ಪುರ್ಸ ಕಟ್ಟುನ ಸಾಕ್ಷ್ಯಚಿತ್ರ ಜೈಪುರ ಚಲನಚಿತ್ರೋತ್ಸವಕ್ಕೆ ಆಯ್ಕೆ

Call us

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಡಾ.ಸುಂದರ ಕೇನಾಜೆ ಚಿತ್ರಕತೆ-ನಿರ್ದೇಶನ, ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಇವರು ನಿರ್ಮಾಪಕರಾಗಿರುವ “ಪುರ್ಸ ಕಟ್ಟುನ, ಇನಿ- ಕೋಡೆ- ಎಲ್ಲೆ” ಸಾಕ್ಷ್ಯಚಿತ್ರ ಮತ್ತೆ ಇನ್ನೊಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

Call us

Click Here

Click here

Click Here

Call us

Visit Now

Click here

ಭಾಗವಹಿಸಿದ 82 ದೇಶಗಳ 2971 ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳಲ್ಲಿ 326 ರಲ್ಲಿ ಒಂದಾಗಿ ಆಯ್ಕೆಯಾದ ಇದು ಈ ಚಲನಚಿತ್ರೋತ್ಸವದ ಇತಿಹಾಸದಲ್ಲೇ ಅತೀ ಹೆಚ್ಚು ಭಾಗವಹಿದ ದಾಖಲೆಯಲ್ಲಿ ಅರ್ಹತೆ ಪಡೆದಿದೆ. ಈ ಬಾರಿ ಇದು ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಅರ್ಹತೆ ಪಡೆದಿದೆ.

ಇದೇ ಫೆಬ್ರವರಿ 11ರಿಂದ 15 ವರೆಗೆ ಈ ಚಲನಚಿತ್ರೋತ್ಸವವು ರಾಜಸ್ಥಾನದ ಜೈಪುರದಲ್ಲಿ ನಡೆಯಲಿದ್ದು ಜೈಪುರದ ನಾನಾ ಕಡೆ ಇದರ ಪ್ರದರ್ಶನ, ಚರ್ಚೆ, ಸಂವಾದಗಳೂ ನಡೆಯಲಿವೆ. ಜೈಪುರ ಸಾಹಿತ್ಯೋತ್ಸವದ ನಂತರ ಈ ಚಲನಚಿತ್ರೋತ್ಸವ ನಡೆಯಲಿದೆ.

ಈ ಸಾಕ್ಷ್ಯ ಚಿತ್ರವನ್ನು ವಿಕಿಮೀಡಿಯ ಪೌಂಢೇಶನ್, CIS A2K ಮತ್ತು ಕರಾವಳಿ ವಿಕಿಮೀಡಿಯನ್ ಯೂಸರ್ಸ್ ಗ್ರೂಪ್ನ ಸಹಕಾರದಿಂದ ತಯಾರಿಸಲಾಗಿ ಅಂತರಜಾಲಕ್ಕೆ ಬಿಡುಗಡೆ ಮಾಡಲಾಗಿದೆ, ಇದು ಈಗಾಗಲೇ ತ್ರಿಶೂರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಅರ್ಹತೆ ಪಡೆದು 5 ದಿನಗಳ ಕಾಲ ಪ್ರದರ್ಶನ, ಗೋಷ್ಠಿ, ಚರ್ಚೆಗಳಿಗೆ ಒಳಪಟ್ಟಿತು ಈ ಗೋಷ್ಠಿಗಳಲ್ಲಿ ನಿರ್ದೇಶಕರಾದ ಡಾ.ಸುಂದರ ಕೇನಾಜೆ ಭಾಗವಹಿಸಿ ವಿಚಾರ ಮಂಡಿಸಿದ್ದರು ಎಂದು ನಿರ್ಮಾಪಕರಾದ ಭರತೇಶ ಅಲಸಂಡೆಮಜಲು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

10 − four =