ಅ. 27ರಂದು “ರೇಡಿಯೋ ಕುಂದಾಪುರ 89.6 ಎಫ್.ಎಂ” ಲೋಗೋ ಮತ್ತು ಅಧಿಕೃತ ರಾಗ ಬಿಡುಗಡೆ ಸಮಾರಂಭ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ರೇಡಿಯೋ ಕುಂದಾಪುರ 89.6 ಎಫ್ ಎಂ ನ ಲಾಂಛನ ಮತ್ತು ಅಧಿಕೃತ ರಾಗ ಬಿಡುಗಡೆ ಸಮಾರಂಭ ಅಕ್ಟೋಬರ್ 27ರಂದು ಕಾಲೇಜಿನ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

Call us

Click Here

ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಲಾಂಛನ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಓಂ ಗಣೇಶ ಸಿಗ್ನೇಚರ್ ಟ್ಯೂನ್ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರು ಕೆ. ಶಾಂತರಾಮ್ ಪ್ರಭು ಅವರು ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾಗಿರುವ ಎ ಎಸ್ ಎನ್ ಹೆಬ್ಬಾರ್ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮತ್ತು ಕಲಾಸಕ್ತರು ಪಾಲ್ಗೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು ಆಮಂತ್ರಿಸಿದ್ದಾರೆ.

ಭಂಡಾರ್ಕರ್ಸ್ ಕಾಲೇಜಿನ ಮಹತ್ವದ ಸಮುದಾಯ ಯೋಜನೆ “ರೇಡಿಯೋ ಕುಂದಾಪುರ 89.6 ಎಫ್ ಎಮ್ “ಸಿದ್ಧಗೊಳ್ಳುತ್ತಿದ್ದು ತಾಂತ್ರಿಕ ಕಾರ್ಯ ಪೂರ್ಣಗೊಳ್ಳುತ್ತಿದೆ.ಈ ಬಾನುಲಿ ಕೇಂದ್ರ 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕೇಳಬಹುದಾಗಿದ್ದು, ಧ್ವನಿ ಪರೀಕ್ಷೆ ಯಶಸ್ವಿಯಾಗಿದೆ.ಕುಂದಾಪುರ ತಾಲೂಕಿನ ಜನರು ದೇಶ ವಿದೇಶದಲ್ಲಿದ್ದರು ರೇಡಿಯೋ ಕುಂದಾಪುರ ಕೇಳುವಂತೆ ಮಾಡುವ ಆಪ್ ರೂಪಿಸಲಾಗುತ್ತಿದ್ದು ದೆಹಲಿಯ ತಂತ್ರಜ್ಞರು ಈ ಬಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ.

Leave a Reply