ಆ ಅಪ್ಪಟ ದೇಶಪ್ರೇಮಿಯ ಆಡಳಿತವನ್ನೊಮ್ಮೆ ನೋಡಬೇಕಿತ್ತು. ಏನಂತೀರಿ?

Call us

Call us

Call us

ನರೇಂದ್ರ ಎಸ್. ಗಂಗೊಳ್ಳಿ                                                                                                                       .

Call us

Click Here

ಅದೊಂದು ಘಟನೆ ಯಾವತ್ತೂ ದೇಶಪ್ರೇಮಿಗಳ ಮನಪಟಲದಿಂದ ಮರೆಯಾಗಲು ಸಾಧ್ಯವಿಲ್ಲ. ಆವತ್ತು ಒಂದರ್ಥದಲ್ಲಿ ಗಾಂಧೀಜಿಯಂತಹ ಗಾಂಧೀಜಿಯೇ ಸೋತು ಹೋಗಿದ್ದರು. ನಿಜ. 1938ರಲ್ಲಿ ಹರಿಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಪ್ರಥಮಬಾರಿಗೆ ಆಯ್ಕೆಯಾದ ಸುಭಾಷ್ ಇಡೀ ಕಾಂಗ್ರೆಸ್ ಪಾಳಯದಲ್ಲಿ ತನ್ನ ಮೊನಚು ಹಾಗು ಕ್ರಾಂತಿಕಾರಿ ನಿರ್ಧಾರ ಮತ್ತು ಸ್ವಭಾವಗಳಿಂದ ಮಿಂಚಿನ ಸಂಚಲನ ಮೂಡಿಸಿದ್ದರು. ಕ್ರಾಂತಿಕಾರಿ ತತ್ವದಲ್ಲಿ ನಂಬಿಕೆಯಿಟ್ಟಿದ್ದ ಅವರು ಅದೇ ರೀತಿಯ ಹೋರಾಟದ ಮುಖೇನ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಬರಲು ಸಾಧ್ಯ ಎಂದು ಬಲವಾಗಿ ನಂಬಿದ್ದರು. ತಮ್ಮ ಸಿದ್ಧಾಂತಗಳೊಂದಿಗೆ ಅವರು ಎಂದಿಗೂ ರಾಜಿಯಾಗಿರಲಿಲ್ಲ. ಆದರೆ ನಿಮಗೆ ಗೊತ್ತಿರಲಿ ಅವರೆಂದೂ ಬೇರೆಯವರ ಮೇಲೆ ಬಲವಂತವಾಗಿ ತನ್ನ ನಿರ್ಧಾರಗಳನ್ನು ಹೇರುತ್ತಿರಲಿಲ್ಲ. ಆ ಕಾಲದ ಇನ್ನಿತರೆ ಸ್ವಾತಂತ್ರ್ಯ ಹೋರಾಟಗಾರ ನಾಯಕರುಗಳ ಸಿದ್ದಾಂತ ಮತ್ತು ನಿಲುವುಗಳ ಬಗೆಗೆ ಗೌರವವನ್ನು ಹೊಂದಿದ್ದರು. ಆದರೆ ತನ್ನ ನಿಲುವು ಮತ್ತು ಹೋರಾಟದ ಬಗೆಗೆ ಸ್ಪಷ್ಟ ರೂಪುರೇಷೆಗಳನ್ನು ಹೊಂದಿದ್ದ ಅವರು ಅದನ್ನು ಸಮರ್ಥವಾಗಿ ತನ್ನ ಅನುಚರರಿಗೆ ಮನದಟ್ಟು ಮಾಡಿಕೊಡುವ ಮತ್ತು ಆ ಮೂಲಕ ಅವರನ್ನು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸುವ ಅದ್ಭುತ ವ್ಯಕ್ತಿತ್ವವನ್ನು ಹೊಂದಿದ್ದರು. ಒಬ್ಬ ನಾಯಕನಿಗಿರಬೇಕಾದ ಗುಣವೇ ಅಂತಾದ್ದು. ಹಾಗಾಗೆ ಅವರಿಗೆ ಅಜಾದ್ ಹಿಂದ್ ಫೌಜ್ ನ್ನು ಕಟ್ಟಲು ಸಾದ್ಯವಾಗಿದ್ದು. ಇರಲಿ ವಿಷಯಕ್ಕೆ ಬರೋಣ.

Subashchandra Boseಭಾರತೀಯರ ಮನೆ ಮನಗಳಲ್ಲಿ ತನ್ನ ಛಾಪು ಮೂಡಿಸಿದ್ದ ಸುಭಾಷ್ 1939ರ ಕಾಂಗ್ರೆಸ್‌ನ ಅಧ್ಯಕ್ಷಗಿರಿಗೆ ಪುನರಾಯ್ಕೆ ಬಯಸಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದರು. ಸುಭಾಷ್ ಆಯ್ಕೆ ಅಗುತ್ತಾರೆ ಅನ್ನುವುದರ ಬಗೆಗ ಯಾರೆಂದರೆ ಯಾರಿಗೂ ಅನುಮಾನಗಳಿರಲಿಲ್ಲ. ಆದರೆ ಗಾಂದೀಜಿ ಮಾತ್ರ ಅವರೆದುರಿಗೆ ಒಬ್ಬ ಸ್ಪರ್ಧಿಯನ್ನು ತನ್ನ ಪರವಾಗಿ ನಿಲ್ಲಿಸಿಬಿಟ್ಟರು. ಅದು ಪಟ್ಟಾಭಿ ಸೀತಾರಾಮಯ್ಯ. ಅಷ್ಟೇ ಅಲ್ಲ ಗಾಂಧೀಜಿ ಸೀತಾರಾಮಯ್ಯನವರ ಸೋಲು ನನ್ನ ಸೋಲು ಎಂದುಬಿಟ್ಟರು. ಆದರೆ ಜನಾಭಿಪ್ರಾಯ ಒಲವು ಸುಭಾಷರೆಡೆಗಿತ್ತು. ಪರಿಣಾಮ ಸುಭಾಷ್ ನಿರೀಕ್ಷೆಯಂತೆ ಗೆದ್ದುಬಿಟ್ಟರು. ಪಟ್ಟಾಭಿ ಸೀತಾರಾಮಯ್ಯನವರು ಸೋತುಹೋಗಿದ್ದರು. ನಿಜಕ್ಕೆಂದರೆ ಅದು ಗಾಂಧೀಜಿಯ ಸೋಲಾಗಿತ್ತು. ಅಲ್ಲ ಅನ್ನುತ್ತೀರಾ? ಗಾಂಧೀಜಿ ಅದ್ಯಾವ ಪರಿ ಬೇಸರದಲ್ಲಿದ್ದರು ಎಂದರೆ ಸುಭಾಷರನ್ನು ಅಧ್ಯಕ್ಷರೆಂದು ಘೋಷಿಸುವ ಕಾರ‍್ಯಕ್ರಮಕ್ಕೂ ಹೋಗಲು ಮನಸ್ಸು ಮಾಡಲಿಲ್ಲ. ದೊಡ್ಡವರ ಸಣ್ಣತನ ಅನ್ನುವುದು ಇದಕ್ಕೇನಾ ಗೊತ್ತಿಲ್ಲ. ಅಲ್ಪ ಅವಧಿಯಲ್ಲೇ ಸುಭಾಷರಿಗೆ ಕಾಂಗ್ರಸ್ಸಿನಲ್ಲಿ ಬಣಗಳು ಸೃಷ್ಟಿಯಾಗುತ್ತಿದ್ದು ಅದರಿಂದ ಕಾಂಗ್ರೆಸ್ ಒಡೆಯಬಹುದು ಮತ್ತದು ದೇಶದ ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವ ಸೂಕ್ಷ್ಮ ಅರಿವಾಗಿ ತನ್ನ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದರು. ಅದು ನಿಜಕ್ಕೂ ಭಾರತದ ಇತಿಹಾಸದ ಕೆಟ್ಟದಿನ. (ಕುಂದಾಪ್ರ ಡಾಟ್ ಕಾಂ ಅಂಕಣ)

ಆದರೆ ಸುಭಾಷರ ಹೋರಾಟ ಯಾವತ್ತೂ ನಿಲ್ಲುವಂತಾದ್ದಾಗಿರಲಿಲ್ಲ. ಅದಕ್ಕೊಂದು ಪದವಿ ಅಧಿಕಾರಗಳ ಹಂಗು ಇರಲಿಲ್ಲ. ನಾಯಕತ್ವವೇ ಮೈತಳೆದು ಬಂದಂತಿದ್ದ ಸುಭಾಷರಿಗೆ ಒಂದು ಪದವಿ ಅಧಿಕಾರದ ಅಗತ್ಯತೆ ಖಂಡಿತಾ ಇರಲಿಲ್ಲ. ನಿಮಗೆ ಗೊತ್ತಿರಲಿ ಸುಭಾಷ ಆ ಕಾಲಕ್ಕೆ ಐಸಿಎಸ್ ಅಂತಿಮ ಪರೀಕ್ಷೆಯಲ್ಲಿ ಇಂಗ್ಲೆಂಡಿಗೆ ನಾಲ್ಕನೇ ಸ್ಥಾನದವರಾಗಿ ತೇರ್ಗಡೆಯಾದ ವ್ಯಕ್ತಿ. ಅದಕ್ಕೂ ಮೊದಲು ಎಷ್ಟೋ ವರುಷಗಳ ಹಿಂದೆ ರವೀಂದ್ರನಾಥ ಟಾಗೋರರ ಹಿರಿಯಣ್ಣ ಸತ್ಯೇಂದರನಾಥ್ ಬೋಸ್ ಆ ಪರೀಕ್ಷೆಯನ್ನು ಪಾಸು ಮಾಡಿಕೊಂಡಿದ್ದರು. ಅದನ್ನು ಅಷ್ಟು ಸುಲಭವಾಗಿ ಪಾಸು ಮಾಡಿಕೊಳ್ಳಲು ಬ್ರಿಟಿಷರೇ ಅವಕಾಶ ನೀಡುತ್ತಿರಲಿಲ್ಲ. ಕಾರಣ ಇಷ್ಟೇ, ಅದನ್ನು ಪಾಸಾದರೆ ಅವರಿಗೆ ಭಾರತದಲ್ಲಿ ಅವರಿಗೆ ಆಡಳಿತಾತ್ಮಕ ಉನ್ನತ ಹುದ್ದೆಗಳನ್ನು ನೀಡಬೇಕಾಗಿಬರುತ್ತದೆ. ಹಾಗಾದಲ್ಲಿ ಆಡಳಿತ ನಿರ್ವಹಣೆಯಲ್ಲಿ ಭಾರತೀಯರೇ ಮೇಲುಗೈ ಸಾಧಿಸಿಬಿಟ್ಟರೆ? ಹಾಗೊಂದು ಭಯ ಬ್ರಿಟಿಷರಿಗೆ ಇದ್ದೇ ಇತ್ತು. ಸುಭಾಷರನ್ನು ಅವರು ಅವಗಣನೆ ಮಾಡುವ ಹಾಗೆ ಇರಲಿಲ್ಲ. ಆದರೆ ಅಂತಿಮ ಸಂದರ್ಶನದಲ್ಲಿ ಅಧಿಕಾರಿಯೊಬ್ಬ ಸುಮ್ಮಸುಮ್ಮನೇ ಕೊಂಕೊಂದನ್ನು ತೆಗೆದಾಗ ಅದನ್ನು ವಿರೋಧಿಸಿದ ಅವರು ನಿಂತ ನಿಲುವಿನಲ್ಲೇ ಅಧಿಕಾರಿಯನ್ನು ಬೈಯ್ದು ಐಸಿಎಸ್ ಹುದ್ದೆಯನ್ನು ತಿರಸ್ಕರಿಸಿ ಬಂದಿದ್ದರು. ಅಷ್ಟಕ್ಕೂ ಸುಭಾಷರಿಗೆ ಬೇಕಾಗಿದ್ದು ಹುದ್ದೆ ಆಗಿರಲಿಲ್ಲ. ಅವರು ಬಯಸಿದ್ದು ಕೇವಲ ಭಾರತದ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಮಾತ್ರ.

ಆ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವ ಸಲುವಾಗಿ ನಿರಂತರವಾಗಿ ತಮ್ಮ ಕ್ರಾಂತಿಕಾರಿ ಹೋರಾಟವನ್ನು ಜಾರಿಯಲ್ಲಿಟ್ಟ ನೇತಾಜಿಯವರು ಮೂಡಿಸಿದ ಹೆಜ್ಜೆಗಳು ನಿಜಕ್ಕೂ ರೋಮಾಂಚನ ಮೂಡಿಸುವಂತವು. 1941 ರ ಜನವರಿ 16ರಂದು ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಂಡ ನೇತಾಜಿ ಜರ್ಮನಿ ಜಪಾನ ಮತ್ತಿತರ ದೇಶಗಳ ಸಹಕಾರದೊಂದಿಗೆ ಆಜಾದ್ ಹಿಂದ್ ಫೌಜ್ ನ್ನು ಸ್ಥಾಪಿಸಿದರು. ಆ ಕಾಲದಲ್ಲೇ ಓರ್ವ ಕ್ರಾಂತಿಕಾರಿಗಳ ನಾಯಕನಾಗಿ ಹಿಟ್ಲರ್ ಮುಸೋಲನಿಯಂತಹ ನಾಯಕರನ್ನು ಭೇಟಿಯಾಗಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ನೆರವನ್ನು ಕೇಳಿದ ರೀತಿ ಮತ್ತು ದೇಶದ ಹೊರಗಡೆ ಇದ್ದುಕೊಂಡೇ ತನ್ನ ದೇಶಕ್ಕಾಗಿ ಹೋರಾಡಲು ಒಂದು ಸೈನ್ಯವನ್ನು ಕಟ್ಟುವ ತಾಕತ್ತು ತೋರಿದ ರೀತಿ ಇದೆಯಲ್ಲಾ ಅದು ಅವರ ಅಚಲ ಧೈರ್ಯ, ನಾಯಕತ್ವ, ಶ್ರದ್ಧೆ ಮತ್ತು ಬದ್ಧತೆಗೆ ಸಾಕ್ಷಿಯಾಗಿ ನಿಂತಿದೆ. ಹೌದು ಅದು ಸುಭಾಷ್ ಚಂದ್ರ ಬೋಸ್. ಅದಕ್ಕೆಂದೇ ನಮ್ಮಿಂದ ಮರೆಯಾಗಿ ಇಷ್ಟು ವರುಷಗಳ ಬಳಿಕವೂ ಅವರ ನೆನಪನ್ನು ಮರೆಮಾಚಿಸುವ ಇಲ್ಲವಾಗಿಸುವ ಎಲ್ಲಾ ಪ್ರಯತ್ನಗಳ ನಡುವೆಯೂ ಕೋಟ್ಯಂತರ ಭಾರತೀಯರ ಹೃದಯಗಳಲ್ಲಿ ಇವತ್ತಿಗೂ ಅವರಿಗೊಂದು ವಿಶೇಷವಾದ ಸ್ಥಾನ ಇರುವಂತಾದ್ದು. (ಕುಂದಾಪ್ರ ಡಾಟ್ ಕಾಂ ಅಂಕಣ)

Click here

Click here

Click here

Click Here

Call us

Call us

ನಾವುಗಳು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ 1943ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಗೆದ್ದುಕೊಂಡ ಸುಭಾಷರ ಸೇನೆ ಆ ಪ್ರಾಂತ್ಯಕ್ಕೆ ಬ್ರಿಟಿಷರಿಂದ ಮುಕ್ತಿಕೊಡಿಸುವಲ್ಲಿ ನೆರವಾಯಿತು. ಅದಾದ ಬಳಿಕವೂ ಹೋರಾಟಗಳು ನಡೆದೇ ಇದ್ದವು. ಆದರೆ ಭಾರತದೊಳಗೆ ಇದ್ದ ಕೆಲವು ನಾಯಕರುಗಳು ಅದಕ್ಕೆ ಪ್ರೋತ್ಸಾಹವನ್ನೇ ನೀಡಲಿಲ್ಲ. ಆ ವೇಳೆಗೆ ಗಾಂಧಿ ಮತ್ತೊಂದು ದಿಕ್ಕಿನಲ್ಲಿ ಹೋರಾಟ ಪ್ರಬಲಗೊಳಿಸಿದ್ದರು. (?) ಗೊತ್ತಿರಲಿ, 1948ರಲ್ಲಿ ಬಿಟಿಷರ ಜಂಘಾಬಲವನ್ನೇ ಉಡುಗಿಸಿದ್ದ ನೌಕಾ ಬಂಡಾಯ ನಡೆದದ್ದರ ಹಿಂದಿನ ಪ್ರೇರಣೆ ಇದೇ ಅಜಾದ್ ಹಿಂದ್ ಫೌಜ್ ಆಗಿತ್ತು. ಅಂದೊಮ್ಮೆ ಸುಭಾಷರ ಸೇನೆ ಭಾರತಕ್ಕೆ ಆಗಮಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಅಣಿಯಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿದಾಗ ನೆಹರೂ ಅವರಂತೂ ಸುಭಾಷರ ಸೇನೆ ಬಂದರೆ ನಾನೇ ಯುದ್ದ ಮಾಡಿ ಅವರ ಸೇನೆಯನ್ನು ಒಡಿಸುತ್ತೇನೆ ಎಂಬರ್ಥದ ಮಾತುಗಳನ್ನಾಡಿಬಿಟ್ಟರು. ಗಮನಿಸಿ. ನೇತಾಜಿಯವರ ಸೈನ್ಯ ಭಾರತಕ್ಕೆ ಆಗಮಿಸಿ ಬ್ರಿಟಿಷರ ವಿರುದ್ಧ ಹೋರಾಡುತ್ತದೆ ಮತ್ತು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಿಸುತ್ತದೆ ಎಂದರೆ ಅದಕ್ಕೆ ನೆಹರು ಯಾಕೆ ಕೆಂಡಾಮಂಡಲವಾಗಬೇಕು? ನೀವೇ ಹೇಳಿ. ಒಂದಂತೂ ಸತ್ಯ. ನೇತಾಜಿಯವರು ಸ್ವಾತಂತ್ರ್ಯ ಹೋರಾಟದ ಮುಂಚೂಣಿಗೆ ಬರುವುದು ಗಾಂಧೀಜಿ ನೆಹರು ಮತ್ತವರ ಪಟಾಲಮ್ಮಿಗೆ ಖಂಡಿತಾ ಇಷ್ಟವಿರಲಿಲ್ಲ. ಯಾಕೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ ಅಂದುಕೊಳ್ಳುತ್ತೇನೆ.

ಬಹುಶಃ ಬೋಸರ ಬಗೆಗೆ ಬರೆಯುತ್ತಾ ಹೋದರೆ ಅದು ಮುಗಿಯದ ಕಥನವಾದೀತು. ಅಂತಹ ಒಬ್ಬ ವ್ಯಕ್ತಿ ನಮ್ಮ ನಡುವೆ ಇದ್ದಿದ್ದರು ಅನ್ನೋದೇ ಭಾರತೀಯರೆಲ್ಲರಿಗೂ ರೋಮಾಂಚನವನ್ನು ಮೂಡಿಸುತ್ತದೆ. ಆದರೆ ಹಾಗೆ ಹೊರದೇಶದಲ್ಲಿದ್ದಕೊಂಡು ಭಾರತದ ಸ್ವಾತಂತ್ರ್ಯವನ್ನೇ ಉಸಿರಾಡುತ್ತಿದ್ದ ಮತು ಅದಕ್ಕಾಗಿ ಹೋರಾಡುತ್ತಿದ್ದ ನೇತಾಜಿಯವರು ಇದ್ದಕ್ಕಿಂದ್ದಂತೆ 1945 ರ ಆಗಸ್ಟ್ 18 ರಂದು ಜಪಾನಿನ ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬಲಿಯಾದರು ಎನ್ನುವ ಸುದ್ದಿ ಬಂದಿತ್ತಲ್ಲ ಅದನ್ನು ಈ ಹೊತ್ತಿಗೂ ಯಾರೆಂದರೆ ಯಾರೂ ನಂಬುತ್ತಿಲ್ಲ. ಕಾರಣ ಬಹಳ ಸರಳ ಅವತ್ತು ಅಂತಾದ್ದೊಂದು ಅಪಘಾತವೇ ನಡೆದಿರಲಿಲ್ಲ. ತೈವಾನ್ ಸರಕಾರ ನೀಡಿದ ಆಗಸ್ಟ್ 14ರಿಂದ ಸೆಪ್ಟೆಂಬರ್ ಇಪ್ಪತ್ತರವರೆಗಿನ ವಿಮಾನ ಪಯಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲೆಲ್ಲೂ ವಿಮಾನ ಅಪಫಾತವಾದ ಬಗೆಗೆ ಉಲ್ಲೇಖಗಳೇ ಇಲ್ಲ ಅನ್ನುವುದೇ ಇದಕ್ಕೆ ಸಾಕ್ಷಿ. ನಡೆದಿದ್ದರೆ ತಾನೇ ದಾಖಲೆಗಳಿರುವುದು? ನಿಮಗೆ ಗೊತ್ತಿರಲಿ ನೇತಾಜಿ ಸಾವಿನ ಕುರಿತಂತೆ ಈ ವರೆಗೂ ಭಾರತ ಸರಕಾರ ಅಧಿಕೃತ ಘೋಷಣೆ ಮಾಡಿಲ್ಲ. ಹಾಗಾದರೆ ನೇತಾಜಿ ಏನಾದರು? (ಕುಂದಾಪ್ರ ಡಾಟ್ ಕಾಂ ಅಂಕಣ)

ಹೌದು ಇದೊಂದು ಪ್ರಶ್ನೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಬರೋಬ್ಬರಿ 69 ವರುಷಗಳ ಬಳಿಕವೂ ನಮ್ಮನ್ನು ಕಾಡುತ್ತಿದೆ ಮತ್ತು ಸಂಬಂಧಿಸಿದ ಸರಕಾರಗಳು ಬೋಸರಿಗೆ ಸಂಬಂಧಿಸಿದ ಮಾಹಿತಿಯನ್ನು ಇನ್ನೂ ಕೂಡ ರಹಸ್ಯವಾಗಿ ಇಟ್ಟಿವೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಅಂದೊಮ್ಮೆ ರಷ್ಯಾ ನೇತಾಜಿ ಇನ್ನೂ ಬದುಕಿದ್ದಾರೆ ಎಂದಿತ್ತು. ನೆಹರೂ ಸರಕಾರ ಒಂದಷ್ಟು ಮಾತನಾಡಿದ ಬಳಿಕ ರಷ್ಯಾ ಸುಮ್ಮನಾಗಿತ್ತು. 1953ರಲ್ಲಿ ಚೀನಾ ಮೂಲಕ ಭಾರತ ಪ್ರವೇಶಿಸಿದ ಗುಮ್ನಾಮಿ ಬಾಬಾ ಅವರೇ ನೇತಾಜಿ ಅನ್ನುವ ವಾದಗಳಿವೆ. ನೇತಾಜಿ ಸಾವಿನ ಹಿಂದೆ ಸ್ಟಾಲಿನ್, ನೆಹರು, ಮೌಂಟ್ ಬ್ಯಾಟನ್ ಹೀಗೆ ಬೇರೆ ಬೇರೆ ವ್ಯಕ್ತಿಗಳ ಕೈವಾಡವಿದೆ ಅನ್ನುವ ಆರೋಪಗಳಿವೆ. ಅವತ್ತಿನ ಪ್ರಮುಖ ಸಾಕ್ಷಿಯಾಗಿದ್ದ ನೇತಾಜಿಯ ನಿಕಟವರ್ತಿ ಹಬೀಬುರ್ ರೆಹಮಾನರನ್ನು ಉನ್ನತ ಸ್ಥಾನವೊಂದರಲ್ಲಿ ಕುಳ್ಳಿರಿಸಿ ಅವರ ಬಾಯಿ ಮುಚ್ಚಿಸಲಾಯಿತು ಜೊತೆಗೆ ಇಂದಿರಾಗಾಂಧಿ ತನ್ನ ಅಧಿಕಾರ ಕಳೆದುಕೊಳ್ಳುವ ಹಿಂದಿನ ದಿನ ನೇತಾಜಿಗೆ ಸಂಬಂಧಿಸಿದ ಒಂದಷ್ಟು ಕಡತಗಳನ್ನು ನಾಶಮಾಡಿದರು ಎನ್ನುವ ಸುದ್ದಿಗಳೂ ಇವೆ.

ವಾದ ವಿವಾದಗಳೇನೇ ಇರಲಿ. ನೇತಾಜಿಯಂತಹ ಅಪ್ರತಿಮ ವೀರ, ಸ್ವಾತಂತ್ರ್ಯ ಹೋರಾಟಗಾರರ ಅಂತ್ಯ ಹೇಗಾಯಿತು ಅಂದು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಭಾರತೀಯನಿಗಿದ್ದೇ ಇದೆ. ಕಡತಗಳು ಬಹಿರಂಗವಾದರೆ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ಉಂಟಾಗುತ್ತದೆ ಅನ್ನುವ ನೆವನಗಳನ್ನು ನೀಡಲಾಗುತ್ತಿತ್ತು. ಅಂದರೆ ಅಲ್ಲೇನೋ ರಹಸ್ಯ ಇದೆ ಎನ್ನುವುದಂತೂ ಖಚಿತವಾಯಿತಲ್ಲ. ನಮ್ಮದೇ ಜನರ ನಾಡಿಮಿಡಿತಕ್ಕಿಂತ ರಾಜತಾಂತ್ರಿಕ ಸಂಬಂಧಗಳು ಖಂಡಿತಾ ಮುಖ್ಯವಲ್ಲ ಅಂತನ್ನಿಸುತ್ತದೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ಸರಕಾರ ಒಂದಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ ನೇತಾಜಿಯವರು ಸ್ವಾತಂತ್ರ್ಯದ ನಂತರವೂ ಬದುಕಿದ್ದರು ಎನ್ನುವ ಪುರಾವೆಗಳನ್ನು ನೀಡಿತು. ಆದರೆ ಯಾವೊಂದು ವಿಚಾರಗಳು ಸ್ಪಷ್ಟವಾಗುತ್ತಿಲ್ಲ ಅನ್ನುವುದು ಬೇಸರದ ಸಂಗತಿ. ಕೇಂದ್ರ ಸರಕಾರದ ಸುಪರ್ದಿಯಲ್ಲಿ ಮುಚ್ಚಿಟ್ಟಿರುವ ಕಡತಗಳಲ್ಲಿನ ವಿಷಯಗಳೇನೇ ಇದ್ದರೂ ನಾವು ಅದನ್ನು ಒಪ್ಪಿಕೊಳ್ಳಲು ಸಿದ್ಧರಿದ್ಧೇವೆ ಎಂದು ನೇತಾಜಿ ವಂಶಸ್ಥರು ತಿಳಿಸಿಯಾಗಿದೆ. ಇದೀಗ ಭಾರತದ ಭರವಸೆಯ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮುಂದಿನ ನೇತಾಜಿ ಜನ್ಮದಿನದಂದು ಕಡತಗಳನ್ನು ಬಹಿರಂಗಪಡಿಸುವ ಪ್ರಕ್ರಿಯೆ ಆರಂಭಗೊಳ್ಳುವುದೆಂದು ಭರವಸೆಯನ್ನು ನೀಡಿದ್ದಾರೆ. ಅದು ಆರಂಭವಾಗುವುದು ಖಂಡಿತ. ಕುತೂಹಲ ಗರಿಗೆದರುತ್ತಿದೆ. (ಕುಂದಾಪ್ರ ಡಾಟ್ ಕಾಂ ಅಂಕಣ)

ಕೊನೆಗೊಂದು ಮಾತು: ಯಾರೇನೆ ಅಂದರೂ ಮುಚ್ಚಿಟ್ಟ ಕಡತಗಳಲ್ಲಿ ನೇತಾಜಿಯ ವಿರುದ್ಧ ಋಣಾತ್ಮಕ ಅಂಶಗಳಿರಲು ಸಾಧ್ಯವಿಲ್ಲ. ಹಾಗಿದ್ದಿದ್ದರೆ ಅದ್ಯಾವತ್ತೋ ಬಹಿರಂಗವಾಗುತ್ತಿತ್ತು. ನೆಹರೂರವರು ನೇತಾಜಿ ಕುಟುಂಬದ ಮೇಲೆ 20 ವರುಷ ಗೂಢಾಚಾರಿಕೆಯನ್ನು ಮಾಡಬೇಕಿರಲಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಕೀರ್ತಿ ಪ್ರತಿಷ್ಠೆಗಳಿಗಾಗಿ ಅಂತಹ ಮಹಾನ್ ಹೋರಾಟಗಾರನನ್ನು ಏನೂ ಅಲ್ಲವೆಂಬಂತೆ ಬಿಂಬಿಸಲು ಹೊರಟವರ ಸಣ್ಣತನಕ್ಕೆ ನಿಜಕ್ಕೂ ಅಸಹ್ಯ ಅನ್ನಿಸುತ್ತೆ. ಸ್ವಾತಂತ್ರ್ಯದ ಬಳಿಕ ಅವರೊಬ್ಬರು ಭಾರತದ ಆಡಳಿತಕ್ಕೆ ಬೇಕಿತ್ತು. ಏನಂತೀರಿ?

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]

Leave a Reply