ಸೆ.24ರಂದು ಕುಂದಾಪುರ ತಾಲೂಕು ಯುವ ಬಂಟರ ಸಂಘ ಆಸರೆ ಮತ್ತು ನವಚೇತನ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸೆಪ್ಟೆಂಬರ್ 24ರ ಭಾನುವಾರ ಆಸರೆ ಮತ್ತು ನವಚೇತನ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಬಂಟರ ಯಾನೆ ನಾಡವರ ಸಂಕೀರ್ಣದ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ.

Call us

Click Here

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಲಿದ್ದು, ಎಂ ಆರ್ ಜಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ಉದ್ಘಾಟನೆ ಮಾಡಲಿದ್ದಾರೆ.

ಹೇರಂಭ ಆಗ್ರೋ ಇಂಡಸ್ಟ್ರೀಸ್ ಮುಂಬೈನ ಆಡಳಿತ ನಿರ್ದೇಶಕ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ದೀಪ ಪ್ರಜ್ವಲನ ಮಾಡಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಭಿನಂದನಾ ನುಡಿಗಳನಾಡಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಂಟ ಸಮಾಜದ ಹಿರಿಯ ಗಣ್ಯರಿಗೆ ದಶಮ ಸಂಭ್ರಮ ಪ್ರಶಸ್ತಿಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರಿನ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಪ್ರಧಾನ ಮಾಡಲಿದ್ದಾರೆ.

Watch Live on 24th Sep 9:30am onwards – https://www.youtube.com/live/hZHCvMfwgiU?si=cao5iq7MIkP3Jrzi

Click here

Click here

Click here

Click Here

Call us

Call us

2023 ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಹಾಗೂ ಇಸ್ರೋ ಚಂದ್ರಯಾನ -3ರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಯುವ ವಿಜ್ಞಾನಿ ಆಕಾಶ್ ಶೆಟ್ಟಿಯವರಿಗೆ ಅಭಿನಂದನ ಕಾರ್ಯಕ್ರಮ ನಡೆಯಲಿದೆ.

ಹುಬ್ಬಳ್ಳಿಯ ಹಿರಿಯ ಉದ್ಯಮಿ ಎನ್ ಐ ಶೆಟ್ಟಿ ಹಾಗೂ ತೆಲಂಗಾಣ ಹೋಟೆಲ್ ಉದ್ಯಮಿ ಕೊಡ್ಲಾಡಿ ಗಂಜಿಕೊಡಲು ಶಿವರಾಮ್ ಶೆಟ್ಟಿ ನೂತನ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ.

ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕರಾದ ಆವರ್ಸೆ ಸುಧಾಕರ ಶೆಟ್ಟಿ, ಹುಬ್ಬಳ್ಳಿಯ ಶೆಟ್ಟಿ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಹುಬ್ಬಳ್ಳಿಯ ಆಡಳಿತ ನಿರ್ದೇಶಕ ಪ್ರಸನ್ನ ಶಂಕರ ಶೆಟ್ಟಿ, ಆಸ್ಟ್ರೇಲಿಯಾದ ಉದ್ಯಮಿ ದಯಾನಂದ ಶೆಟ್ಟಿ, ಹುಬ್ಬಳ್ಳಿಯ ವಿ ಐ ಶೆಟ್ಟಿ ಅಂಡ್ ಕಂಪನಿ ಆಡಳಿತ ನಿರ್ದೇಶಕ ಉದ್ಯಮಿ ಸತೀಶ್ ವಿ ಶೆಟ್ಟಿ, ಡಿಯರ್ ಕನ್ಸ್ಟ್ರಕ್ಷನ್ ಹುಬ್ಬಳ್ಳಿಯ ಎನ್ . ಡಿ.ಶೆಟ್ಟಿ, ಮೈಸೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ನಂದ್ಯಪ್ಪ ಶೆಟ್ಟಿ, ಡಿಯರ್ ಕನ್ಸ್ಟ್ರಕ್ಷನ್ ಹುಬ್ಬಳ್ಳಿಯ ಕೆ ರವೀಂದ್ರ ಶೆಟ್ಟಿ, ಬೆಂಗಳೂರು ಬಂಟರ ಹೋಟೆಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಚಿತ್ತೂರು, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ, ಹೈದರಾಬಾದ್ ಹೋಟೆಲ್ ಉದ್ಯಮಿ ಸಾಯಿ ಸೆಂಟರ್ ಮಾಲೀಕರಾದ ಚಂದ್ರ ಶೆಟ್ಟಿ, ಗೀತಾ ಭವನ ಕರೀಂನಗರ ಹೋಟೆಲ್ ಉದ್ಯಮಿ ಸಂದೀಪ್ ಶೆಟ್ಟಿ ಹರಾಡಿ, ಹೈದರಾಬಾದ್ ಹೋಟೆಲ್ ಉದ್ಯಮಿ ಎಚ್ ಅಶೋಕ ಶೆಟ್ಟಿ, ಕರೀನಗರದ ಹೋಟೆಲ್ ಉದ್ಯಮಿ ರವೀಂದ್ರ ಶೆಟ್ಟಿ, ಹೈದರಾಬಾದ್ ಹೋಟೆಲ್ ಉದ್ಯಮಿಗಳಾದ ಬಿ .ಶೇಖರ್ ಶೆಟ್ಟಿ, ಅಲ್ತಾರು ದೇಬೇಟ್ಟು ಜಯರಾಮ ಶೆಟ್ಟಿ, ನಿಜಾಮಾಬಾದ್ ಹೋಟೆಲ್ ಉದ್ಯಮಿ ಎಚ್. ಮಹಾಲಿಂಗ ಶೆಟ್ಟಿ, ಹೈದರಾಬಾದ್ ಹೋಟೆಲ್ ಉದ್ಯಮಿ ಎಸ್.ಆರ್. ಅಣ್ಣಪ್ಪ ಶೆಟ್ಟಿ, ತೆಲಂಗಾಣದ ಹೋಟೆಲ್ ಉದ್ಯಮಿ ಚಂದ್ರಶೇಖರ ಶೆಟ್ಟಿ, ಮೆಹಬೂಬ್ ನಗರದ ಹೋಟೆಲ್ ಉದ್ಯಮಿ ಉದ್ಯಮಿ ಸಲ್ವಡಿ ಚಂದ್ರಶೇಖರ್ ಶೆಟ್ಟಿ, ಸಂಘ ರೆಡ್ಡಿಯ ಹೋಟೆಲ್ ಉದ್ಯಮಿ ಎಚ್. ಸಂಜೀವ ಶೆಟ್ಟಿ, ಹೈದರಾಬಾದ್ ಹೋಟೆಲ್ ಉದ್ಯಮಿ ಶ್ರೀಕಾಂತ್ ಶೆಟ್ಟಿ ಉಳ್ತುರು, ಹೈದರಾಬಾದ್ ಹೋಟೆಲ್ ಉದ್ಯಮಿ ಸುರೇಶ್ ಶೆಟ್ಟಿ ಯಾಳಹಕ್ಲು, ಹೈದರಾಬಾದ್ ಹೋಟೆಲ್ ಉದ್ಯಮಿ ಮಲ್ಯಾಡಿ ಚಂದ್ರ ಶೆಟ್ಟಿ, ಆದಿಸ್ ಗ್ರೂಪ್ ಆಫ್ ಹೋಟೆಲ್ ಹೈದರಾಬಾದ್ ನ ಅಜಿತ್ ಶೆಟ್ಟಿ, ಮೈತ್ರಿ ಅಸೋಸಿಯೇಟ್ಸ್ ಸಿಕಂದರಾಬಾದ್ ನವೀನ್ ಪ್ರಕಾಶ್ ಶೆಟ್ಟಿ, ತೆಲಂಗಾಣದ ಹೋಟೆಲ್ ಉದ್ಯಮಿ ಪ್ರವೀಣ್ ಶೆಟ್ಟಿ ಗುಡ್ರಿ, ಹೈದರಾಬಾದ್ ಹೋಟೆಲ್ ಉದ್ಯಮಿ ಹಕ್ಲಾಡಿ ಉದಯ್ ಶೆಟ್ಟಿ, ಬೃಂದಾವನ ಉಡುಪಿ ಹೋಟೆಲ್ ಹೈದರಾಬಾದ್ನ ಹೆಬ್ಲಿ ಉದಯ್ ಕುಮಾರ್ ಶೆಟ್ಟಿ, ಉಡುಪಿ ಟಿಫಿನ್ಸ್ ಹೈದರಾಬಾದ ಹೋಟೆಲ್ ದಿನೇಶ್ ಆರ್ ಶೆಟ್ಟಿ, ಹೋಟೆಲ್ ಉದ್ಯಮಿ ಎನ್ ಕರುಣಾಕರ ಶೆಟ್ಟಿ, ಸಿದ್ಧಿವಿನಾಯಕ ಕ್ಯಾಶೂ ಇಂಡಸ್ಟ್ರೀಸ್ ಕೆದೂರು ನ ಅರುಣ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮತ್ತು ದಶಮ ಸಂಭ್ರಮದ ಗೌರವ ಮಹಾಪೋಷಕರು, ಮಹಾಪೋಷಕರು ಹಾಗೂ ಪೋಷಕರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷರಾದ ಬಿ. ಉದಯ್ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ನಿತೀಶ್ ಶೆಟ್ಟಿ ಬಸ್ರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply