ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲಾ ಜೀವನವೆಂಬುದು ಒಂದು ಸುದೀರ್ಘ ಪ್ರಯಾಣ. ಅದರ ಇಂಚ್ ಇಂಚ್ ಹ್ಯಾಂಗೆ ನೆನಪಿಟ್ಕಂಡ್ರೂ ಇಪ್ಪತ್ತೈದನೇ ವರ್ಷ ಎಷ್ಟು ಗಡ್ಜ್ ಮಾಡ್ಲಕ್ಕು ಎಷ್ಟು ಚಂದ ಮಾಡ್ಲಕ್ ಅಂದೇಳಿ ಹೊಸರು ಶಾಲೆಯವರು ತೋರ್ಸಿರ್ ಎಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು.
ಅವರು ಸೋಮವಾರ ಹೊಸೂರು ಶ್ರೀ ಮೂಕಾಂಬಿಕಾ ದೇವಳ ಪ್ರ್ರೌಢಶಾಲೆ ರಜತ ಸಂಭ್ರಮ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆ ವಿದ್ಯಾರ್ಥಿಗಳು ಶಾಲೆಗೆ ಬಸ್, ವಿದ್ಯಾರ್ಥಿಗಳನ್ನು ಕರ್ಕಂಡ್ ಬಪ್ಪುಕೆ ಡ್ರೈವರ್ ಕೊಟ್ರು.. ಲೈಬ್ರರಿ ಮಾಡಿ ಕೊಡ್ತಿದಾರೆ. ಅಡುಗೆ ಚಪ್ಪರ, ಸೈಕಲ್ ಸ್ಟ್ಯಾಂಡ್ ಮಾಡಿ ಕೊಡ್ತ್ರು. ಇಷ್ಟೆಲ್ಲಾ ಆದಮೇಲೆ ನಮ್ಮ ಶಾಲೆ ಅಂದ್ರೆ ದೇವಸ್ಥಾನ ಇದ್ಹಾಂಗೆ ಅಂತ ಸ್ವಾಗತ ಗೋಪುರ ಮಾಡಿಕೊಟ್ಟಿರ್. ಶಾಲೆಗೆ ಸ್ವಾಗತ ಗೋಪುರ ಮಾಡಿ ಇದು ನಮ್ ದೇವಸ್ಥಾನ ಬಪ್ಪೂಕಿದ್ರೆ ಕೈಮುಕ್ಕಂಡ್ ಬನ್ನಿ ಅಂತ ಗೋಪುರ ಕಟ್ಟಿಕೊಟ್ಟಿರ್. ಕನ್ನಡ ಶಾಲೆ ಹೇಗಿರಬೇಕು ಎನ್ನೋದಕ್ಕೆ ಹಳೆ ವಿದ್ಯಾರ್ಥಿಗಳ, ಅಭಿಮಾನಿಗಳ ಕೊಡುಗೆ ಹೇಗಿರಬೇಕು ಎನ್ನೋದು ಹೊಸೂರು ಶಾಲೆ ಸಾಕ್ಷಿ ಎಂದರು.
ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅನುವಂಶೀಯ ಮೊಕ್ತೇಸರ ಸದಾಶಿವ ಶೆಟ್ಟಿ ಸ್ವಾಗತ ಗೋಪುರ, ವಂಡ್ಸೆ ಸಿಎ ಬ್ಯಾಂಕ್ ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ ಹರ ಅವರು ಪುರಮೆರವಣಿಗೆ ಉದ್ಘಾಟಿಸಿದರು.
ಕದಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ರಮಾನಂದ ಮಧ್ಯಸ್ಥ ದ್ವಜಾರೋಹಣ ನೆರವೇರಿಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗಪ್ಪ ಕೊಠಾರಿ ರೇಖಾಗಣಿತ ರಂಗೋಲಿ ಕೊಠಡಿ ಉದ್ಘಾಟಿಸಿದರು. ಬೈಂದೂರು ವಲಯ ದೈಹಿಕ ಪರಿವೀಕ್ಷಕ ಚಂದ್ರಶೇಖರ ಶೆಟ್ಟಿ ಬಹುಮಾನ ವಿತರಿಸಿದರು.
ಕದಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅರ್ಚಕ ಶ್ರೀಧರ ಉಡುಪ, ಇಂಡೂರು ಕುಜ್ಞಾಡಿ ಗ್ರಾಪಂ ಸದಸ್ಯ ರಾಘವೇಂದ್ರ ಪೂಜಾರಿ, ಮೇಲಾರಿಕಲ್ಲು ಮಮತಾ ಗಣೇಶ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಕೆ. ಎಲ್. ಜಯರಾಮ ಶೆಟ್ಟಿ ಕಾನ್ಬೇರು, ಕಾರ್ಯದರ್ಶಿ ಪ್ರವೀಣ ಕುಮಾರ ಶೆಟ್ಟಿ ಹೊಸೂರು, ವಿದ್ಯಾರ್ಥಿ ನಾಯಕ ಸೃಜನ್ ಶೆಟ್ಟಿ ಇದ್ದರು.
ಮೂಕಾಂಬಿಕಾ ದೇವಳ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಚಂದ್ರ ಶೆಟ್ಟಿ ಸ್ವಾಗತಿಸಿದರು. ಮೂಡುಬಿದ್ರೆ ಆಳ್ವಾಸ್ ಪದವಿಪೂರ್ವ ಕಾಲೇಜ್ ಪ್ರಾಧ್ಯಾಪಕಿ ಶ್ವೇತಶ್ರೀ, ಹಳೆ ವಿದ್ಯಾರ್ಥಿ ಅನುಷಾ ಶೆಟ್ಟಿ ನಿರೂಪಿಸಿದರು. ಪ್ರಕಾಶ್ಚಂದ್ರ ಶೆಟ್ಟಿ, ರತ್ನಾಕರ ದೇವಾಡಿಗ, ವೇಣುಗೋಪಾಲ ಶೆಟ್ಟಿ, ಕೀರ್ತನಾ ಉಮೇಶ ಶೆಟ್ಟಿ, ಗಣೇಶ ಕಾಸಾಡಿ ಬಹುಮಾನ ವಿಜೇತರ ವಿದ್ಯಾರ್ಥಿಗಳ ಪಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಹಳೆ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕ ರವಿಶಂಕರ ಹೆಗ್ಡೆ ವಂದಿಸಿದರು.