ಝೋನಲ್ ಕಲ್ಚರಲ್ ಮೀಟ್: ಬೈಂದೂರು ರೋಟರಿ ಕ್ಲಬ್ ಚಾಂಪಿಯನ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೋಟರಿ ಜಿಲ್ಲೆ 3182 ವಲಯ 1ರ ಝೋನಲ್ ಕಲ್ಚರಲ್ ಮೀಟ್ ಕೋಟೇಶ್ವರದ ಸಹನಾ ಕನ್ವೆನ್ಶನ್ ಸೆಂಟರಿನಲ್ಲಿ ನಡೆಯಿತು. ವಿವಿಧ ಸಾಂಸ್ಕೃತಿಕ ಸ್ವರ್ಧೆಗಳಲ್ಲಿ ಗೆಲುವು ಸಾಧಿಸಿರುವುದಕ್ಕಾಗಿ ಬೈಂದೂರು ಕ್ಲಬ್ ಕಲ್ಚರಲ್ ಚಾಂಪಿಯನ್ – ರನ್ನರ್ ಪ್ರಶಸ್ತಿಗೆ ಭಾಜನವಾಯಿತು.

Call us

Click Here

ವಲಯದ 8 ಕ್ಲಬ್’ಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಗುಂಪು ನೃತ್ಯ ವಿಭಾಗದಲ್ಲಿ ಪ್ರಥಮ, ಡ್ಯೂಯೆಟ್ ಸಾಂಗ್ನಲ್ಲಿ ಪ್ರಥಮ, ಭಾವಗೀತೆಯಲ್ಲಿ ಪೂರ್ಣಿಮಾ ಪೈ ಪ್ರಥಮ ಸ್ಥಾನಗಳನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.

ಏಕಪಾತ್ರಾಭಿನಯದಲ್ಲಿ ನಾಗೇಂದ್ರ ಬಂಕೇಶ್ವರ ಹಾಗೂ ಸೋಲೊ ಡಾನ್ಸ್ ನಲ್ಲಿ ನಿಧಿ ದ್ವಿತೀಯ ಸ್ಥಾನ ಪಡೆದರು.

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ವೇದಿಕೆಯಲ್ಲಿ ವಲಯ 1ರ ಸಹಾಯಕ ಗವರ್ನರ್ ಡಾ.ಸಂದೀಪ್ ಶೆಟ್ಟಿ, ಜಿಲ್ಲಾ ಕಲ್ಚರಲ್ ಚೇರ್ಮನ್ ಗಣೇಶ್ ಶೆಟ್ಟಿ ಝೋನಲ್ ಕಲ್ಚರಲ್ ಕೊ- ಆರ್ಡಿನೇಟರ್ ಮಹೇಂದ್ರ ಶೆಟ್ಟಿ, ಖ್ಯಾತ ನಟಿಯರಾದ ನಿರೀಕ್ಷಾ ಶೆಟ್ಟಿ, ರಚನಾ ರೈ, ಝೋನಲ್ ಲೆಫ್ಟಿನೆಂಟ್ ಗಳಾದ ರಂಜಿತ್ ಕುಮಾರ್ ಶೆಟ್ಟಿ, ಡಾ.ಉತ್ತಮ್ ಕುಮಾರ್ ಶೆಟ್ಟಿ, ಪ್ರದೀಪ್ ಯಡಿಯಾಳ್, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ, ಕಾರ್ಯದರ್ಶಿ ರಮಾನಂದ ಕಾರಂತ್ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸುವ ವೇಳೆ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು, ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ಪೂರ್ವಾಧ್ಯಕ್ಷರಾದ ಉದಯ ಆಚಾರ್, ಡಾ. ಪ್ರವೀಣ್ ಶೆಟ್ಟಿ, ಮಂಜುನಾಥ ಮಹಾಲೆ, ಸುಧಾಕರ ಪಿ. ಹಾಗೂ ರೋಟರಿ ಕ್ಲಬ್ ಬೈಂದೂರಿನ ಸದಸ್ಯರುಗಳು ಉಪಸ್ಥಿತರಿದ್ದರು

Click here

Click here

Click here

Click Here

Call us

Call us

Leave a Reply