ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ 2022 -23ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ಇಲ್ಲಿನ ಜಯಶ್ರೀ ಸಭಾಭವನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಅವರು ಮಾತನಾಡಿ, ಸಂಘವು ಒಟ್ಟು 2.92 ಪಾಲು ಬಂಡವಾಳ, 66.15 ಕೋಟಿ ಠೇವಣಿ ಹೊಂದಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ 23.52 ಕೋಟಿ ಪಾವತಿಸಬೇಕಾದ ಹೊರಬಾಕಿ ಸಾಲವಿದ್ದರೇ, ಸದಸ್ಯರಿಂದ 76.86 ಕೋಟಿ ಹೊರಬಾಕಿ ಸಾಲ ಹೊಂದಿದೆ. ಈ ಪೈಕಿ ಶೇ.26.61ರಷ್ಟನ್ನು ಕೃಷಿ ಉದ್ದೇಶಕ್ಕೆ ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ ಸಂಘವು 1.28 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಟ್ ಘೋಷಿಸಲಾಗಿದೆ ಎಂದರು.
ವೈಯಕ್ತಿಕ ಸಾಲ, ಚಿನ್ನಾಭರಣ ಹಾಗೂ ವಾಹನ ಸಾಲ ಬಡ್ಡಿಯನ್ನು ತಗ್ಗಿಸಲಾಗಿದ್ದು, ಈ ಭಾರಿಯಿಂದ ಗೃಹಸಾಲ ನೀಡುವ ಉದ್ದೇಶಿಸಲಾಗಿದೆ. ಶೈಕ್ಷಣಿಕವಾಗಿ ಸಾಧನೆಗೈದ ಸದಸ್ಯರ ಮಕ್ಕಳಿಗೆ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಚಿಕಿತ್ಸೆಗಾಗಿ ನೆರವು ನೀಡಲಾಗುತ್ತಿದೆ ಎಂದರು.
ಈ ಸಂದರ್ಭ ಎಸ್.ಎಸ್.ಎಲ್.ಸಿ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಭೆಯಲ್ಲಿ ನಿರ್ದೇಶಕರಾದ ಚಂದ್ರ ನಾಯ್ಕ್, ಎಚ್. ರಾಜೀವ ದೇವಾಡಿಗ, ಅಂತೋನಿ ಲೂವಿಸ್, ಆನಂದ ಪಿ.ಎಚ್., ಅನಂತ ಮೊವಾಡಿ, ಶರತ್ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಚಂದ್ರಶೇಖರ ಪೂಜಾರಿ, ಚಂದ್ರ ಪೂಜಾರಿ, ಸಾಧು ಎಸ್. ಬಿಲ್ಲವ, ಚಂದ್ರಮತಿ ಶೆಡ್ತಿ, ಶಾರದಾ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಎ. ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಹಿರಿಯ ಗುಮಾಸ್ತ ಶಂಕರ ಪಿ.ಎಚ್ ವಂದಿಸಿದರು.