ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಈ ವರ್ಷದ ಮೊದಲ ಕಂಬಳವು ಕಂಬಳದ ಭೀಷ್ಮ ದಿ.ಸುರೇಶ ಪೂಜಾರಿ ಕಾಡಿನತಾರು ಸ್ಮರಣಾರ್ಥ ಬೈಂದೂರು ತಾಲೂಕು ಕಂಬಳ ಸಮಿತಿ ಸಹಕಾರದಲ್ಲಿ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳೋತ್ಸವ ಸಂಭ್ರಮ ಸಡಗರದಲ್ಲಿ ನೆರವೇರಿತು.
ಕೇಂದ್ರ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಸದಸ್ಯ ಯು.ಎಸ್.ಯೋಗೀಶ ಕುಮಾರ್ ಕಂಬಳೋತ್ಸವ ಉದ್ಘಾಟಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತರಾಮ ಶೆಟ್ಟಿ ಬಾರ್ಕೂರು, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಪೊಲೀಸ್ ಸಿಬ್ಬಂದಿ ಶಂಕರ ಪೂಜಾರಿ ಕಾಡಿನತಾರು ಹಾಗೂ ಮರಳಿ ಮನಸಾಗಿದೆ ಸಿನಿಮಾ ತಂಡ ಮತ್ತಿತರರು ಉಪಸ್ಥಿತರಿದ್ದರು.
ಸಂತೋಷ ಕಾಡಿನತಾರು ಸಂಘಟಿಸಿದ್ದರು. ಕಂಬಳೋತ್ಸವದಲ್ಲಿ ಸುಮಾರು ಜತೆ ಕೋಣಗಳು 50 ಪಾಲ್ಗೊಂಡಿದ್ದವು.