ಕಠಿಣ ಪರಶ್ರಮ ಶೃದ್ದೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾದ್ಯ: ಉದಯ ಕುಮಾರ್ ಶೆಟ್ಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಛಾಯಾಗ್ರಹಣ ಅನ್ನುವತ್ತದ್ದು ಒಂದು ಅದ್ಬುತ ಕಲೆ ಕಠಿಣ ಪರಶ್ರಮ ಶೃದ್ದೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾದ್ಯ ಜೀವನದಲ್ಲಿ ನಿರಾಶಾವಾದಕ್ಕೆ ಆಸ್ಪದ ನೀಡಬಾರದು ಎಂದು ಉದ್ಯಮಿ ಕಿದಿಯೂರು ಉದಯಕುಮಾರ್ ಶೆಟ್ಟಿ ಹೇಳಿದರು.

Call us

Click Here

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ – ಉಡುಪಿ ಇದರ ಕುಂದಾಪುರ, ಬೈಂದೂರು ವಲಯದ ವತಿಯಿಂದ ಬೈಂದೂರಿನ ತಗ್ಗರ್ಸೆ ರೈತಮಿತ್ರ ಇಲ್ಲಿ ಆಯೋಜಿಸಿದ ಛಾಯಾ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಗ್ಗೆ ಹಿಂದೆ ತಿಳಿದಿದ್ದೆ ಆದರೆ ಇಂದು ಈ ಕಾರ್ಯಕ್ರಮದ ಮೂಲಕ ಅದರ ವಿರಾಟ ರೂಪ ನೋಡುವ ಸೌಭಾಗ್ಯ ಒದಗಿದೆ. ಸಂಸ್ಥೆ ಇಷ್ಟೊಂದು ದೊಟ್ಟಮಟ್ಟಕ್ಕೆ ಬೆಳೆಯಬೇಕಾದರೆ ಇದರ ಹಿಂದೇ ಸಾಕಷ್ಟು ಜನರ ಪರಿಶ್ರಮವಿದೆ ಸಂಘಟನೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾದ್ಯ ಎಂದರು.

ಕಾರ್ಯಕ್ರಮದ ಪದ್ಮಪ್ರಸಾದ್ ಜೈನ್ ಎಸ.ಕೆ.ಪಿ.ಎ,ದ.ಕ-ಉಡುಪಿ ಜಿಲ್ಲೆ ಇವರು ವಹಿಸಿದ್ದರು. ಕುಂದಾಪುರ ಬೈಂದೂರು ವಲಯದ ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಉಪ್ಪುಂದ, ಕಾರ್ಯದರ್ಶಿಯಾಗಿ ದಿನೇಶ್ ರಾಯಪ್ಪನ ಮಠ, ಕೋಶಾಧಿಕಾರಿಯಾಗಿ ಹರೀಶ್ ಪೂಜಾರಿ ಹಂಗಳೂರು ಇವರು ಅಧಿಕಾರ ಸ್ವೀಕರಿಸಿದರು.

ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಕೊಳಲು ವಾದನದ ಮೂಲಕ ತನ್ನ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡಿದ ಮಾ| ಶಾಮ್ ಜಿ.ಎಸ್.ಪೂಜಾರಿ ಮತ್ತು ಕಂಬಳ ಕ್ಷೇತ್ರದ ಯುವಪ್ರತಿಭೆ ಕು| ಚೈತ್ರಾ ಪರಮೇಶ್ವರ ಭಟ್ ಇವರಿಗೆ ಸನ್ಮಾನಿಸಲಾಯಿತು.

ಛಾಯಾಚಿತ್ರ ಸ್ಪರ್ದೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ =. ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ನಡೆದ ಕಂಬಳದಲ್ಲಿ ಕುಂದಾಪುರ-ಬೈಂದೂರು ವಲಯದಿಂದ ಆಯೋಜಿಸಿದ ಛಾಯಾಚಿತ್ರ ಸ್ಪರ್ದೆಯ ವಿಜೇತರಿಗೆ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷರು ಬೈಂದೂರು ತಾಲೂಕು ರೈತ ಸಂಘ ಬಹುಮಾನ ವಿತರಿಸಿ ಮಾತನಾಡಿದರು.

Click here

Click here

Click here

Click Here

Call us

Call us

ಈ ಸಂದರ್ಭದಲ್ಲಿ ರೋ| ಪ್ರಸಾದ ಪ್ರಭು ಅಧ್ಯಕ್ಷರು ರೋಟರಿ ಕ್ಲಬ್ ಬೈಂದೂರು, ಲ| ಗಿರೀಶ್ ಶ್ಯಾನುಭಾಗ್ ಅಧ್ಯಕ್ಷರು ಲಯನ್ಸ್ ಕ್ಲಬ್ ಬೈಂದೂರು-ಉಪ್ಪುಂದ,ಆನಂದ ಎನ್ ಬಂಟ್ವಾಳ ಅಧ್ಯಕ್ಷರು ಜಿಲ್ಲಾ ಕಟ್ಟಡ ಸಮಿತಿ ಎಸ್.ಕೆ.ಪಿ.ಎ.ದ.ಕ-ಉಡುಪಿ ಜಿಲ್ಲೆ,ದಯಾನಂದ ಬಂಟ್ವಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪಿ.ಎ,ವಾಸುದೇವ ರಾವ್ ಅಧ್ಯಕ್ಷರು ಎಸ್.ಕೆ.ಪಿ.ಎ. ವಿ.ಸ.ಸಂ.ನಿ ದ.ಕ-ಉಡುಪಿ ಜಿಲ್ಲೆ,ಗಿರೀಶ್ ಜಿ.ಕೆ ಅಧ್ಯಕ್ಷರು ಛಾಯಾಗ್ರಾಹಕರ ವಿವಿಧೋದ್ದೇಶ ಸ.ಸಂ.ನಿ ಕುಂದಾಪುರ, ನಾಗರಾಜ್ ರಾಯಪ್ಪನ ಮಠ ಅಧ್ಯಕ್ಷರು ಕುಂದಾಪುರ ತಾ. ಕಾರ್ಯನಿರತ ಪತ್ರಕರ್ತರ ಸಂಘ,ಗಣೇಶ್ ಬೆನಕ ನಿರ್ದೇಶಕರು ಎಸ್.ಕೆ.ಪಿ.ಎ.ವಿವಿಧೋದ್ದೇಶ ಸ.ಸಂ.ನಿ ದ.ಕ-ಉಡುಪಿ ಜಿಲ್ಲೆ,ರಂಜಿತ್ ಶಬರಿ ಜಿಲ್ಲಾ ಕ್ರೀಡಾ ಕಾರ್ಯದರ್ಶಿ,ದೊಟ್ಟಯ್ಯ ಪೂಜಾರಿ ಅದ್ಯಕ್ಷರು ಎಸ್.ಕೆ.ಪಿ.ಎ ಕುಂದಾಪು,ಬೈಂದೂರು ವಲಯ,ಶ್ರೀಧರ ಹೆಗ್ಡೆ ಗೌರವಾಧ್ಯಕ್ಷರು ಕುಂದಾಪುರ, ಬೈಂದೂರು ವಲಯ,ಸುರೇಶ್ ಜಮದಗ್ನಿ ಪ್ರಧಾನ ಕಾರ್ಯದರ್ಶಿ ಕುಂದಾಪುರ ಬೈಂದೂರು ವಲಯ, ದಿನೇಶ್ ಗೋಡೆ ಅಧ್ಯಕ್ಷರು ಸಲಹಾ ಸಮಿತಿ,ವಿಠಲ ಕೋಶಾಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.

ರಾಘು ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು,ಗೀತಾ ಬೈಂದೂರು ಪ್ರಾರ್ಥಿಸಿದರು,ದಿವಾಕರ ಶೆಟ್ಟಿ ಉಪ್ಪುಂದ ಸ್ವಾಗತಿಸಿದರು,ಹರೀಶ್ ಪೂಜಾರಿ ಹಂಗಳೂರು ವಂದಿಸಿದರು.

Leave a Reply