದರು.